ವಿಶೇಷ ವರದಿ: ಅಂಚೆಮನೆ ಸುಧಿ

*ಸಿದ್ದಾಪುರ, ಆ.18: ಕಾಫಿ ನಾಡು ಕೊಡಗು ಜಿಲ್ಲೆಯಲ್ಲಿ ಈ ಉದ್ಯಮದ ಚೇತರಿಕೆಗೆ ಅಥವಾ ಉತ್ತೇಜನಕ್ಕೆ ಪೂರಕವಾದ ವ್ಯವಸ್ಥೆ ಗಳು ಇನ್ನೂ ಅಭಿವೃದ್ಧಿ ಯಾಗಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶ: ಆದಾಯಕ್ಕೆ ಮಾತ್ರ ಸೀಮಿತರಾಗಿ, ಉದ್ಯಮದ ಆಚೆಗೆ ನೋಡಲು ಸಮಯವಿಲ್ಲದ ಬೆಳೆಗಾರರ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ಇದೀಗ ಕೊಡಗಿನಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆಗೆ ಹಸಿರು ನಿಶಾನೆ ಸಿಕ್ಕಿದ್ದರೂ, ಎಲ್ಲಿ ಆರಂಭಿಸಬೇಕೆಂಬ ಬಗ್ಗೆ ಜಿಜ್ಞಾಸೆಗಳಿಗೆ ಅಂತ್ಯ ಸಿಕ್ಕಿಲ್ಲ.

ಚೆಟ್ಟಳ್ಳಿಯು ಇಂದು ವಿಶ್ವಖ್ಯಾತಿ ಯಾಗಿ ಗಮನ ಸೆಳೆಯುತ್ತಿದೆ ಯೆಂದರೆ, ಅದಕ್ಕೆ ಕಾರಣ ಎರಡು. ಒಂದು ಕಾಫಿ ಸಂಶೋಧನಾ ಕೇಂದ್ರ, ಮತ್ತೊಂದು ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ. ಪ್ರತಿಭಾವಂತ ವಿಜ್ಞಾನಿಗಳಿರುವ ಈ ಎರಡೂ ಸಂಸ್ಥೆಗಳಿಂದ ಕಾಲಕಾಲಕ್ಕೆ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. 1947ರಲ್ಲಿ ಸ್ಥಾಪನೆಯಾದ ಕಾಫಿ ಸಂಶೋಧನಾ ಕೇಂದ್ರ ಇಂದು ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿದೆ. ನೇರವಾಗಿ ಹೇಳಬೇಕೆಂದರೆ, ಕಾಫಿ ಮ್ಯೂಸಿಯಂ ಸ್ಥಾಪಿಸಲು, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರಕ್ಕಿಂತ ಪ್ರಶಸ್ತವಾದ ಜಾಗ ಕೊಡಗಿನ ಬೇರೆ ಎಲ್ಲೂ ಇಲ್ಲ. ಈ ಬಗ್ಗೆ ಈಗಾಗಲೇ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಬಲವಾದ ಒತ್ತಾಯ ಮಾಡಿರುವದನ್ನು ಇಲ್ಲಿ ಸ್ಮರಿಸಬಹುದು.

ಸುಮಾರು 300 ಎಕರೆಗೂ ಮಿಕ್ಕಿ ಕಾಫಿ ತೋಟವಿರುವ ಕಾಫಿ ಸಂಶೋಧನಾ ಕೇಂದ್ರದಲ್ಲಿ ಅಪಾರ ಸಂಖ್ಯೆಯ ಕಟ್ಟಡ ಸಮುಚ್ಛಯಗಳಿವೆ. ಅಗತ್ಯಕ್ಕೆ ತಕ್ಕ ವಿಜ್ಞಾನಿಗಳು, ಹೇರಳ ಸಂಖ್ಯೆಯ ಕಾರ್ಮಿಕ ವರ್ಗ ಮತ್ತು ಸಿಬ್ಬಂದಿಗಳೂ ಇದ್ದಾರೆ. ಕಾಫಿ ಸಂಶೋಧನಾ ಕೇಂದ್ರದ ವಿಸ್ತøತ ಭಾಗವಾಗಿ, ಇದೇ ಜಾಗದಲ್ಲಿ ಮ್ಯೂಸಿಯಂ ಸ್ಥಾಪಿಸುವದು ಎಲ್ಲಾ ದೃಷ್ಟಿಕೋನಗಳಿಂದಲೂ ಪೂರಕ ವಾಗಿದೆ.

ಸಾಮಾನ್ಯವಾಗಿ ಮ್ಯೂಸಿಯಂ ಗಳು, ನಗರ ಪ್ರದೇಶಗಳಲ್ಲಿ ಇದ್ದರೆ ವೀಕ್ಷಣೆಗೆ, ಅಗತ್ಯ ಸಂಪರ್ಕಕ್ಕೆ ಅನುಕೂಲ ಎಂಬ ವಾದಗಳಿದ್ದರೂ, ನಗರದ ಜಂಜಡ ವಾತಾವರಣದಲ್ಲಿ ಮತ್ತು ಅಗತ್ಯ ಸೌಲಭ್ಯಗಳ ಕೊರತೆಯಲ್ಲಿ ಮ್ಯೂಸಿಯಂ ಸ್ಥಾಪನೆ ಕಷ್ಟಕರವಾದುದು. ಚೆಟ್ಟಳ್ಳಿಯ ಎರಡೂ ಸಂಶೋಧನಾ ಕೇಂದ್ರಗಳಿಗೆ ವಿಜ್ಞಾನಿಗಳು, ತಜ್ಞರು, ಆಸಕ್ತರು, ಸಂಶೋಧನಾರ್ಥಿಗಳು ಮತ್ತು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸ್ಥಾಪನೆಗೆ ಪೂರಕವಾದ ಸೌಲಭ್ಯಗಳು ಈಗಾಗಲೇ ಅಸ್ತಿತ್ವದಲ್ಲಿವೆ.

ರೂ. 60 ಕೋಟಿ ಹಣದಲ್ಲಿ ಮಡಿಕೇರಿಯಲ್ಲೇ ಮ್ಯೂಸಿಯಂ ಸ್ಥಾಪನೆಯಾಗಬೇಕೆಂದರೆ, ಇನ್ನಷ್ಟು ವರ್ಷಗಳು ಕಾಯಲೇಬೇಕಿದೆ. ಕಟ್ಟಡಗಳು, ಸಿಬ್ಬಂದಿ ನೇಮಕ, ಮೂಲಭೂತ ಸೌಲಭ್ಯಗಳ ಅಳವಡಿಕೆಗೆ ಮತ್ತಷ್ಟು ಸಮಯಾವಕಾಶ ಹಿಡಿಯುವದರಲ್ಲಿ ಸಂದೇಹವಿಲ್ಲ. ಅದರಲ್ಲೂ ಅಧಿಕಾರಶಾಹಿಯ ವಿಳಂಬ ನೀತಿಯ ಮಧ್ಯೆ, ಈ ಯೋಜನೆ ಸದ್ಯಕ್ಕೆ ಚಾಲನೆಗೊಳ್ಳುವದು ಶಂಕಾಸ್ಪದ.

ಈ ಕಾರಣದಿಂದ, ಚೆಟ್ಟಳ್ಳಿಯಲ್ಲಿರುವ ಸಂಪÀನ್ಮೂಲಗಳನ್ನೇ ಬಳಸಿಕೊಂಡು ಸುಸಜ್ಜಿತ ಕಾಫಿ ಮ್ಯೂಸಿಯಂನ್ನು ಅಲ್ಲೇ ಸ್ಥಾಪಿಸಲು ಯಾವದೇ ವಿರೋಧಕ್ಕೆ ಕಾರಣವಾಗದು. ಈ ಬಗ್ಗೆ ಈಗಾಗಲೇ ಚೆಟ್ಟಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘವು, ಕಾಫಿ ಸಂಶೋಧನಾ ಸಂಸ್ಥೆಯ ಅಧಿಕಾರಿ ಗೋಪಾಲ್ ಅವರ ಮೂಲಕ, ಕೇಂದ್ರ ಸರ್ಕಾರಕ್ಕೆ ಮನವಿ ಕೂಡಾ ಸಲ್ಲಿಸಿದೆ. ಸದÀ್ಯದಲ್ಲೇ ಸಂಸದರ ಮೂಲಕವೂ ಒತ್ತಡ ಹೇರಲು ನಿರ್ಧರಿಸಲಾಗಿದೆ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ನಿರ್ದೇಶಕರಾದ ನೂಜಿಬೈಲು ನಾಣಯ್ಯ, ಮರದಾಳು ಉಲ್ಲಾಸ, ಪೇರಿಯನ ಪೂಣಚ್ಚ, ಕಣಂಜಾಲು ಪೂವಯ್ಯ ಅವರುಗಳು ಮನವಿ ಸಲ್ಲಿಸಿದ್ದಾರೆ.