ಮಡಿಕೇರಿ: ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ ವತಿಯಿಂದ 71ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ನಗರದ ಕೈಗಾರಿಕಾ ಬಡಾವಣೆಯ ಕಾವೇರಿ ಕಾರ್ ಕೇರ್ ಸೆಂಟರ್‍ನಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಸಂಘದ ಮುಖ್ಯ ಸಲಹೆಗಾರರಾದ ಚಿತ್ರ ಕುಮಾರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ರಮೇಶ್ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಅಪಘಾತಕ್ಕೊಳಗಾದ ಸಂಘದ ಹಿರಿಯ ಸದಸ್ಯ ಸೋಮಶೇಖರ್ ಅವರಿಗೆ ಸಹಾಯಧನದ ಚೆಕ್‍ಅನ್ನು ವಿತರಿಸಲಾಯಿತು. ಮೋಹನ್ ವಂದನಾರ್ಪಣೆ ಮಾಡಿದರು.

ಮಕ್ಕಂದೂರು: ಇಲ್ಲಿನ ಮೇಘತ್ತಾಳು ಗ್ರಾಮದ ಮೇಘ ಸ್ತ್ರೀ ಶಕ್ತಿ ಗುಂಪಿನವರು ಹೂವಿನ ಕುಂಡಗಳನ್ನು ಮುಕ್ಕೋಡ್ಲುವಿನ ಅಂಗನವಾಡಿಗೆ ಉದಾರವಾಗಿ ನೀಡುವದರ ಮೂಲಕ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಹಿರಿಯರಾದ ಸಾವಿತ್ರಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಕ್ಕಂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾವತಿ ಆಗಮಿಸಿದ್ದರು. ಶ್ರೀನಿಧಿ ಸ್ತ್ರೀ ಶಕ್ತಿ ಗುಂಪಿನವರು ಪಾಲ್ಗೊಂಡಿದ್ದರು. ನೀಲಮ್ಮ ಮತ್ತು ಕಾವೇರಿ ಪ್ರಾರ್ಥಿಸಿದರೆ, ಅಂಗನವಾಡಿ ಕಾರ್ಯಕರ್ತೆ ಧರ್ಮಾವತಿ ಸ್ವಾಗತಿಸಿದರು. ‘ಸ್ವಾತಂತ್ರ್ಯ ನಂತರ ಮಹಿಳೆಯರು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಾಯಿತು.

ಪುಟ್ಟ ಮಕ್ಕಳಿಗೆ ಮತ್ತು ದೊಡ್ಡವರಿಗೆ ಸಿಹಿ ಹಂಚಿದರು. ಮೇಘ ಸ್ತ್ರೀ ಶಕ್ತಿ ಗುಂಪಿನ ಕಾರ್ಯದರ್ಶಿ ಗಂಗಿ ನಾಣ್ಯಪ್ಪ ನಿರೂಪಿಸಿ, ವಂದಿಸಿದರು.

ಬೆಟ್ಟಗೇರಿ: ಬೆಟ್ಟಗೇರಿ ಬಕ್ಕದಲ್ಲಿ ಸಂಗಮ ಸ್ವಸಹಾಯ ಸಂಘದ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಮಾಜ ಸೇವಕ ನೈಯ್ಯೇಣಿರ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಯ್ಯೇಣಿರ ಕಮಲಾ ತಿಮ್ಮಯ್ಯ ರಾಷ್ಟ್ರ ಧ್ವಜಾರೋಹಣ ಮಾಡಿದರು.

ನಿವೃತ್ತ ಯೋಧ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಭಿಯಂತರ ನೈಯ್ಯೇಣಿರ ಹೇಮಕುಮಾರ್ (ಹ್ಯಾರಿ) ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಬಾಡನ ನಂದಕುಮಾರ್ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಮಕ್ಕಳು, ದೇಶಾಭಿಮಾನಿಗಳು ಹಾಜರಿದ್ದರು.

ನಿವೃತ್ತ ಯೋಧ ಹೊಸೋಕ್ಲು ಮೊಣ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಪುದಿನೆರವನ ವೆಂಕಟೇಶ್ ಸ್ವಾಗರಿಸಿ, ನೈಯ್ಯೇಣಿರ ಲಲಿತಾ ಹೇಮಕುಮಾರ್ ವಂದಿಸಿದರು.

ಪಾಲಿಬೆಟ್ಟ: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಧ್ವಜಾರೋಹಣ ಮಾಡಿದರು. ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ. ಬೋಜಪ್ಪ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಉಪ ಠಾಣೆಯಲ್ಲಿ ಜಿ.ಪಂ. ಸದಸ್ಯ ವಿಜು ಸುಬ್ರಮಣಿ ಧ್ವಜಾರೋಹಣ ನೆರವೇರಿಸಿದರು.ಲಿಟ್ಲ್ ಫ್ಲವರ್ ಶಾಲೆ: ಮಡಿಕೇರಿಯ ಟಿಟ್ಲ್ ಫ್ಲವರ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಯಿತು. ಶಾಲೆಯ ಶೋಭಾ ನಿರೂಪಣೆ ಮಾಡಿದರು. ಸ್ವಾಗತ ಭಾಷಣವನ್ನು ನಿಸರ್ಗ ನಡೆಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ ಡಾ. ಶ್ರೀಧರ್ ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು.

ಸ್ವಾತಂತ್ರ ಹೋರಾಟಗಾರರ ಬಗ್ಗೆ ಇರುವ ಸಣ್ಣಸಣ್ನ ಪುಸ್ತಕಗಳನ್ನು ಓದುವಂತೆ ಷಂಶುದ್ದೀನ್ ಮಕ್ಕಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುನೀತ ಪ್ರೀತು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಿಶಿತ್ ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಮಡಿಕೇರಿ ತಾಲೂಕು ಘಟಕದ ವತಿಯಿಂದ ಕೋಟೆ ಆವರಣದಲ್ಲಿರುವ ಪರಿಷತ್ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ನೆರವೇರಿಸಿದರು.

ಈ ಸಂದರ್ಭ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಮೇಚಿರ ಸುಭಾಶ್ ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ್, ನಿರ್ದೇಶಕರುಗಳಾದ ಪರ್ಲಕೋಟಿ ಸುನಿತಾ ಪ್ರೀತು, ಕಿಶೋರ್ ರೈ ಕತ್ತಲೆಕಾಡು, ಸಿದ್ಧರಾಜು ಬೆಳ್ಳಯ್ಯ, ರಂಗ ಕಲಾವಿದರು ಪಾಲ್ಗೊಂಡಿದ್ದರು.

ಸಂಪಾಜೆ: ಸಂಪಾಜೆ ಪದವಿಪೂರ್ವ ಕಾಲೇಜಿನಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಜರುಗಿತು. ನಿವೃತ್ತ ಸುಬೇದಾರ್ ವೇಗೇಂದ್ರ ಧ್ವಜಾರೋಹಣ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಎಂ. ಶಂಕರನಾರಾಯಣ್ ಭಟ್ ವಹಿಸಿದ್ದರು. ವೇಗೇಂದ್ರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಿಕಟಪೂರ್ವ ಸಂಚಾಲಕ ನಾರಾಯಣ ಭಟ್, ಆಡಳಿತ ಮಂಡಳಿಯ ಪಧಾಧಿಕಾರಿಗಳಾದ ಮುರಳೀಧರ್, ಸುಬ್ರಮಣ್ಯ ಉಪಾಧ್ಯಾಯ, ಪದ್ಮಯ್ಯ ಗೌಡ, ಪುರುಷೋತ್ತಮ ಬಾಳೆಹಿತ್ಲು, ವಿಠಲ ಮಾಸ್ತರ್, ಮುಖ್ಯ ಶಿಕ್ಷಕ ಐತ್ತಪ್ಪ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಾಲತಿ ಸ್ವಾಗತಿಸಿ, ಅಪ್ಪಕುಂಞÂ ವಂದಿಸಿದರು. ಸಹ ಶಿಕ್ಷಕ ಹೆಚ್.ಜಿ. ಕುಮಾರ್, ಲೋಕ್ಯಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮಹದೇವಪೇಟೆ: ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘ ಬಸಪ್ಪ ಶಿಶು ವಿಹಾರದಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ನುಡಿಯಾಡಿದರು.

ಮಧ್ಯಾಹ್ನ 2 ಗಂಟೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು. ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಶೋಭ ಭಟ್ ಮತ್ತು ಮಮತಾ ಶಾಸ್ತ್ರಿ ಆಗಮಿಸಿದ್ದರು. ದೀಕ್ಷ ಸಂತೋಷ್ ಪ್ರಾರ್ಥಿಸಿ, ಅರವಿಂದ ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಡನೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಪಟ್ಟಣ ಬ್ಯಾಂಕ್: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ವತಿಯಿಂದ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕ್ ಉಪಾಧ್ಯಕ್ಷ ಎಸ್.ಸಿ. ಸತೀಶ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಪಿ. ಮುತ್ತಪ್ಪ, ಕೋಡಿ ಚಂದ್ರಶೇಖರ್, ಬಿ. ರಾಜೇಶ್ ಯಲ್ಲಪ್ಪ, ಜಿ.ಎಂ. ಸತೀಶ್ ಪೈ, ಕನ್ನಂಡ ಎ. ಸಂಪತ್, ಬಿ.ಎಂ. ರಾಜೇಶ್ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು. ಉಪಸ್ಥಿತರಿಗೆ ಸಿಹಿ ಹಂಚಲಾಯಿತು.

ಡೋಮಿನೋಸ್: ನೆಲ್ಲಿಹುದಿಕೇರಿ ಡೋಮಿನೋಸ್ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೆಲ್ಲಿಹುದಿಕೇರಿ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.

ಈ ಸಂದರ್ಭ ಸಂಘದ ಪಧಾಧಿಕಾರಿಗಳಾದ ಶಿಹಾಬುದ್ದಿನ್, ಶೌಕತ್ ಆಲಿ, ನೌಫಲ್, ಬೈಜಾಸ್ ಇನ್ನಿತರರು ಹಾಜರಿದ್ದರು.

ಇಂಜಿಲಗೆರೆ: ಸಿದ್ದಾಪುರ ಸಮೀಪದ ಇಂಜಿಲಗೆರೆಯ ಭಗವತಿ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಸಿಹಿ ಹಂಚುವದರ ಮೂಲಕ ಆಚರಿಸಲಾಯಿತು. ಈ ಸಂದರ್ಭ ಕಾಫಿ ಬೆಳೆಗಾರ ವೆಂಕಪ್ಪ ರೈ, ಸ್ಥಳೀಯ ನಿವಾಸಿಗಳಾದ ಮೋಹನ್, ಟೋಮಿ ಥೋಮಸ್, ಲೋಕನಾಥ್ ಮತ್ತಿತರರು ಹಾಜರಿದ್ದರು.

ಚೆನ್ನಂಗಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಲ್ದಾರೆ ಸಮೀಪದ ಚೆನ್ನಂಗಿ ಸರಕಾರಿ ಶಾಲೆಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಬೆಂಗಳೂರು ವತಿಯಿಂದ ಬ್ಯಾಗ್ ಮತ್ತು ಪುಸ್ತಕ ವಿತರಿಸಲಾಯಿತು. ಪಾಲಿಬೆಟ್ಟದ ಲಯನ್ಸ್ ಕ್ಲಬ್ ವತಿಯಿಂದ ಊಟದ ತಟ್ಟೆಯನ್ನು ಮಕ್ಕಳಿಗೆ ವಿತರಿಸಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ವರೂಪ್ ಅಯ್ಯಪ್ಪ, ಶಾಲಾ ಮುಖ್ಯ ಶಿಕ್ಷಕಿ ಬಿ.ಎನ್. ಗೌತಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವೇರಿ ಇನ್ನಿತರರು ಹಾಜರಿದ್ದರು.

ಚೆಯ್ಯಾಂಡಾಣೆ: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು ನೆರವೇರಿಸಿದರು.

ಶಾಲಾ ಆವರಣದಲ್ಲಿ ಗಿಡ ನೆಡುವದರ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ್ ವಹಿಸಿದ್ದರು. ವೇದಿಕೆಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಬಿಳಿಯಂಡ್ರ ರತೀಶ್ ಕುಮಾರ್, ಮುಖ್ಯ ಶಿಕ್ಷಕಿ ಚಂಪಕ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೆÇೀಷಕರು, ಶಿಕ್ಷಕ ವೃಂದ ಇದ್ದರು.

ಸಂಪಾಜೆ: ಲಯನ್ಸ್ ಕ್ಲಬ್ ಸಂಪಾಜೆ ಹಾಗೂ ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ 71ನೇ ಸ್ವಾತಂ ತ್ರ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ನಿವೃತ್ತ ಸೈನಿಕ ಮುಕ್ಕಾಟ್ಟಿ ಲಕ್ಷ್ಮಣ ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಶಿಕಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅಮೃತಾ ಅಪ್ಪಣ್ಣ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ದೇಜಮ್ಮ, ಸಂದ್ಯಾ ಸಚಿತ್ ರೈ, ನಿವೃತ್ತ ಸೈನಿಕ ಲಕ್ಷ್ಮಣ ಕಟ್ಟೆಮನೆ, ವೆಂಕಪ್ಪ ಮಾಸ್ತರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಾಸುದೇವ ಕಟ್ಟೆಮನೆ, ಖಜಾಂಚಿ ಲೆಸ್ಸಿ ಸಿಲ್ವೆಸ್ಟರ್, ಸದಸ್ಯರುಗಳಾದ ಅಪ್ಪಣ್ಣ, ಸಚಿತ್ ರೈ, ಸಂದ್ಯಾ ಸಚಿತ್ ರೈ, ನವೀನ್ಚಂದ್ರ, ಧನಲಕ್ಷ್ಮಿ ನವೀನ್, ಪ್ರಶಾಂತ್, ತಾಜ್ ಮಹಮ್ಮದ್, ಕಿಶೋರ್ ಪಿ.ಬಿ., ಸುರೇಶ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ ಹಾಗೂ ಶಿಕ್ಷಕ್ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ವತ್ಸಲ ಧ್ವಜಾರೋಹಣ ಮಾಡಿ ಧ್ವಜ ವಂದನೆ ಸಲ್ಲಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಪೊನ್ನೋಲ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೊನ್ನೋಲದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಕೆ. ಸುರೇಶ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಂಡ್ಯೋಳಂಡ ರವಿ ಸೋಮಣ್ಣ ಆಗಮಿಸಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ನಿಯೋಜಿತ ಶಿಕ್ಷಕಿ ಡಿ.ಕೆ. ಲೀಲಾವತಿ ಸ್ವಾಗತಿಸಿ, ವಂದಿಸಿದರು.