ಮಡಿಕೇರಿ, ಆ. 21: ಸುಳ್ಯದ ಕನ್ನಡ ಸಂಘ ಮತ್ತು ಸಂಶೋಧನಾ ಸಲಹಾ ಘಟಕ, ನೆಹರು ಮೆಮೋರಿಯಲ್ ಕಾಲೇಜು ಇವರ ಸಹಯೋಗದಲ್ಲಿ ಡಾ. ಪೂವಪ್ಪ ಕಣಿಯೂರು ಅವರು ರಚಿಸಿರುವ ‘ಕುಕ್ಕೆಯಲ್ಲಿ ನಾಗರ ಮಡಿಕೆ-ಪ್ರಾದೇಶಿಕ ಅಧ್ಯಯನ’ ಗ್ರಂಥದ ಬಿಡುಗಡೆ ಕಾರ್ಯಕ್ರಮ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕೃತಿ ಬಿಡುಗಡೆ ಮಾಡಿದರು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾ ಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ ಕೃತಿ ಪರಿಚಯ ಮಾಡಿದರು.
ಸುಳ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಗಿರಿಧರ ಗೌಡ ಉಪಸ್ಥಿತರಿದ್ದರು.