ಚೆಟ್ಟಳ್ಳಿ, ಆ. 17: ಮೈಸೂರು ಗ್ರಾವೆಲ್ ಫೆಸ್ಟ್-2017ನಲ್ಲಿ ಕೊಡಗಿನ ಯುವ ರ್ಯಾಲಿಪಟು ಕೊಂಗೇಟಿರ ಬೋಪಯ್ಯ ತನ್ನ ಉತ್ತಮ ಪ್ರದರ್ಶನವನ್ನು ತೋರಿಸುವ ಮೂಲಕ ಹಲವು ವಿಭಾಗಗಳಲ್ಲಿ ಗೆಲುವನ್ನು ಸಾಧಿಸಿದ್ದಲ್ಲದೆ ಓವರಾಲ್ ಫಾಸ್ಟೆಸ್ಟ್ ಡ್ರೈವರ್ ಆಫ್ದ ಈವೆಂಟ್ ಹೆಗ್ಗಳಿಕೆ ಪಡೆದಿದ್ದಾರೆ.
ಮೈಸೂರಿನ ಲಲಿತಮಹಲ್ ಪ್ಯಾಲೇಸ್ನ ಸಮೀಪದ ಎಲಿಪೇಡ್ನ ಹತ್ತಿರದ ಮೈಧಾನದಲ್ಲಿ ಆಟೋ ಮೋಟಿವ್ ಸ್ಪೋಡ್ಸ್ ಕ್ಲಬ್ ಆಫ್ ಮೈಸೂರು ಆಯೋಜಿತ ಗ್ರಾವೆಲ್ ಫೆಸ್ಟ್-2017 ರ್ಯಾಲಿಯಲ್ಲಿ 7 ವಿಭಾಗವನ್ನು ಮಾಡಲಾಗಿ ಕರ್ನಾಟಕ ಅಲ್ಲದೆ ಕೇರಳದಿಂದಲೂ 140 ರ್ಯಾಲಿ ಪಟುಗಳು ಭಾಗವಹಿಸಿದ್ದರು.
ಕೊಡಗಿನಿಂದ ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ, ಐಚೆಟ್ಟಿರ ನಾಣಯ್ಯ, ಕೊಂಗಂಡ ಗಗನ್ ಕರುಂಬಯ್ಯ, ಡೆನ್ನ್ ತಿಮ್ಮಯ್ಯ, ಅಮ್ರತ್ ತಿಮ್ಮಯ್ಯ, ದರ್ಶನ್ ನಾಚಪ್ಪ, ಸೂರಜ್ ಮಂದಣ್ಣ, ಆಶಿಶ್ ಮುತ್ತಪ್ಪ, ಆದಿತ್ಯ ಕೆ.ಹೆಚ್, ಬಬನ್ಖಾನ್, ಸುಹೇಮ್ ಕಬೀರ್ ನವರು ಭಾಗವಹಿಸಿದರು. ಕೊಂಗೇಟಿರ ಬೋಪಯ್ಯ ಇಂಡಿಯನ್ ಓಪನ್ನಲ್ಲಿ ಹಾಗೂ ಅನ್ರಿಸ್ಟಿಕ್ಟೆಡ್ಕ್ಲಾಸ್ನಲ್ಲಿ ಮೊದಲನೇ ಸ್ಥಾನ, 1600ಸಿಸಿಯಲ್ಲಿ ಎರಡನೇ ಸ್ಥಾನ, ಓವರಾಲ್ ಫಾಸ್ಟ್ ಡ್ರೈವರ್ ಆಫ್ದ ಈವೆಂಟ್ನ್ನು ಪಡೆದು 1 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿದ್ದಾರೆ.
ಸುಹೇಮ್ ಕಬೀರ್ ಎಸುವಿ ಕಾಸ್ನಲ್ಲಿ 1ನೇ ಸ್ಥಾನ, ಐಚೆಟ್ಟಿರ ನಾಣಯ್ಯ 2ನೇ ಸ್ಥಾನ, ಕೊಂಗಂಡ ಗಗನ್ ಕರುಂಬಯ್ಯ 3ನೇ ಸ್ಥಾನವನ್ನು, ಹಿರಿಯ ರ್ಯಾಲಿ ಪಟು ಡೆನ್ನ್ ತಿಮ್ಮಯ್ಯ ಇಂಡಿಯನ್ ಓಪನ್ನಲ್ಲಿ 3ನೇ ಸ್ಥಾನ, ಬಬನ್ಖಾನ್ 1100ಯವರೆಗೆ 2ನೇ ಸ್ಥಾನ, ಪಡೆದಿದ್ದಾರೆ.
ಪ್ರತೀ ವಿಭಾಗದಲ್ಲೂ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗಿತ್ತು.