ನಾಪೆÇೀಕ್ಲು, ಆ. 19: ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವದ ರಿಂದ ಸಮಾಜದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ದೊರೆಯುತ್ತದೆ ಎಂದು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ , ರೋಟರಿ ಜಿಲ್ಲಾ ಸಮಾವೇಶ ಸಮಿತಿ ಉಪಾಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಹೇಳಿದ್ದಾರೆ.

ನಾಪೆÇೀಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ನೂತನ ಇಂಟರ್ ಆ್ಯಕ್ಟ್ ಕ್ಲಬ್ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಅಂಬೆಕಲ್ ಜೀವನ್ ಕುಶಾಲಪ್ಪ, 11 ವರ್ಷಗಳಿಂದಲೂ ಅತ್ಯುತ್ತಮ ಇಂಟರ್ ಆ್ಯಕ್ಟ್ ಆಗಿ ಸಾಗಿ ಬಂದಿರುವ ಶ್ರೀ ರಾಮಟ್ರಸ್ಟ್ ಶಾಲೆಯ ಇಂಟರ್ ಆ್ಯಕ್ಟ್ ಸಂಘವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾಜಿಕ ಮೌಲ್ಯ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಇಂಟರ್ ಆ್ಯಕ್ಟ್ ಜಾಗೃತಿ ಮೂಡಿ ಸುತ್ತಿದೆ ಎಂದರಲ್ಲದೇ ಕ್ಲಬ್ ಶಾಲಾ ಸಂಯೋಜಕಿ ಶಿಕ್ಷಕಿ ಸುಬ್ಬಮ್ಮ ಕಾರ್ಯ ಕ್ರಮವನ್ನು ಜೀವನ್ ಶ್ಲಾಘಿಸಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ ರೋಟರಿಯ ಈ ವರ್ಷದ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ್ ಯೋಜನೆಗೂ ರೋಟರಿ ಕೈ ಜೋಡಿಸಲಿದೆ ಎಂದು ಮಾಹಿತಿ ನೀಡಿದರು. ರೋಟರಿ, ಇಂಟರ್ ಆ್ಯಕ್ಟ್ ಕ್ಲಬ್‍ಗಳಿಂದ ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ, ವ್ಯಕ್ತಿತ್ವ ವಿಕಶನ ಹೊಂದಲು ಸಾಧ್ಯ ಎಂದು ಹೇಳಿದ ಅನಿಲ್, ಸಮಾಜ ಸೇವೆಯ ಮೂಲಕ ಶ್ರೀರಾಮ ಟ್ರಸ್ಟ್ ಜಿಲ್ಲೆಯಲ್ಲಿಯೇ ಮಾದರಿ ವಿದ್ಯಾರ್ಥಿ ಸಂಘವಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದರು.

ನೂತನವಾಗಿ ಸ್ಥಾಪನೆಗೊಂಡ ಇಂಟರ್ ಆ್ಯಕ್ಟ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿದ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪೆÇ್ರ. ಕಲ್ಯಾಟಂಡ ಪೂಣಚ್ಚ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ, ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು 11 ವರ್ಷಗಳಿಂದ ಮಾರ್ಗದರ್ಶನ ನೀಡುತ್ತಿರುವ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯ ಶ್ಲಾಘನೀಯ. ಅವರು ಬಿತ್ತಿದ ಪುಟ್ಟ ಬೀಜವನ್ನು ಇಂದು ಹೆಮ್ಮರವಾಗಿ ಬೆಳೆಸಿದ ಇಂಟರ್ ಆ್ಯಕ್ಟ್ ಕ್ಲಬ್ ಸಂಯೋಜಕಿ ಶಿಕ್ಷಕಿ ಸುಬ್ಬಮ್ಮ ಅವರ ಸೇವೆ ಅವಿಸ್ಮರಣೀಯ ಎಂದರು. ಈ ಸಂದರ್ಭದಲ್ಲಿ ತಾವು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳನ್ನು ಸ್ಮರಿಸಿದರು.

ಇಂಟರ್ ಆ್ಯಕ್ಟ್ ಕ್ಲಬ್‍ನ ಸಂಯೋಜಕಿ, ಶಾಲೆಯ ಕನ್ನಡ ಶಿಕ್ಷಕಿ ಟಿ.ಆರ್. ಸುಬ್ಬಮ್ಮ ಮಾತನಾಡಿ, ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಇದೀಗ ಶಾಲೆಯ ಕುಟುಂಬ ವಿದ್ದಂತಾಗಿದೆ. ಸ್ನಾಯು ಬಲಕ್ಕಿಂತ ಜನ ಬಲ ಮುಖ್ಯ ಎನ್ನುವ ಗಾಂಧೀಜಿ ಮಾತಿನಂತೆ ರೋಟರಿಯಿಂದ ತಮ್ಮ ಶಾಲೆಯ ಇಂಟರ್ ಆ್ಯಕ್ಟ್ ಕ್ಲಬ್‍ಗೆ ದೊರೆಯುತ್ತಿರುವ ಪೆÇ್ರೀತ್ಸಾಹ, ಸಹಕಾರದಿಂದ ಅನೇಕ ಯೋಜನೆಗಳಿಗೆ ನೆರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಎಂ.ಪಿ. ಸಂದೀಪ್ ಮಾತನಾಡಿ, ಇಂಟರ್ ಆ್ಯಕ್ಟ್ ಕ್ಲಬ್‍ಗಳು ಯುವನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಶ್ರೀ ರಾಮಟ್ರಸ್ಟ್ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳು ಜಾರಿಯಾಗಿದ್ದು ಮುಂದಿನ ವರ್ಷ ದಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ, ಪ್ರಾಂಶುಪಾಲೆ ಶಾರದ, ಇಂಟರ್ ಆ್ಯಕ್ಟ್ ಕ್ಲಬ್ ನೂತನ ಅಧ್ಯಕ್ಷೆ ಆಬಿದಾ, ಕಾರ್ಯ ದರ್ಶಿ ಧರಿತ್ರಿ ಮಾತನಾಡಿದರು.

ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಇಂಟರ್ ಆ್ಯಕ್ಟ್ ಸಮಿತಿ ಅಧ್ಯಕ್ಷ ಕುಲ್ಲೇಟಿರ ಅಜಿತ್ ನಾಣಯ್ಯ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಇಂಟರ್ ಆ್ಯಕ್ಟ್ ಕ್ಲಬ್ ಪದಾಧಿಕಾರಿ ಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷರುಗಳಾದ ಡಾ. ಸಿ.ಆರ್. ಪ್ರಶಾಂತ್, ಕೇಶವಪ್ರಸಾದ್ ಮುಳಿಯ, ಕೆ.ಕೆ. ವಿಶ್ವನಾಥ್ ಶ್ರೀ ರಾಮ ಟ್ರಸ್ಟ್ ಶಾಲೆಯ ಜೆರಾಕ್ಸ್ ಯಂತ್ರ ಖರೀದಿಸಲು ನೀಡಿದ 30 ಸಾವಿರ ರೂ. ಗಳ ಚೆಕ್ ಅನ್ನು ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.