ಮಡಿಕೇರಿ. ಆ.16 - ದೇಶಭಕ್ತಿ ಬಿಂಬಿಸುವ ಸಾಕಷ್ಟು ಗೀತೆಗಳೊಂದಿಗೆ ಮೂಡಿಬಂದ ವಂದೇಮಾತರಂ ಸಂಗೀತ ಸಂಜೆ , ರಾಷ್ಟ್ರಭಕ್ತಿ ಸಂಬಂಧಿತ ಹಾಡುಗಳೊಂದಿಗೆ ಭಾರತ ಮಾತೆಯ ಬಗೆಗಿನ ಅಭಿಮಾನ ಜಾಗೃತಗೊಳಿಸ ನಿಟ್ಟಿನಲ್ಲಿ ಅರ್ಥಪೂರ್ಣವೆನಿಸಿತು.ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ವಂದೇಮಾತರಂ ದೇಶಭಕ್ತಿಗೀತೆಗಳ ಕಾರ್ಯಕ್ರಮ ಭಾರತಾಂಬೆಗೆ ಸಂಗೀತ ಗಾಯನದ ಮೂಲಕ ನಮನ ಸಲ್ಲಿಸುವ ವಿನೂತನ ಕಾರ್ಯಕ್ರಮವಾಗಿ ಮೂಡಿಬಂದಿತು. ವೀರಸೈನಿಕರನ್ನು ಸ್ಮರಿಸುವದರೊಂದಿಗೆ ಅವರಿಗೆ ಗೌರವ ಸೂಚಿಸುವ ಹಾಡುಗಳೂ ವಂದೇ ಮಾತರಂನಲ್ಲಿ ಮೂಡಿಬಂದವು.

ಹೆಸರಾಂತ ಗಾಯಕ ರವಿಮುರೂರು ನೇತೃತ್ವದಲ್ಲಿ ಯುವ ಗಾಯಕರಾದ ಮಹೇಶ್ ಆಚಾರ್ಯ, ಅಮೂಲ್ಯ 17 ಹಾಡುಗಳಿಗೆ ದನಿಯಾದರು. ದಿಲ್ಜಲೆ ಚಿತ್ರದ ‘ಮೇರ ಮುಲ್ಕ್ ಮೇರಾ ದೇಶ್’ ಮೂಲಕ ಪ್ರಾರಂಭವಾದ ಸಂಗೀತ ಸಂಜೆಯಲ್ಲಿ ಅಮೂಲ್ಯ ಹಾಡಿದ ಫನಾ ಚಿತ್ರದ ದೇಸ್ ರಂಗೀಲಾ, ಪರದೇಶ್ ಚಿತ್ರದ ‘ಐ ಲವ್ ಮೈ ಇಂಡಿಯಾ’ ಏ ಮೇರೇ ವತನ್ ಕೆ ಲೋಗೋ ಹಾಡುಗಳು ಭಾವನಾತ್ನಕತೆಯ ಮೂಲಕ ಮನಮುಟ್ಟಿದರೆ, ರವಿಮುರೂರು ಕಂಠಸಿರಿಯೆಲ್ಲಿ ಪ್ರಸ್ತುತವಾದ ಎಸ್.ಎಲ್.ಎನ್. ಭಟ್ ಕವಿತೆಯ ಸರಿದೀತೆ ಕಾರಿರುಳು, ಸಫೆರ್Çೀಶ್ ಚಿತ್ರದ ಜಿಂದಗಿ ಮೌತ್ ನ ಬನ್ ಜಾಯೆ, ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರದ ಸಫೆರ್Çೀಶ್ ಕಿ ತಮನ್ನಾ ಹಾಡು ಗಮನ ಸೆಳೆಯಿತು. ಮಹೇಶ್ ಆಚಾರ್ಯ ಅಮೃತಘಳಿಗೆ ಚಿತ್ರದ ಹಿಂದುಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು, ಕಾವೇರಿ ಚಿತ್ರದ ಈ ದೇಶ ಚೆನ್ನ, ಈ ಮಣ್ಣು ಚೆನ್ನದ ಮೂಲಕ ಕೇಳುಗರನ್ನು ರಂಜಿಸಿದರು. ರವಿಮುರೂರು, ಮಹೇಶ್ ಆಚಾರ್ಯ ಮತ್ತು ಅಮೂಲ್ಯ ಸಮೂಹಗೀತೆಯಾಗಿ ಹಾಡಿದ ರೋಜಾ ಚಿತ್ರದ ಭಾರತ್ ಹಮ್ಕೋ ಜಾನ್ ಸೇ, ಎ.ಆರ್. ರೆಹಮಾನ್ ರಚನೆಯ ಮಾ ತುಜೇ ಸಲಾಂ, ಮಹಮ್ಮದ್ ಇಕ್ಬಾಲ್ ರಚನೆಯ ಸಾರೇ ಜಹಾಂಸೇ ಅಚ್ಚಾ ಹಾಡುಗಳು ಪ್ರೇಕ್ಷಕರಲ್ಲಿ ದೇಶಭಕ್ತಿಯ ರೋಮಾಂಚನ ಉಂಟುಮಾಡುವಲ್ಲಿ ಯಶಸ್ವಿಯಾದವು. ಕಾರ್ಯಕ್ರಮದ ಕೊನೆಯಲ್ಲಿ ಮೂವರು ಗಾಯಕರು ದÀನಿಗೂಡಿಸಿದ ವಂದೇಮಾತರಂ ಹಾಡಿಗೆ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಭಾರತಾಂಬೆಗೆ