ಕೂಡಿಗೆ, ಆ. 22: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾನಯನ ಪ್ರದೇಶಗಳ ಮೇಲ್ಭಾಗದಲ್ಲಿ ಕಳೆದೆರಡು ದಿನಗಳಿಂದ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ 7000ಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನಾಲೆಗೆ ಹರಿಸುವದರ ಜೊತೆಗೆ ನದಿಗೆ 5460 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.ನದಿಗೆ ಮುಖ್ಯ ಗೇಟ್‍ಗಳ ಮೂಲಕ 2000 ಕ್ಯೂಸೆಕ್‍ನಷ್ಟು ನೀರು ಹರಿಯುತ್ತಿದ್ದು, ಇನ್ನುಳಿದ ನೀರು ವಿದ್ಯುತ್ ಘಟಕದ ಮೂಲಕ ನದಿಗೆ ಹರಿಯುತ್ತಿದೆ. ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ಕಟ್ಟೆಯ ಸಾಮಥ್ರ್ಯಕ್ಕ ನುಗುಣವಾಗಿ ನೀರನ್ನು ಸಂಗ್ರಹಿಸಿ, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗು ತ್ತಿದೆ ಎಂದು ಸಹಾಯಕ ಕಾರ್ಯಪಾಲ ಅಭಿಯಂತರ ನಾಗರಾಜ್ ತಿಳಿಸಿದ್ದಾರೆ.