ಕೂಡಿಗೆ, ಆ. 21: ಕೂಡಿಗೆ-ಕುಶಾಲನಗರ ರಾಜ್ಯ ಹೆದ್ದಾರಿ ನಿರ್ಮಾಣಗೊಂಡು ಈಗಾಗಲೇ 5 ವರ್ಷಗಳೆ ಕಳೆದಿದೆ. ಇದೀಗ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಮೊದಲನೆ ತಿರುವಿನಲ್ಲಿ ರಾಜ್ಯ ಹೆದ್ದಾರಿಯ ಮಧ್ಯೆ ನೀರು ಉಕ್ಕುತ್ತಿದೆ.
ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಒಳಚರಂಡಿ ಅಥವಾ ನೀರು ಸರಬರಾಜಿನ ಪೈಪ್ ಅಳವಡಿಕೆಯಲ್ಲಿ ವ್ಯತ್ಯಾಸವಾಗಿ ಹೆದ್ದಾರಿಯ ಮಧ್ಯೆ ನೀರು ಉಕ್ಕಿ ಬರುತ್ತಿದೆ. ಇದರಿಂದ ರಸ್ತೆ ಗುಂಡಿ ಬೀಳುವ ಹಂತ ತಲುಪುತ್ತಿದೆ. ಅಲ್ಲದೆ, ವಾಹನ ಚಾಲನೆಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.