ಮಡಿಕೇರಿ, ಆ. 21: ಸೆಪ್ಟೆಂಬರ್ 1ರಂದು ಸಿ.ಎನ್.ಸಿ. ಸಂಘಟನೆ ಸಾಮೂಹಿಕ ಕೈಲ್ ಮುಹೂರ್ತ ಹಬ್ಬ ಆಚರಿಸಲಿದ್ದು, ಕೈಲ್ ಮುಹೂರ್ತಕ್ಕೆ ಸರಕಾರ ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಸಂಘಟನೆ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಸಂಘಟನೆ ಪ್ರಮುಖ ಎನ್.ಯು. ನಾಚಪ್ಪ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಾ, ಕೊಡಗಿನಲ್ಲಿ ಆಯುಧಪೂಜೆಯೊಂದಿಗೆ ವಿಶೇಷವಾಗಿ ನಾಡಿನೆಲ್ಲೆಡೆ ಆಚರಿಸಲ್ಪಡುವ ಕೈಲ್ ಮುಹೂರ್ತ ಹಬ್ಬಕ್ಕೆ ರಜೆ ನೀಡುವದರೊಂದಿಗೆ ಮಾನ್ಯತೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಿ ಸಹಿತ ರಾಜ್ಯದ ಮುಖ್ಯಮಂತ್ರಿ, ವಿಶ್ವಸಂಸ್ಥೆಗೂ ಬೇಡಿಕೆ ಸಲ್ಲಿಸಿರುವದಾಗಿ ವಿವರಿಸಿದರು.

ಸೆ.1ರಂದು ನಗರದ ಮ್ಯಾನ್ಸ್ ಕಾಂಪೌಂಡ್ ಹುತ್ತರಿಮಂದ್‍ನಲ್ಲಿ ಆಯುಧಪೂಜೆ ಬಳಿಕ ಮುಖ್ಯ ಬೀದಿಗಳಲ್ಲಿ ವಾಹನ ಜಾಥಾದೊಂದಿಗೆ ಕ್ಯಾಪಿಟಲ್ ವಿಲೇಜ್‍ಗೆ ತೆರಳಿ ಅಲ್ಲಿ ಸಾಮೂಹಿಕವಾಗಿ ಕೈಲ್‍ಮುಹೂರ್ತ ಆಚರಿಸಲಾಗುವದು ಎಂದು ನಾಚಪ್ಪ ಮಾಹಿತಿ ನೀಡಿದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಲಿಯಂಡ ಪ್ರಕಾಶ್, ಮಂದಪಂಡ ಮನೋಜ್, ಕೂಪದಿರ ಸಾಬು, ಅರೆಯಡ ಗಿರೀಶ್ ಹಾಜರಿದ್ದರು.