ನಾಪೆÇೀಕ್ಲು, ಆ. 21: ಕಠಿಣ ತಪಸ್ಸು, ಪರಿಶ್ರಮ, ಶ್ರದ್ಧೆ, ಛಲದಿಂದ ಮಾತ್ರ ಯಶಸ್ಸು ಲಭಿಸಲು ಸಾಧ್ಯ ಎಂದು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಾಪೆÇೀಕ್ಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸ ಲಾಗಿದ್ದ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅಂಕ ಗಳಿಕೆ ಪ್ರತಿಷ್ಠೆಯ ಪಣ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕøತಿಯನ್ನು ಅರಿಯ ಬೇಕು. ಕಲಿಕೆಯಲ್ಲಿ ಮೌಲ್ಯತೆಯಿರ ಬೇಕು. ಆಹಂಕಾರ, ಸ್ವಾರ್ಥವನ್ನು ಬದಿಗೊತ್ತಿದರೆ ಮಾತ್ರ ಉನ್ನತಿ ಸಾಧ್ಯ ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘ ಸಹಕಾರಿಯಾಗಿದೆ. ವಿದ್ಯಾರ್ಥಿ ಸಂಘದ ಮೂಲಕ ಕಾಲೇಜು ಅಭಿವೃದ್ಧಿ, ಸಮಾಜದ ಸ್ವಚ್ಛತೆ ದೇಶದ ಏಳಿಗೆಗೆ ಜಾತಿ, ಮತ, ಧರ್ಮದ ಬೇಧವಿಲ್ಲದೆ ಸೇವೆ ಸಲ್ಲಿಸಬೇಕು ಎಂದರು.

ಕಾಲೇಜು ಎನ್‍ಎಸ್‍ಎಸ್ ಘಟಕ ಉದ್ಘಾಟಿಸಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚೋಕಿರ ಪ್ರಭು ಪೂವಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಭಾರ ಪ್ರಾಚಾರ್ಯೆ ಉದಿಯಂಡ ಪದ್ಮಾಜಾ ಸುಭಾಷ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕೊಂಬಂಡ ಗಣೇಶ್, ಎನ್.ಎಸ್.ಉದಯ ಶಂಕರ್ ಮಾತನಾಡಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸವಿತಾ, ಹೇಮಾವತಿ ಇದ್ದರು.

ವಿದ್ಯಾರ್ಥಿನಿಯರಾದ ಪಲ್ಲವಿ ಮತ್ತು ತಂಡ ಪ್ರಾರ್ಥಿಸಿ, ಉಪನ್ಯಾಸಕಿಯರಾದ ನಳಂದ ಸ್ವಾಗತಿಸಿ, ರೀಟಾ ಕೆ.ಎಂ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರೆ, ಕೃಪಾ ನಿರೂಪಿಸಿ ಸರಳ, ವಂದಿಸಿದರು.