ಮಡಿಕೇರಿ ಆ. 18: ಕೊಡಗಿನ ಕೈಲ್‍ಪೊಳ್ದ್ ಹಬ್ಬದ ಅಂಗವಾಗಿ ಪುತ್ತರಿರ ಕುಟುಂಬಸ್ಥರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ‘ಬೊಡಿನಮ್ಮೆ’ಯನ್ನು ಸೆ. 1 ರಂದು ನಡೆಸಲಾಗುವದೆಂದು ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಪ್ರಮುಖರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕರು ನಾಲ್ಕನೇ ವರ್ಷದ ರಾಜ್ಯಮಟ್ಟದ ‘ಬೊಡಿನಮ್ಮೆ’ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದರು. ಈ ವರ್ಷ .22, 12 ಬೋರ್ (ತೋಟದ) ಕೋವಿಯಿಂದ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ವರ್ಧೆ ಹಾಗೂ ಪಿಸ್ತೂಲ್ ರಿವಾಲ್ವರ್, ಏರ್‍ರೈಫಲ್‍ನಿಂದ ಟಾರ್ಗೆಟ್‍ಗೆ ಗುರಿಯಿಟ್ಟು ಹೊಡೆಯುವ ಸ್ವರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ. ಕೋವಿ ಲೈಸನ್ಸ್ ಹೊಂದಿರುವ ಸಾರ್ವಜನಿಕರೆಲ್ಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದರು.
ಹೆಚ್ಚಿನ ವಿವರಗಳಿಗೆ 9901014607, 9845781899 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಪುತ್ತರಿರ ಪಪ್ಪು ತಿಮ್ಮಯ್ಯ, ಪುತ್ತರಿರ ಸೂರಜ್ ಬೋಪಣ್ಣ, ಪುತ್ತರಿರ ನವೀನ್ ಬಿದ್ದಪ್ಪ, ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ಹರೀಶ್ ಅಯ್ಯಪ್ಪ ಹಾಗೂ ಪುತ್ತರಿರ ಶಿವು ನಂಜಪ್ಪ ಉಪಸ್ಥಿತರಿದ್ದರು.