ಗೋಣಿಕೊಪ್ಪಲು, ಆ. 18: ಕಾಲ್ಸ್ ಶಾಲೆಯ ಕ್ರೀಡಾಪಟುಗಳು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 24 ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.ಬೆಂಗಳೂರಿನ ಸಾಯಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾಲ್ಸ್‍ನ ತ್ರಿಶಾಲಿ ದೇವಯ್ಯ ಯೂತ್ ಹಾಗೂ ಜೂನಿಯರ್ ವಿಭಾಗದ ಶೂಟಿಂಗ್‍ನಲ್ಲಿ 395.0/424 ಅಂಕ ಗಳಿಸುವ ಮೂಲಕ ಪೀಪ್ ಸೈಟ್ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡರು.

ವೈಯಕ್ತಿಕ ಸ್ಪರ್ಧೆ: ಜಸ್ಟಿನ್ ಆಂಟೋನಿ ಪುರುಷರ ಸೀನಿಯರ್ ವಿಭಾಗದಲ್ಲಿ ಬೆಳ್ಳಿ ಹಾಗೂ ಪುರುಷರ ಜೂನಿಯರ್ ಹಾಗೂ ಯೂತ್ ವಿಭಾಗದಲ್ಲಿ 283/300 ಅಂಕಗಳೊಂದಿಗೆ ಚಿನ್ನದ ಪದಕ ಪಡೆದರು. ತರಾನ ರಮೇಶ್ ಹಾಗೂ ಆದ್ವಿಕಾ ನಯನ ಮಹಿಳೆಯರ ಜೂನಿಯರ್ ಮತ್ತು ಯೂತ್ ವಿಭಾಗದಲ್ಲಿ ಕ್ರಮವಾಗಿ 278 ಹಾಗೂ 273 ಅಂಕಗಳನ್ನು ಪಡೆದು ಚಿನ್ನ ಮತ್ತು ಕಂಚಿನ ಪದಕ ಪಡೆದರು.

ಟೀಂ ಈವೆಂಟ್: ಪುರುಷರ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಮಾಚಯ್ಯ ಬೋಪಣ್ಣ, ನಿಖಿಲ್ ಮಲ್ಗುಂದ್ಕರ್ ಹಾಗೂ ಜಸ್ಟಿನ್ ಆಂಟೋನಿ ಕ್ರಮವಾಗಿ 276, 276 ಮತ್ತು 283 ಅಂಕಗಳನ್ನು ಗಳಿಸಿ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದರು.

ಮಹಿಳೆಯರ ಜೂನಿಯರ್ ತಂಡದ ಸ್ಪರ್ಧಿಗಳಾದ ಬಿಂದ್ಯ ಕಾವೇರಮ್ಮ, ಪ್ರದೀಪ್ತಾ ವಿಜಯ್ ಹಾಗೂ ಓಷಿನ್ ಗಣಪತಿ ಚಿನ್ನದ ಪದಕ ಮತ್ತು ಜೂನಿಯರ್ ಹಾಗೂ ಸೀನಿಯರ್ ತಂಡದ ಹೆಚ್ ಎಂ ಐಶ್ವರ್ಯ, ಎಂ ಸೋನಿಕಾ ಹಾಗೂ ರಿಯಾ ಪಾಟೀಲ್ ಬೆಳ್ಳಿಯ ಪದಕ ಪಡೆದರು.

ತಂಡದ ತರಬೇತುದಾರರಾಗಿ ಪುನೀತ್ ಕುಮಾರ್ ಹಾಗೂ ಕೆ.ಕೆ. ಜೀವನ್ ಕಾರ್ಯನಿರ್ವಹಿದರು.

ಚೆನೈನಲ್ಲಿ ಆಗಸ್ಟ್ 21 ರಿಂದ 26 ರವರೆಗೆ ನಡೆಯುವ ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 21 ಸ್ಪರ್ಧಿಗಳು ಅರ್ಹತೆ ಪಡೆದಿದ್ದಾರೆ.