ಮಡಿಕೇರಿ, ಆ. 18: ವಾಹನ ರ್ಯಾಲಿ (ಮೋಟಾರ್ ಸ್ಪೋಟ್ರ್ಸ್) ಸಾಹಸ ಒಂದು ರೀತಿಯಲ್ಲಿ ‘ಫ್ಯಾಷನ್’ ಆಗಿರಬಹುದು. ಆದರೆ ಇದೊಂದು ಸಾಹಸಮಯವಾದ ರೋಮಾಂಚಕವಾದ ಕ್ರೀಡೆ. ರ್ಯಾಲಿಯಿಂದ ಪರಿಸರ ಹಾಳು ಮಾಡಲಾಗುತ್ತದೆ ಎಂಬ ಅಭಿಪ್ರಯ ಸರಿಯಲ್ಲ. ರ್ಯಾಲಿ ಪಟುಗಳು, ಆಯೋಜಕರು ಪರಿಸರವನ್ನು ಕಾಪಾಡಲೂ ಗಮನ ಹರಿಸುತ್ತಾರೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ರ್ಯಾಲಿ ಪಟು ಇತ್ತೀಚೆಗಷ್ಟೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ರೈನ್ ಫಾರೆಸ್ಟ್ ಚ್ಯಾಲೆಂಜ್ ರ್ಯಾಲಿಯಲ್ಲಿ ಡೀಸಲ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಕೊಡಗಿನ ಮಾಳೇಟಿರ ಜಗತ್ ನಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಹಲವಾರು ವರ್ಷಗಳಿಂದ ರ್ಯಾಲಿಯಲ್ಲಿ ಹೆಸರು ಮಾಡಿರುವ ಜಗತ್ ಪ್ರಸ್ತುತ 55+ ವಯಸ್ಸಿನವರಾಗಿದ್ದರೂ, ಇವರ ಸಾಹಸ ಪ್ರವೃತ್ತಿಯ ಆಸಕ್ತಿ ಇನ್ನೂ ಉಳಿಸಿಕೊಂಡಿದ್ದಾರೆ. ತಮ್ಮ ಬದುಕಿನ ಹಾದಿಯ ಕುರಿತ ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಮನದಾಳ ಬಿಚ್ಚಿಟ್ಟರು.

ಮಲೇಷಿಯಾದಲ್ಲಿ ಪ್ರಾರಂಭಗೊಂಡ ರೈನ್ ಫಾರೆಸ್ಟ್ ಚ್ಯಾಲೆಂಜ್ ರ್ಯಾಲಿ ಜಗತ್ತಿನ 10 ಕಠಿಣ ರ್ಯಾಲಿಗಳಲ್ಲಿ ಒಂದಾಗಿದ್ದು, ಏಷ್ಯಾದ ಅತ್ಯಂತ ಕಠಿಣವಾದ ರ್ಯಾಲಿ ಕಳೆದ ನಾಲ್ಕು ವರ್ಷಗಳಿಂದ ಗೋವಾದಲ್ಲಿ ಅಲ್ಲಿನÀ ಪ್ರವಾಸೋದ್ಯಮ ಇಲಾಖೆÉಯ ಸಹಕಾರದೊಂದಿಗೆ ಇದನ್ನು ಆಯೋಜಿಸಲಾಗುತ್ತಿದೆ. ಇದರ ವೀಕ್ಷಣೆಗೆ ಸಾಕಷ್ಟು ಮಂದಿ ಆಗಮಿಸಲಿದ್ದು, ಪ್ರವಾಸೋದ್ಯಮಕ್ಕೆ ನೆರವಾಗುತ್ತದೆ.

ಗೋವಾದಂತೆ ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದಲ್ಲಿ ಕೊಡಗಿನಲ್ಲಿಯೂ ಈ ರ್ಯಾಲಿ ಆಯೋಜಿಸಿದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಉತ್ತೇಜನವಾಗಲಿದೆ. ದೇಶ, ವಿದೇಶದ ಜನರು ಆಗಮಿಸಲಿದ್ದು, ಪ್ರವಾಸೋದ್ಯಮ ಬೆಳೆಯಲಿದ್ದು, ನಾನಾ ವಿಧದಲ್ಲಿ ಆರ್ಥಿಕತೆಗೆ ಸಹಕಾರಿಯಾಗಲಿದೆ. ಕೊಡಗಿನಲ್ಲಿ ಪ್ರತಿಷ್ಠಿತವಾದ ರೈನ್ ಫಾರೆಸ್ಟ್ ರ್ಯಾಲಿ ಆಯೋಜನೆಗೆ ಆ ಸಂಘಟಕರು ತಮ್ಮನ್ನು ಸಂಪರ್ಕಿಸಿದ್ದಾರೆ, ಆದರೆ ಇಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಆಡಳಿತಾತ್ಮಕವಾಗಿ ಅನುಮತಿ - ಸಹಕಾರ ಸಿಗದು ಎಂಬ ಅನುಭವ ತಮಗಿದ್ದ, ಇದು ಕಷ್ಟ ಸಾಧ್ಯ ಎಂದು ಉತ್ತರ ನೀಡಬೇಕಾಯಿತು ಎಂದು ಜಗತ್ ನಂಜಪ್ಪ ಹೇಳಿದರು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸಹಕಾರ

(ಮೊದಲ ಪುಟದಿಂದ) ನೀಡಿದಲ್ಲಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಈ ರ್ಯಾಲಿ ಸಂಘಟಿಸಲು ತಾವು ಕೊಡಗಿನಲ್ಲಿ ಪ್ರಾರಂಭಿಸಿರುವ ‘ವಿ ಫೈವ್ ಆಫ್ ರೋಡರ್ಸ್’ ಕ್ಲಬ್‍ನ ಮೂಲಕ ಸಿದ್ಧವಿರುವದಾಗಿ ಅವರು ಹೇಳಿದರು. ಗೋವಾದಲ್ಲಿ ರ್ಯಾಲಿಯಲ್ಲಿ ಈಗಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಾವಾಗಿಯೇ ರ್ಯಾಲಿಯ ಮುಕ್ತಾಯ ಸಂದರ್ಭ ಪಾಲ್ಗೊಂಡಿದ್ದು, ಸ್ಮರಣೀಯ ಎಂದು ಅಲ್ಲಿನ ಉತ್ತೇಜನದ ಕುರಿತು ಉಲ್ಲೇಖಿಸಿದರು.

ಆಸಕ್ತರಿಗೆ ವಿಶೇಷ ಅನುಭವ

ಮಲೇಷಿಯಾದಲ್ಲಿ ಪ್ರಾರಂಭಿಸಲಾದ ರೈನ್ ಫಾರೆಸ್ಟ್ ಚ್ಯಾಲೆಂಜ್ ರ್ಯಾಲಿ ಸುಮಾರು 15 ರಾಷ್ಟ್ರಗಳಲ್ಲಿ ನಡೆಯುತ್ತದೆ. ನಮ್ಮ ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇದೇ ಹೆಸರಿನಲ್ಲಿ ಈ ರ್ಯಾಲಿ ನಡೆಯುತ್ತಿದೆ. ಈ ಹಿಂದೆ ಸಾಧಾರಣ ರೀತಿಯ ಜೀಪ್, ಟಯರ್ ಬಳಸಿ ನಡೆಯುತ್ತಿದ್ದ ವಿವಿಧ ರ್ಯಾಲಿಯ ಸ್ವರೂಪ ಈ ಸ್ಪರ್ಧೆ ದೇಶಕ್ಕೆ ಬಂದ ಬಳಿಕ ಬದಲಾಗಿದೆ. ಇದಕ್ಕಾಗಿ ಜೀಪುಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಅಪಾರ ಹಣವೂ ವ್ಯವವಾಗುತ್ತದೆ. ಈ ರ್ಯಾಲಿಯಲ್ಲಿ ಇತರ ರ್ಯಾಲಿಪಟುಗಳ ವಾಹನಗಳಿಗೆ ಸರಿಸಾಟಿಯಾಗಿ ತಮ್ಮ ವಾಹನ ಇರಲಿಲ್ಲ. ಆರ್ಥಿಕ ಸಂಕಷ್ಟದ ನಡುವೆ ರ್ಯಾಲಿಯ ಆಸಕ್ತಿಯಿಂದ ಕಳೆದ ವರ್ಷ ತಮ್ಮ ಜೀಪನ್ನು ಸಾಧ್ಯವಾದಷ್ಟು ಮಟ್ಟಿಗೆ ಸಿದ್ಧಪಡಿಸಿಕೊಂಡು ತೆರಳಿದ್ದು, ಅಲ್ಲಿ 8ನೇ ಸ್ಥಾನ ದೊರೆಯಿತು. ಈ ಬಾರಿ ಮತ್ತೆ ಇದೇ ಜೀಪನ್ನು ಇನ್ನಷ್ಟು ‘ಮಾಡಿಫೈ’ ಮಾಡಿ ಪಾಲ್ಗೊಂಡರೂ ಪಾಲ್ಗೊಂಡಿದ್ದರೂ ಪಾಲ್ಗೊಂಡಿದ್ದ ವಿವಿಧ ದೇಶಗಳ ವಾಹನಗಳೂ ಸೇರಿದಂತೆ ಇದ್ದ 40 ಜೀಪ್‍ಗಳ ಪೈಕಿ ತಮ್ಮ ವಾಹನವೇ ಕಡಿಮೆ ತರಹದಲ್ಲಿತ್ತು. ಆದರೂ ತಮ್ಮ ಅನುಭವದ ಆಧಾರದಂತೆ ಸಿದ್ಧತೆ ಮಾಡಿಕೊಂಡು ಈ ವಾಹನದಲ್ಲಿ ಡೀಸಲ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಓವರ್‍ಆಲ್ ವಿಭಾಗದಲ್ಲಿ ರನ್ನರ್ಸ್ ಸ್ಥಾನ ಗಳಿಸಿರುವದಾಗಿ ಅವರು ಹರ್ಷ ವ್ಯಕ್ತಪಡಿಸಿದರು. ವಲ್ರ್ಡ್ ಲೆವಲ್ ವಾಹನಕ್ಕೆ ಸರಿಸಾಟಿ ಇರಲಿಲ್ಲ. ಆದರೆ ಪ್ರಥಮ ಸ್ಥಾನದ ಸಾಧನೆಗೆ ಇತರ ಸ್ಪರ್ಧಿಗಳು ಬೆರಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರೆಂದು ಜಗತ್ ಸ್ಮರಿಸಿದರು.

ಯಾವದೇ ರೀತಿಯ ಸಹಕಾರ ಇಲ್ಲ

ಸಾಕಷ್ಟು ವರ್ಷಗಳಿಂದ ರ್ಯಾಲಿಯಲ್ಲಿ ಸಾಧನೆ ಮಾಡಿದ್ದರೂ, ಯಾವದೇ ರೀತಿಯ ಆರ್ಥಿಕ ಸಹಕಾರ ಸರಕಾರದಿಂದಾಗಲಿ ಇತರ ರೀತಿಯಿಂದಾಗಲಿ ದೊರೆತಿಲ್ಲ. ಲಭಿಸಿರುವದು ಹೂವಿನ ಹಾರ, ಶಾಲು ಮಾತ್ರ ಎಂದು ವಿಷಾದಿಸಿದ ಅವರು, ಇತರ ರಾಷ್ಟ್ರಗಳಲ್ಲಿ ರ್ಯಾಲಿ ಪಟುಗಳಿಗೆ ಸಿಗುವ ಪ್ರೋತ್ಸಾಹ ಅಪಾರವಿದೆ ಎಂದರು.

ಪರಿಸರ ಹಾನಿ ಇಲ್ಲ

ರ್ಯಾಲಿ ಆಯೋಜಕರು ಹಾಗೂ ರ್ಯಾಲಿಪಟುಗಳು ಪರಿಸರವನ್ನು ಹಾಳು ಮಾಡುವದಿಲ್ಲ. ರಸ್ತೆಯನ್ನು ಸ್ವಲ್ಪ ಬಳಸಿದರೂ ಹೆಚ್ಚಿನ ಹಾದಿ ಯಾರೂ ಬಳಸದಂತಹ ಮಾರ್ಗವಾಗಿರುತ್ತದೆ. ರ್ಯಾಲಿ ಸಂದರ್ಭ ವಾಹನ ಹತ್ತಿಸಲು ಮರಕ್ಕೆ ಕೇಬಲ್ ಹಾಕಬೇಕಾಗುತ್ತದೆ. ಆಗ ‘ಟ್ರೀ ಸ್ಟ್ರ್ಯಾಪ್’ ಬಳಸಲೇಬೇಕು. ಮರದ ತೊಗಟೆಗೆ ಹಾನಿ ಮಾಡಿದರೂ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸ ಲಾಗುತ್ತದೆ. ಸ್ಪರ್ಧೆ ನಡೆಸುವ ಮಾರ್ಷಲ್ಸ್ (ತೀರ್ಪುಗಾರರು), ಮಾರ್ಗ ಸಿದ್ಧಪಡಿಸುವವರು ಅಪಾರ ಅನುಭವವಿರುವ ವಿದೇಶದ ಸಾಧಕರು ಎಂದು ಅವರು ತಮ್ಮ ಅನುಭವ ಹೇಳಿಕೊಂಡರು.