ಮಡಿಕೇರಿ, ಆ. 17: ರಾಜ್ಯ ಸರಕಾರವು ಪೌರ ಕಾರ್ಮಿಕರಲ್ಲಿ ತಾರತಮ್ಯ ಮಾಡದೆ, ಕರ್ತವ್ಯ ನಿರತ ಎಲ್ಲಾ ನೌಕರರನ್ನು ಖಾಯಂಗೊಳಿ ಸುವಂತೆ ಇಲ್ಲಿನ ಸ್ವಚ್ಛತಾ ಸಿಬ್ಬಂದಿ ಸರಕಾರವನ್ನು ಆಗ್ರಹಿಸಿದೆ.

ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಪೌರ ಕಾರ್ಮಿಕರ ಮುಖಂಡ ನಾಗಣ್ಣ ಮಾತನಾಡಿ, ರಾಜ್ಯ ಸರಕಾರಕ್ಕೆ ಪ್ರಮುಖ ಮೂರು ಬೇಡಿಕೆಯನ್ನು ಮುಂದಿಟ್ಟರು. ಎಲ್ಲಾ ನೌಕರರ ಖಾಯಮಾತಿಯೊಂದಿಗೆ ಸಕಾಲದಲ್ಲಿ ವೇತನ ಪಾವತಿ ಮತ್ತು ನಿವೇಶನ ಕಲ್ಪಿಸುವಂತೆ ಆಗ್ರಹಿಸಿದರು.

ಈ ಸಂಬಂಧ ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಲ್ಲಾ ಪೌರ ಕಾರ್ಮಿಕರ ಸಮಾವೇಶ ನಡೆಸುವದ ರೊಂದಿಗೆ ಸರಕಾರದ ಗಮನ ಸೆಳೆಯುವದಾಗಿ ಘೋಷಿಸಿದರು.

ಸಮಾವೇಶದಲ್ಲಿ ಜಿಲ್ಲಾ ಮುಖಂಡ ಸುರೇಶ್ ಬಾಬು, ಪರಶುರಾಮ, ತಿಪ್ಪಣ್ಣ ಸೇರಿದಂತೆ ಮೂರು ತಾಲೂಕಿನ ಪೌರ ಕಾರ್ಮಿಕರ ಸಂಘದ ಪದಾಧಿಕಾರಿ ಗಳು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.