ಮಡಿಕೇರಿ, ಆ. 21: ಜಾತ್ಯತೀತ ಜನತಾದಳದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಮತ್ತು ಜೆಡಿಎಸ್ ಮುಖಂಡ ಎಸ್. ಎಚ್. ಮತೀನ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇಮಕ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಸಂಘಟನೆಯ ಹಿತದೃಷ್ಟಿಯಿಂದ ಮತ್ತು ಕಾಲಾವಕಾಶ ಕಡಿಮೆ ಇರುವದರಿಂದ ಪಕ್ಷವನ್ನು ಎಲ್ಲಾ 263 ಬೂತ್ ಗಳಲ್ಲಿ ಸಕ್ರಿಯವಾಗಿ ಪಕ್ಷವನ್ನು ಬಲವರ್ಧನೆ ಮಾಡುವ ದೃಷ್ಟಿಯಿಂದ ಈ ನೇಮಕ ಮಾಡಲಾಗಿದ್ದು, ನೂತನ ಕ್ಷೇತ್ರ ಪದಾಧಿಕಾರಿಗಳ ನೇಮಕವನ್ನು ಮಾಡುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ವೀರಾಜಪೇಟೆ ಕ್ಷೇತ್ರದಲ್ಲಿ ಇನ್ನೂ ಬಲಗೊಳ್ಳಲಿದೆ ಅಲ್ಲದೆ ಮತೀನ್ ಉತ್ಸಾಹಿ ಕಾರ್ಯಕರ್ತನಾಗಿರುವದರಿಂದ ಹಾಗೂ ಕೊಡಗು ಜಿಲ್ಲಾಧ್ಯಕ್ಷ ಮೇರಿಯಂಡ ಎಂ. ಸಂಕೇತ್ ಪೂವಯ್ಯ ಮನವಿಯ ಮೇರೆಗೆ ಮತೀನ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಮಯದ ಕೊರತೆಯಿದೆ, ಈ ನಿಟ್ಟಿನಲ್ಲಿ ಉತ್ಸಾಹಿ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯರೂ ಆಗಿರುವ ಎಸ್. ಎಚ್. ಮತೀನ್ ಆಯ್ಕೆ ಉತ್ತಮ ನಿರ್ಧಾರ. ಪಕ್ಷ ಸಂಘಟನೆಯಲ್ಲಿ ಚತುರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಕಾರ್ಯನಿರ್ವಹಿಸಲಿದ್ದಾರೆ.
ಈ ಹಿಂದೆ ಕ್ಷೇತ್ರ ಅಧ್ಯಕ್ಷರಾಗಿದ್ದ ಎಂ. ಸಿ. ಬೆಳ್ಯಪ್ಪ ಅವರನ್ನು ಜಿಲ್ಲಾ ಸಮಿತಿಗೆ ನೇಮಕ ಮಾಡಿಕೊಳ್ಳಲಾಗುವದು. ಮಡಿಕೇರಿ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ. ಎ. ಜೀವಿಜಯ ಗೆಲ್ಲುವದರಲ್ಲಿ ಯಾವದೇ ಅನುಮಾನಗಳಿಲ್ಲ. ಗೆಲ್ಲುವ ಮತಗಳ ಅಂತರವನ್ನು ಹೆಚ್ಚು ಮಾಡುವ ಕೆಲಸವನ್ನು ಮಾಡಬೇಕಿದೆ ಎಂದು ಸಂಕೇತ್ ಹೇಳಿದ್ದಾರೆ.