ಮಡಿಕೇರಿ, ಆ. 18: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಲದಲ್ಲಿ ಕಕ್ಕಡ ಮಾಸ ಪ್ರಯುಕ್ತ ಸ್ಥಗಿತಗೊಂಡಿದ್ದ ವಿಶೇಷ ಪೂಜಾ ಸೇವೆಗಳು ತಾ. 26 ರಿಂದ (ಸಿಂಹ ಮಾಸ-10) ಪ್ರಾರಂಭಗೊಳ್ಳಲಿದ್ದು, ಭಕ್ತರು ನಾಮಕರಣ ಇತ್ಯಾದಿ ಶುಭ ಕಾರ್ಯಗಳೊಂದಿಗೆ ತುಲಾಭಾರ ಸೇವೆಗಳನ್ನು ನಡೆಸಬಹುದಾಗಿದೆ. ತಾ. 26 ರಂದು ಕೊಡಗಿನ (ಚಿನ್ಯಾರ್ -10) ಸಿಂಹ ಮಾಸದ 10ನೇ ದಿನದ ವಿಶೇಷ ಪೂಜಾ ಪ್ರಾರ್ಥನೆ ಬಳಿಕ ಎಂದಿನಂತೆ ದೈವಿಕ ಕೈಂಕರ್ಯಗಳು ಜರುಗಲಿವೆ ಎಂದು ಪರದಂಡ ಕುಟುಂಬದ ತಕ್ಕರಾದ ಕಾವೇರಪ್ಪ ತಿಳಿಸಿದ್ದಾರೆ.