ಸಿದ್ದಾಪುರ, ಆ. 19: ಮಂಗಳೂರಿನಲ್ಲಿ ನೆಲೆಸಿದ್ದ ಕೊಡಗಿನ ವಿವಾಹಿತ ಮಹಿಳೆಯೊರ್ವಳನ್ನು ಆಕೆಯ ಪತಿ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೂಲತಃ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನ ನಿವಾಸಿ ದಿವಂಗತ ಫೆಲಿಕ್ಸ್ ಎಂಬವರ ಪುತ್ರಿ ಬ್ಲಾಸಂ ಲೋಬೊ (31) ಎಂಬಾಕೆಯೇ ಮೃತ ದುರ್ದೈವಿ. ನೆಲ್ಯಹುದಿಕೇರಿಯ ವಿಲಿಯಂ ಲೋಬೊ ಎಂಬಾತನು ಬ್ಲಾಸಂ ಲೋಬೊಳನ್ನು ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ಆಕೆ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಳು. ವಿಲಿಯಂ ಲೋಬೊ ಬೆಂಗಳೂರಿನಲ್ಲಿ ಚಾಲಕ ವೃತ್ತಿಯಲ್ಲಿದ್ದು, ಶುಕ್ರವಾರ ರಾತ್ರಿ ಪತ್ನಿಯ ಅಕ್ರಮ ಸಂಬಂಧ ಶಂಕಿಸಿ ಕೊಟ್ಟಾರಚೌಕಿ ಎಂಬಲ್ಲಿ ಪತ್ನಿ ವಾಸಿಸುತ್ತಿದ್ದ ಮನೆಯಲ್ಲಿ ಆಕೆಯನ್ನು ಮಚ್ಚಿನಿಂದ ಕೊಲೆ ಮಾಡಿರುವದಾಗಿ ಉರ್ವಾ ಠಾಣೆಯ ಪೊಲೀಸರು ತಿಳಿಸಿದ್ದಾರೆ. ವಿಲಿಯಂ ಲೋಬೋನÀನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಲೆ ಆರೋಪಿ ವಿಲಿಯಂ ಲೋಬೊ ಈ ಹಿಂದೆ ಸಿದ್ದಾಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಮೃತೆ ಬ್ಲಾಸಂ ಲೋಬೋ ಓರ್ವ ಪುತ್ರನನ್ನು ಅಗಲಿದ್ದಾರೆ.