ಪಾಲಿಬೆಟ್ಟ: ಪಾಲಿಬೆಟ್ಟದ ಮುಹಿಮ್ಮಾತುದ್ದೀನ್ ಅರಬಿ ಮದ್ರಸದಲ್ಲಿ ನಡೆದ ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷ ಸಿ.ಎಂ. ಜಬ್ಬಾರ್ ಧ್ವಜಾರೋಹಣ ಮಾಡಿದರು. ಮಸೀದಿಯ ಧರ್ಮಗುರು ಅಲಿ ಸಖಾಫಿ, ಮದ್ರಸದ ಅಧ್ಯಾಪಕವೃಂದ ಹಾಗೂ ಜಮಾಅತ್ ಪದಾಧಿಕಾರಿಗಳು ಹಾಜರಿದ್ದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.ಜ್ಞಾನಜ್ಯೋತಿ ವಿದ್ಯಾಸಂಸ್ಥೆ: ಮೂರ್ನಾಡು-ಕೋಡಂಬೂರು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ವಿದ್ಯಾಸಂಸ್ಥೆ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ಧ್ವಜಾರೋಹಣ ಗೈದರು. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಕಿ ಬಿಂದು, ಶಾಲಿನಿ ಹಾಗೂ ಸ್ಮಿತಾ ದಿನದ ಮಹತ್ವದ ಕುರಿತು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಭಾಷಣ, ದೇಶಭಕ್ತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ವಿದ್ಯಾರ್ಥಿ ಸಂಜನಾ ಪ್ರಾರ್ಥಿಸಿ, ತೀರ್ಥ ತಂಗಮ್ಮ ಸ್ವಾಗತಿಸಿ, ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಲಿಖಿತ ವಂದಿಸಿದರು.

ಹೊಸೂರು: ಹೊಸೂರು ಗ್ರಾಮ ಪಂಚಾಯಿತಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶೇ. 25 ನಿಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 95 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ.ಹಿ.ಪ್ರಾ. ಶಾಲೆ ಮಕ್ಕಳಿಗೆ ವಿತರಿಸಲಾಯಿತು. ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಪಿ.ಯು.ಸಿ. ಪದವಿ, ಸ್ನಾತ್ತಕೋತ್ತರ ಪದವಿಯ 32 ವಿದ್ಯಾರ್ಥಿಗಳಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು.

ಈ ಸಂದರ್ಭ ಮತಾನಾಡಿದ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಗೋಪಿ ಚಿಣ್ಣಪ್ಪ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಉನ್ನತ ವ್ಯಾಸಂಗವನ್ನು ಮಾಡಿ ಉನ್ನತ ಹುದ್ದೆಯನ್ನು ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು. ನಂತರ ಮಾತನಾಡಿದ ಊರಿನ ಪ್ರಮುಖ ಸುಭಾಷ್ ಭೀಮಯ್ಯ, ತಮ್ಮ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಇಷ್ಟೊಂದು ಸವಲತ್ತುಗಳು ಸಿಗುತ್ತಿರಲಿಲ್ಲ. ಆದ್ದರಿಂದ ಈಗ ಲಭ್ಯವಿರುವ ಸವಲತ್ತುಗಳು ಸದ್ವಿನಿಯೋಗವಾಗಲಿ ಎಂದು ಹಾರೈಸಿದರು. ಸಭೆಯಲ್ಲಿ ಸದಾ ಅಪ್ಪಚ್ಚು, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪಿ.ಡಿ.ಓ. ಶ್ರೀನಿವಾಸ್‍ಗೌಡ ಹಾಜರಿದ್ದರು.ಸಾಂಪ್ರದಾಯಿಕ ಮೆರುಗು: ನವದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ಉಡುಗೆಗಳೊಂದಿಗೆ ದೆಹಲಿ ಕನ್ನಡ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಕನ್ನಡ ಭವನದ ಸಿಬ್ಬಂದಿ ವರ್ಗವು ಸಕ್ರಿಯವಾಗಿ ಭಾಗವಹಿಸಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕೆಂಪು ಕೋಟೆಯ ಧ್ವಜಾರೋಹಣಕ್ಕೆ ಸಾಕ್ಷಿಯಾದರು.

ಆಯಾ ರಾಜ್ಯದ ಸಾಂಪ್ರದಾಯಿಕ ಉಡುಗೆಯ ನಡುವೆ ಕನ್ನಡಿಗರ ಸಾಂಪ್ರದಾಯಿಕ ಪಂಚೆ, ಶಲ್ಯ, ಮಗ್ಗದ ಸೀರೆ, ಲಂಗ-ದಾವಣಿ ನೆರೆದವರ ಆಕರ್ಷಣೆಗೆ ಕಾರಣವಾಯಿತು. ಕರ್ನಾಟಕ ಭವನದ ನೋಡಲ್ ಅಧಿಕಾರಿ ಆರ್. ರೇಣುಕುಮಾರ್, ಬಿ. ನಾರಾಯಣ ಕಾರ್ಯಕ್ರಮದ ಸಂಯೋಜಕರಾಗಿದ್ದರು. ದೆಹಲಿ ಕನ್ನಡ ಶಾಲೆಯ ಶಿಕ್ಷಕ ಅರವಿಂದ ಬಿಜೈ, ಪ್ರೇಮಲತಾ, ಪ್ರಶಾಂತ್ ಕುಮಾರ್, ಗಣೇಶ್ ಹೆಗಡೆ, ಜ್ಯೋತಿ ಎಸ್. ಪೊದ್ದಾರ್ ಸಹಕರಿಸಿದರು.ಚಾಮಿಯಾಲ: ಪೊನ್ನಂಪೇಟೆ-ಮೈತಾಡಿ ಬಳಿಯ ಚಾಮಿಯಾಲದ ಜುಮಾ ಮಸೀದಿ ಅಧೀನದಲ್ಲಿರುವ ತಂಜಿದುಲ್ ಇಸ್ಲಾಂ ಮದರಸಾದಲ್ಲಿ ರಾಷ್ಟ್ರದ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಚಾಮಿಯಾಲ ಮುಸ್ಲಿಂ ಜಮಾಅತ್‍ನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್‍ನ ನಿರ್ದೇಶಕ ಪುದಿಯತ್ತಂಡ ಹೆಚ್. ಷಂಶುದ್ದೀನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮದರಸಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಾಮಿಯಾಲ ಮುಸ್ಲಿಂ ಜಮಾಅತ್‍ನ ಕಾರ್ಯದರ್ಶಿ ಕೂವಲೆರ ಎ. ಮೊಹಮ್ಮದ್, ಕೋಶಾಧಿಕಾರಿ ಕೂವಲೆರ ಎ. ಮಜೀದ್, ನಿರ್ದೇಶಕ ಕೂವಲೆರ ಯು. ಷಂಶುದ್ದೀನ್, ಮಸೀದಿಯ ಖತೀಬ ಅಬ್ದುಲ್ ಸಲಾಂ ಜುಹರಿ, ಮದರಸಾ ಅಧ್ಯಾಪಕ ಸಲಾಂ ಸಹದಿ ಮತ್ತು ಅಬ್ದುಲ್ಲಾ ಸೇರಿದಂತೆ ಮದರಸಾ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.*ಗೋಣಿಕೊಪ್ಪಲು: ಬಾಳೆಲೆ ಲಕ್ಷ್ಮಿ ಶ್ರೀ ಶಕ್ತಿ ಗೊಂಚಲು ವತಿಯಿಂದ ಬಾಳೆಲೆ ಅಂಗನವಾಡಿ ಕೇಂದ್ರಕ್ಕೆ ಸಾವಿರ ಲೀಟರ್ ನೀರಿನ ಟ್ಯಾಂಕನ್ನು ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ವಿತರಿಸಿದರು. ಜೊತೆಗೆ ಮಕ್ಕಳಿಗೆ ಕ್ರೀಡಾಕೂಟವನ್ನು ಸಂಘದ ವತಿಯಿಂದ ಏರ್ಪಡಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಲೀಲಾವತಿ, ಸಂಘದ ಅಧ್ಯಕ್ಷೆ ಸುಜಾತ, ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ತಾಲೂಕು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ರಜನಿ ಹಾಜರಿದ್ದರು.

ನಾಪೋಕ್ಲು: ಸಮೀಪದ ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿಯ ಅಮ್ಮಂಗೇರಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನಿವೃತ್ತ ಸೈನಿಕ ಬೊಳ್ಳಾರಮಂಡ ಪೊನ್ನಪ್ಪ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೈನಿಕ ಪೊಂಗೇರ ಉಲ್ಲಾಸ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಅಲ್ಲಮಾಡ ಮುತ್ತಪ್ಪ, ಪೊಂಗೇರ ಸುರೇಶ್, ಅಲ್ಲಮಾಡ ಭರತ್, ಕನಿಯಂಡ ನಾಣಯ್ಯ ಉಪಸ್ಥಿತರಿದ್ದರು. ಈ ಸಂದರ್ಭ ಪನ್ನಂಗಾಲ ಮತ್ತು ಪುದಿಯೋದಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ವೀರಾಜಪೇಟೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಲ್ಲಿನ ತೆಲುಗರ ಬೀದಿಯಲ್ಲಿರುವ ಕೂರ್ಗ್ ವ್ಯಾಲಿ ಪ್ರೌಢಶಾಲೆಯ ವ್ಯಾಲಿ ಇಂಟರಾಕ್ಟ್ ಕ್ಲಬ್ ವತಿಯಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.

ಶಾಲೆಯ ಕ್ಲಬ್ ಸದಸ್ಯರುಗಳು, ವ್ಯವಸ್ಥಾಪಕ ನಿರ್ದೇಶಕರಾದ ಚಿತ್ರಭಾನು, ಮುಖ್ಯೋಪಾಧ್ಯಾಯಿನಿ ಸುಮ, ಶಿಕ್ಷಕ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಪಳ್ಳರಾಣೆ: ನಾಪೋಕ್ಲು-ಪಳ್ಳರಾಣೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಪಿ.ಎಂ. ಸಾದಲಿ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಪಿ.ಬಿ. ಇಬ್ರಾಹಿಂ ಲತೀಫ್, ಅಧ್ಯಾಪಕ ಅಹಮದ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಪಿ.ಬಿ. ಖಾದರ್, ಉಪಾಧ್ಯಕ್ಷ ಸಿ.ಎಸ್. ಹಂಸ, ಪಿ.ಬಿ. ಮಮ್ಮು, ಇಬ್ರಾಹಿಂ, ಸಿಕಂದರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸಾಯಿ ಶಂಕರ ವಿದ್ಯಾಸಂಸ್ಥೆ: ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗೋಣಿಕೊಪ್ಪಲು ಪೊಲೀಸ್ ವೃತ ನಿರೀಕ್ಷಕ ಪಿ.ಕೆ. ರಾಜು ಧ್ವಜಾರೋಹಣ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜು ವಿಭಾಗದ ಪ್ರಾಂಶುಪಾಲ ಬೀರೇಗೌಡ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಆಡಳಿತ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗೋಣಿಕೊಪ್ಪಲು: ಇಲ್ಲಿನ 2ನೇ ವಿಭಾಗದ ಓಂ ಶ್ರೀ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಮಹಿಳೆಯರಿಗೆ ಮನರಂಜನ ಕ್ರೀಡಾಕೂಟ ಹಾಗೂ ವೈದ್ಯೆ ಡಾ. ಗ್ರೀಷ್ಮಾ ಬೋಜಮ್ಮ ಅವರನ್ನು ಸನ್ಮಾನಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.

ಮಹಿಳೆಯರಿಗೆ ಪಾಸಿಂಗ್ ದ ಬಾಲ್, ಲೆಮೆನ್ ಅಂಡ್ ಸ್ಪೂನ್, ಸಂಗೀತ ಕುರ್ಚಿ, ಮಡಿಕೆಗೆ ನೀರು ತುಂಬಿಸುವ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗಾಗಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಗ್ರೀಷ್ಮಾ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಪೊಲೀಸ್ ಉಪನಿರೀಕ್ಷಕ ರಾಜು, ಗ್ರಾ.ಪಂ. ಸದಸ್ಯ ಮುರುಗಾ, ಸುರೇಶ್ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ, ಸಂಘದ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಶುಭಾ, ಅಜಿತ, ಆಯಿಶಾ, ರಸೀಲಾ, ಅನಿತಾ, ಪ್ರಿಯಾ, ಸಮೀನಾ ಇದ್ದರು.ಶನಿವಾರಸಂತೆ: ಶನಿವಾರಸಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ (ಶಿವರಾಮೇಗೌಡ ಬಣ) 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಹೋಬಳಿ ಅಧ್ಯಕ್ಷ ಆನಂದ್, ವೇದಿಕೆಯ ಉದಯ್, ರಮೇಶ್, ಜೈಸನ್, ಮಹೇಶ್ ಭುವನೇಶ್, ರಾಜು, ರಕ್ಷಿತ್, ಮಂಜುನಾಥ್, ಸ್ವಾಮಿ ಹಾಜರಿದ್ದರು.ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆ: ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ ಅಧ್ಯಕ್ಷತೆ ವಹಿಸಿದ್ದು, ಈ ಸಂದರ್ಭ ಶಾಲೆಯ ಹಳೆ ವಿದ್ಯಾರ್ಥಿ ಡಾ. ಸಮೀರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಶಿಕ್ಷಕರು, ವಿದ್ಯಾರ್ಥಿಗಳು ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಪ್ರಾಂಶುಪಾಲೆ ಶಾರದ, ನಿರ್ದೇಶಕರಾದ ಅರೆಯಡ ಸೋಮಪ್ಪ, ಬೊಪ್ಪಂಡ ಕುಶಾಲಪ್ಪ, ಬಿದ್ದಾಟಂಡ ಬೆಳ್ಯಪ್ಪ, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಪಾಪ ಮುದ್ದಯ್ಯ, ನೆರವಂಡ ಸುನಿಲ್, ನಾಯಕಂಡ ದೀಪು, ಮಣವಟ್ಟಿರ ಚಿಮ್ಮ, ಶೌಕತ್ ಆಲಿ, ಮರಿಯಮ್ಮ ಹಾಗೂ ಪೊಷಕರು ಪಾಲ್ಗೊಂಡಿದ್ದರು. ಚಂದ್ರಕಲಾ ಸ್ವಾಗತಿಸಿ, ಶಿಕ್ಷಕಿ ಶೋಭಾ ನಿರೂಪಿಸಿ, ಡಿಂಪಲ್ ವಂದಿಸಿದರು. ಕರ್ನಾಟಕ ಸಂಘ: ವೀರಾಜಪೇಟೆಯ ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಘದ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ಸಂದರ್ಭ ಸಂಘದ ಕಾರ್ಯದರ್ಶಿ ಎಂ.ಬಿ. ಅರುಣ್ ಅಪ್ಪಣ್ಣ, ಸಹ ಕಾರ್ಯದರ್ಶಿ ಎಂ.ಸಿ. ಅಶೋಕ್, ಕೋಶಾಧಿಕಾರಿ ಕೆ.ಯು. ಗಣೇಶ್ ತಮ್ಮಯ್ಯ, ನಿರ್ದೇಶಕರುಗಳಾದ ಎಂ. ರಾಣು ಮಂದಣ್ಣ, ಪಿ.ಎಸ್. ನಂದ, ಬಿ.ಎಂ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದಾಪುರ: ಎಸ್.ಎಸ್.ಎಫ್. ಸಂಘಟನೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆಲ್ಲಿಹುದಿಕೇರಿಯಲ್ಲಿ ಸ್ನೇಹ ಸಭೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ಎಸ್.ಎಸ್.ಎಫ್.ನ ಮುಸ್ತಫಾ, ಸಂಘಟನೆಯ ಪದಾಧಿಕಾರಿಗಳಾದ ಶಕೀರ್ ಮಾಸ್ಟರ್, ರಫೀಕ್, ಶಿಹಾಬುದ್ದಿನ್ ತಂಙಳ್, ರಸಾದ್, ಸಿದ್ದಿಕ್ ಅತಿಥಿಗಳಾದ ಮಣಿ ಮಹಮ್ಮದ್, ದೇವಸ್ಸಿ, ಕೆ.ಕೆ. ಅಶೋಕ್, ಸಯ್ಯದ್ ಬಾವಾ, ಫ್ರಾನ್ಸಿಸ್ ಮತ್ತಿತರರು ಹಾಜರಿದ್ದರು.ಸುಂಟಿಕೊಪ್ಪ: ಇಲ್ಲಿಗೆ ಬಾಳೆಕಾಡು ತೋಟದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ತೋಟದ ವ್ಯವಸ್ಥಾಪಕ ಎಂ.ಬಿ. ಪ್ರಸನ್ನ ನೆರವೇರಿಸಿದರು. ಈ ಸಂದರ್ಭ ತೋಟದಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಿ. ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು. ಬಾಳೆಕಾಡುವಿನಿಂದ ಗದ್ದೆಹಳ್ಳದವರೆಗೆ ಮೆರವಣಿಗೆ ತೆರಳಿ ನಂತರ ತೋಟದ ಕಾರ್ಮಿಕರಿಗೆ ಹಗ್ಗಜಗ್ಗಾಟ, ಕಬಡ್ಡಿ, ವಿವಿಧ ಕ್ರೀಡೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಾದಾಪುರ: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜು ನೇರವೇರಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಭಾರತಿ, ಗ್ರಾ.ಪಂ. ಸದಸ್ಯರುಗಳಾದ ಇಬ್ರಾಹಿಂ ಸೀದಿ, ಹೆಚ್.ಎಂ. ಸೋಮಪ್ಪ, ಎಂ.ಎಂ. ಬೆಳ್ಯಪ್ಪ, ನಾಪಂಡ ಉಮೇಶ್, ಕೆ.ಎ. ಲತೀಫ್, ಭಾಗೀರಥಿ, ಕಾರ್ಯಪ್ಪ, ಎನ್.ಎನ್. ಪ್ರಸನ್ನ ಕುಮಾರ್ ಭಾಗೀರಥಿ ಗಿರೀಶ, ಶಾಂತ, ನಂಜಾಮಣಿ ಗಣೇಶ, ಎಂ.ಸಿ. ಶಾಂತಿ ಹಾಗೂ ಎಂ.ಎ. ಮಜೀದ್ ಲೆಕ್ಕಾಧಿಕಾರಿ ಕೀರ್ತಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಿ.ಡಿ.ಓ. ಶ್ಯಾಮ್ ದಿನದ ಮಹತ್ವದ ಕುರಿತು ಮಾತನಾಡಿದರು.