ಮಡಿಕೇರಿ, ಆ. 20 : ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ಸೆಪ್ಟಂಬರ್ 21 ರಿಂದ 30 ರವರೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಗಳಿಗೆ ಕಲಾವಿದರಿಂದ, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಭಿನ್ನ, ವಿಶಿಷ್ಟ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದ್ದು, ಕಲಾವಿದರು ತಮ್ಮ ಪೂರ್ಣ ಮಾಹಿತಿಯೊಂದಿಗೆ, ಕಳೆದ ಒಂದು ವರ್ಷದಲ್ಲಿ ನೀಡಿರುವ ಕಾರ್ಯಕ್ರಮದ ವಿವರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

30 ನಿಮಿಷಕ್ಕೆ ಮೀರದಂತೆ ಕಲಾತಂಡಗಳ ಪ್ರದರ್ಶನಕ್ಕೆ ಸಮಯ ಮೀಸಲಿಡಲಾಗಿದೆ. ಸೋಲೋ ನೃತ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಬದಲಿಗೆ, ಕನಿಷ್ಟ 4 ಕಲಾವಿದರನ್ನು ಹೊಂದಿರುವ, 4 ನಿಮಿಷದೊಳಗಿನ ಸಮೂಹ ನೃತ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾಂಸ್ಕೃತಿಕ ಸಮಿತಿ ನಿಗದಿಪಡಿಸಿದ ದಿನಾಂಕದಂದು, ನಿಗಧಿತ ಸಮಯದಲ್ಲಿ ಕಲಾವಿದರು ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಬೇಕು.

ಕಲಾವಿದರು, ಕಲಾತಂಡಗಳು ತಮ್ಮ ಅರ್ಜಿಯನ್ನು ಸೆಪ್ಟಂಬರ್ 2 ರ ಶನಿವಾರದ ಒಳಗಾಗಿ ಅನಿಲ್ ಎಚ್.ಟಿ.ಅಧ್ಯಕ್ಷರು, ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ, ದಸರಾ ಕಛೇರಿ, ನಗರಸಭಾ ಸಂಕೀರ್ಣ, ಮಡಿಕೇರಿ -571201 ಈ ವಿಳಾಸಕ್ಕೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಅರ್ಜಿಗಳನ್ನು ಪುರಸ್ಕರಿಸಲಾಗುವದಿಲ್ಲ ಎಂದು ಸಮಿತಿ ಪ್ರಕಟಣೆ ತಿಳಿಸಿದೆ. ಇಮೇಲ್ ಮಾಡುವವರು mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿom ಮೂಲಕ ಅರ್ಜಿ ಸಲ್ಲಿಸಬಹುದು.