ಮಡಿಕೇರಿ, ಆ. 21: ಸ್ವಾತಂತ್ರ್ಯೋತ್ಸವ ವೇದಿಕೆಯಲ್ಲಿ ಶಾಸಕಿಯ ಕೈ ಮುಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದುರುದ್ದೇಶವಿಲ್ಲದಿದ್ದರೂ, ಸಾರ್ವಜನಿಕವಾಗಿ ಈ ನಡೆಯನ್ನು ಸಮರ್ಥಿಸಲಾಗದು ಎಂದಿದ್ದು, ಈ ಬಗ್ಗೆ ಪಕ್ಷದ ರಾಜ್ಯ ಸಮಿತಿ ಎರಡು ದಿನಗಳಲ್ಲಿ ಕ್ರಮಕೈಗೊಳ್ಳಲಿದೆ ಎಂದಿದ್ದಾರೆ. ರಮೇಶ್ ಅವರು ದೂರವಾಣಿ ಸಂಪರ್ಕದಲ್ಲಿ ಸಿಗದಿದ್ದು, ಸಂಪರ್ಕ ಸಾಧ್ಯವಾದರೆ ರಾಜೀನಾಮೆಗೆ ಸೂಚಿಸು ವದಾಗಿಯೂ ಸಚಿವರು ನಿಲುವು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ

ರಮೇಶ್ ವರ್ತನೆ ಖಂಡಿಸಿ ನಾಪೋಕ್ಲಿನಲ್ಲಿ ಕೊಡವ ಸಮಾಜ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಮುದ್ದಯ್ಯ ಮಾತನಾಡಿ, ರಮೇಶ್ ಅವರನ್ನು ಪಕ್ಷ ಹಾಗೂ ಹುದ್ದೆಯಿಂದ ಉಚ್ಛಾಟಿಸಬೇಕೆಂದರು. ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ, ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕಾಂಡಂಡ ಜೋಯಪ್ಪ, ಮೂವೇರ ರೇಖಾ ಪ್ರಕಾಶ್, ಕಾರ್ಯದರ್ಶಿ ಮಂಡೀರ ರಾಜಪ್ಪ ಇವರುಗಳು ಮಾತನಾಡಿ, ರಮೇಶ್ ಗಡೀಪಾರಿಗೆ ಒತ್ತಾಯಿಸಿದರು.

ಪ್ರತಿಭಟನೆ ಸಂದರ್ಭ ಕೇಟೋಳಿರ ಹರೀಶ್ ಪೂವಯ್ಯ, ಶಿವಚಾಳಿಯಂಡ ಅಂಬಿಕಾರ್ಯಪ್ಪ, ಗ್ರಾ.ಪಂ. ಸದಸ್ಯ ಜಗದೀಶ್, ಬಿದ್ದಾಟಂಡ ಬೆಳ್ಯಪ್ಪ, ಅರೆಯಡ ರತ್ನ ಪೆಮ್ಮಯ್ಯ, ಕಾಟುಮಣಿಯಂಡ ಉಮೇಶ್, ಮುಕ್ಕಾಟಿರ ವಿನಯ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಅಪ್ಪಾರಂಡ ಸುಧೀರ್ ಅಯ್ಯಪ್ಪ, ಕುಂಡ್ಯೋಳಂಡ ದೇವಯ್ಯ, ವಿಶು ಪೂವಯ್ಯ, ನುಚ್ಚಿಮಣಿಯಂಡ ನಳಿನಿ ರಮೇಶ್, ಕುಂಡ್ಯೋಳಂಡ ಕವಿತ ಮುತ್ತಣ್ಣ, ಮುಕ್ಕಾಟಿರ ಬಾಬಿ, ಕೆಲೇಟಿರ ಸಾಬು ನಾಣಯ್ಯ, ಕಲಿಯಂಡ ತಿಮ್ಮಯ್ಯ,

(ಮೊದಲ ಪುಟದಿಂದ) ಚಂಗೇಟ್ಟಿರ ಶಂಭು, ಚೀಯಕಪೂವಂಡ ಗಣೇಶ್, ಕಲಿಯಂಡ ಮಾದಪ್ಪ, ಚೋಕಿರ ಸಜಿತ್ ಮತ್ತಿತರರು ಇದ್ದರು.

ಖಂಡನೆ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ವೀರಾಜಪೇಟೆ ಪಂಜರುಪೇಟೆ ಕೊಡವಕೇರಿ ಉಪಾಧ್ಯಕ್ಷ ಕೊಪ್ಪಿರ ಅಮಿತ್ ಸೋಮಯ್ಯ ಹಾಗೂ ಪದಾಧಿಕಾರಿಗಳು, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಹಾಗೂ ಪದಾಧಿಕಾರಿಗಳು, ವೀರಾಜಪೇಟೆ ತಾಲೂಕು ಬಲಿಜ ಸಮಾಜದ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ, ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಕೊಲ್ಲೀರ ಬೋಪಣ್ಣ, ವೀರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮುಕ್ಕಾಟಿರ ವಿನಿತಾ ಕಾವೇರಮ್ಮ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಮಾಳೇಟಿರ ಬೋಪಣ್ಣ ಹಾಗೂ ಇತರರು ರಮೇಶ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.

‘ಅಂಗನವಾಡಿ ಕಾರ್ಯಕರ್ತೆಯರು ಟಿ.ಪಿ.ಆರ್. ಜೊತೆಗಿಲ್ಲ’

ಈ ಮಧ್ಯೆ ಗೋಣಿಕೊಪ್ಪಲು ಪ್ರೆಸ್‍ಕ್ಲಬ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೊಡಗು ಘಟಕ, ರಮೇಶ್ ಅವರ ಅಂಗನವಾಡಿ ಸಂಘಟನೆಯಿಂದ ಶೇಕಡ 80 ರಷ್ಟು ಜನ ಬೇರ್ಪಟ್ಟಿದ್ದು, ಅಂಗನವಾಡಿ ನೌಕರರು ಕಾರ್ಮಿಕ ಸಂಘಟನೆ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆಂದು ಹೇಳಿದೆ. ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ, ಪ್ರಧಾನ ಕಾರ್ಯದರ್ಶಿ ವಿ.ಎಸ್. ಸುಮಿತ್ರ ಹಾಗೂ ಇತರರು ಹೇಳಿಕೆ ನೀಡಿ ರಮೇಶ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸುದ್ದಿ ಮಾಹಿತಿ: ಟಿ.ಎಲ್. ಶ್ರೀನಿವಾಸ್, ದುಗ್ಗಳ ಸದಾನಂದ, ಪ್ರಭಾಕರ್, ವಿಜಯ್ ಹಾನಗಲ್, ಎನ್.ಎನ್. ದಿನೇಶ್, ಹರೀಶ್ ಮಾದಪ್ಪ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ನ್ಯೂಸ್‍ಡೆಸ್ಕ್