ಕುಶಾಲನಗರ, ಆ 21: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2016-17ನೇ ಸಾಲಿನಲ್ಲಿ ಒಟ್ಟು ರೂ 42 ಲಕ್ಷದ 40 ಸಾವಿರ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಅವರು ಕುಶಾಲನಗರ ಜಿಎಂಪಿ ಶಾಲೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ,

2004ರಲ್ಲಿ ಸ್ಥಾಪನೆಯಾದ ಸಂಘ 12 ವರ್ಷ ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಕೇವಲ 138 ಮಂದಿ ಸದಸ್ಯರನ್ನೊಳಗೊಂಡು ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಸಂಘದಲ್ಲಿ ಪ್ರಸ್ತುತ 999 ಸದಸ್ಯರಿದ್ದಾರೆ. ಪ್ರಸಕ್ತ ರೂ. 20 ಕೋಟಿ 75 ಲಕ್ಷ ದುಡಿಯುವ ಬಂಡವಾಳದೊಂದಿಗೆ 17 ಕೋಟಿ ಠೇವಣಿ ಹೊಂದಿದೆ. ಪ್ರತಿ ಸದಸ್ಯರಿಗೆ ರೂ. 20 ಲಕ್ಷದವರೆಗೆ ಸಾಲ ವಿತರಿಸಲಾಗುತ್ತಿದ್ದು ಸದಸ್ಯರಿಗೆ ಒಟ್ಟು ರೂ. 22.5 ಕೋಟಿ ಸಾಲ ವಿತರಣೆ ಯಾಗಿದೆ. ಸಾಲ ವಸೂಲಾತಿಯಲ್ಲೂ ಸಂಘ ಮುಂಚೂಣಿಯಲ್ಲಿದ್ದು ಶೇ. 99.76 ರಷ್ಟು ಸಾಲ ವಸೂಲಾತಿ ಯಾಗಿದೆ ಎಂದು ತಿಳಿಸಿದರು.

ರೂ. 2.31 ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ಸಂಘದ ದಶಮಾನೋತ್ಸವ ಕಟ್ಟಡ ನಿರ್ಮಿಸಲಾಗಿದ್ದು ಸದಸ್ಯರಿಗೆ ಜಿಮ್, ಲೈಬ್ರರಿ, ಅತಿಥಿಗೃಹ ವ್ಯವಸ್ಥೆ ಕಲ್ಪಿಸಲಾಗಿದ್ದು. ಆರ್.ಬಿ.ಐ ಮಾರ್ಗಸೂಚಿಯಂತೆ ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಉತ್ತಮ ಸೇವೆ ಸೌಲಭ್ಯ ನೀಡುತ್ತಿರುವ ಸಂಸ್ಥೆ ಎಂದು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅವರು ತಿಳಿಸಿದರು.

ಮೃತಪಟ್ಟ ಸದಸ್ಯರುಗಳಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾ ಯಿತು. ಕಳೆದ ಮಹಾಸಭೆಯ ವರದಿಯನ್ನು ಅಂಗೀಕರಿಸುವದ ರೊಂದಿಗೆ ವಾರ್ಷಿಕ ವರದಿಯನ್ನು ವಾಚಿಸಲಾಯಿತು. ಸಂಘದ ಸಾಲಮಿತಿ, ಅಧಿಕೃತ ಪಾಲು ಬಂಡಾವಳದ ಮಿತಿ ಹೆಚ್ಚಿಸುವ ಬಗ್ಗೆ ಚರ್ಚೆಗಳು ಮತ್ತು ಠರಾವುಗಳನ್ನು ಮಂಡಿಸಲಾಯಿತು.

ಉಪಾಧ್ಯಕ್ಷ ಕೆ.ಎಸ್. ರಾಜಶೇಖರ್, ನಿರ್ದೇಶಕರುಗಳಾದ ಎಂ.ಎಂ. ಶಾಹಿರ್, ಎನ್.ಇ. ಶಿವಪ್ರಕಾಶ್, ಜೋಸೆಫ್ ವಿಕ್ಟರ್ ಸೋನ್ಸ್ ಎನ್.ಕೆ. ಮೋಹನ್ ಕುಮಾರ್, ಬಿ. ರಾಮಕೃಷ್ಣಯ್ಯ, ಕೆ.ಎಸ್. ಮಹೇಶ್, ಪೊನ್ನಚ್ಚನ ಕವಿತ ಮೋಹನ್, ಟಿ.ಆರ್. ರೇಖಾ ಇದ್ದರು.