ಸೋಮವಾರಪೇಟೆ, ಆ. 22: ಕಾನೂನಿನ ಪರಿಮಿತಿಯೊಳಗೆ ಗೌರಿ ಗಣೇಶ ಉತ್ಸವಗಳನ್ನು ಆಯೋಜಿಸಬೇಕು. ಉತ್ಸವ ಸಂದರ್ಭ ಅಹಿತಕರ ಘಟನೆಗಳು ನಡೆದರೆ ಸಮಿತಿ ಪದಾಧಿಕಾರಿಗಳೇ ಹೊಣೆಗಾರರಾಗಿದ್ದು, ಕಾನೂನು ಮೀರಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ಡಿವೈಎಸ್‍ಪಿ ಸಂಪತ್‍ಕುಮಾರ್ ಸೂಚಿಸಿದರು.ಸೋಮವಾರಪೇಟೆ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ವಿವಿಧ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಉತ್ಸವ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಗೌರಿ ಗಣೇಶ ಮೆರವಣಿಗೆÉ ಸಂದರ್ಭ ಡಿ.ಜೆ. ಸೌಂಡ್ ಸಿಸ್ಟಮ್ ಅಳವಡಿಸಬಾರದು. ಚರ್ಚ್, ಮಸೀದಿ, ದೇವಸ್ಥಾನಗಳೂ ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಪಟಾಕಿ, ಸಿಡಿಮದ್ದು ಸಿಡಿಸಬಾರದು. ಅನ್ಯಧರ್ಮದವರಿಗೆ ತೊಂದರೆಯಾಗುವಂತಹ ಯಾವದೇ ಕಾರ್ಯಕ್ರಮ, ಭಾಷಣ, ಧ್ವನಿವರ್ಧಕ ಬಳಕೆ ಮಾಡಬಾರದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು ಎಂದು ನಿರ್ದೇಶನ ನೀಡಿದರು.

ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇಂತಹ ಕ್ರಮ ಕೈಗೊಂಡರೆ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಿಸಿದ ಡಿವೈಎಸ್‍ಪಿ ಕಳೆದ ಬಾರಿ ಆಯೋಜಿಸಿದ್ದ ಬೈಕ್ ಸ್ಟಂಟ್ ಕಾರ್ಯಕ್ರಮಕ್ಕೆ ಅನುಮತಿ ನೀಡುವದಿಲ್ಲ. ಉತ್ಸವ ಮುಗಿದ ತಕ್ಷಣ ಬ್ಯಾನರ್, ಬಂಟಿಂಗ್ಸ್‍ಗಳನ್ನು ಆಯೋಜಕರೇ ತೆರವುಗೊಳಿಸಬೇಕು ಎಂದು ತಿಳಿಸಿದರು.

ಪ.ಪಂ. ವ್ಯಾಪ್ತಿಯ ಹಲವಷ್ಟು ಕಡೆಗಳಲ್ಲಿ ರಾತ್ರಿ ವೇಳೆ ಲೈಟ್‍ಗಳು ಉರಿಯುತ್ತಿಲ್ಲ. ಇದರೊಂದಿಗೆ ಆನೆಕೆರೆ ಪಕ್ಕದಲ್ಲಿಯೂ ಬೆಳಕಿನ ವ್ಯವಸ್ಥೆ ಕಲ್ಪಿಸಲು ಪಟ್ಟಣ ಪಂಚಾಯಿತಿಗೆ ಸೂಚಿಸುವಂತೆ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಮನವಿ ಮಾಡಿದರು. ಆನೆಕೆರೆಯಲ್ಲಿ ಗಣಪತಿ ವಿಸರ್ಜನೆಗೆ ನೀರಿನ ಕೊರತೆ ಎದುರಾಗಿದ್ದು, ಪಂಚಾಯಿತಿಯವರು ಈ ಬಗ್ಗೆ ಗಮನಹರಿಸಬೇಕು ಎಂದು ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಸೋಮೇಶ್ ಮನವಿ ಮಾಡಿದರು.

ಹಿಂದೂ ಜನಜಾಗೃತಿ ಸಂಚಾಲಕ ಕುಶಾಲನಗರದ ಚಂದ್ರಶೇಖರ್ ಮಾತನಾಡಿ, ವಿಚಿತ್ರ ಆಕಾರದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಕೇವಲ ಮನೋರಂಜನಾ ಕಾರ್ಯಕ್ರಮಗಳನ್ನು ಬಿಟ್ಟು ಭಕ್ತಿ ಪ್ರಧಾನ, ದೇಶದ ಒಳಿತಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಧರ್ಮ ಕಾರ್ಯಕ್ಕೆ ಯುವ ಸಮುದಾಯವನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜೆ.ಸಿ. ಶೇಖರ್ ಉಪಸ್ಥಿತರಿದ್ದರು. ವಿವಿಧ ಪ್ರಮುಖರು ಹಾಜರಿದ್ದರು.

ಸಿದ್ದಾಪುರ: ಗೌರಿ ಗಣೇಶ ಪ್ರತಿಷ್ಟಾಪನೆ ಹಾಗೂ ವಿರ್ಸಜನೆ ಉತ್ಸವವನ್ನು ಶಾಂತ ರೀತಿಯಲ್ಲಿ ನಡೆಸಬೇಕೆಂದು ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ. ಸುಂದರ್‍ರಾಜ್ ಕರೆ ನೀಡಿದರು. ಸಿದ್ದಾಪುರದ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡುವ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಗೌರಿ ಗಣೇಶ ಉತ್ಸವವನ್ನು ಇತರರಿಗೆ ಸಮಸ್ಯೆಗಳು ಆಗದ ರೀತಿಯಲ್ಲಿ ಸೌರ್ಹದತೆಯಿಂದ ಶಾಂತಿಯುತವಾಗಿ ನಡೆಸಬೇಕೆಂದು ತಿಳಿಸಿದರು. ಗೌರಿ ಗಣೇಶ ಪ್ರತಿಷ್ಟಾಪನೆ ಹಾಗೂ ವಿರ್ಸಜನೆ ಉತ್ಸವವನ್ನು ನಡೆಸುವವರು ಬಲವಂತವಾಗಿ ಹಣವನ್ನು ವಸೂಲಿ ಮಾಡದಂತೆ ತಿಳಿಸಿದ ಅವರು ಯಾವದೇ ರೀತಿಯಲ್ಲಿ ಗೊಂದಲವನ್ನು ಸೃಷ್ಟಿ ಮಾಡದಂತೆ ಪ್ರತಿಷ್ಠಾಪನೆ ಮಾಡಿದ ಬಳಿಕ ಕಡಿಮೆ ಅವಧಿಯಲ್ಲಿ ವಿರ್ಸಜನೆಯನ್ನು ಮಾಡುವಂತೆ ಮನವಿ ಮಾಡಿಕೊಂಡರು. ಗೌರಿ ಗಣೇಶ ಪ್ರತಿಷ್ಟಾಪನೆ ಮಾಡುವವರು ಡಿ.ಜೆ ಬಳಸದಂತೆ ತಿಳಿಸಿದ ಅವರು ಕಾನೂನಿನ ಚೌಕಟಿನ ಒಳಗೆ ಕಾರ್ಯಕ್ರಮವನ್ನು ನಿಗದಿ ಪಡಿಸಿದ ಪೋಲಿಸ್ ಇಲಾಖೆಯ ನಿಬಂದನೆಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ ಹಾಗೂ ಸಿದ್ದಾಪುರ ಠಾಣಾಧಿಕಾರಿ ಜಿ.ಕೆ. ಸುಬ್ರಮಣ್ಯ ಪೋಲಿಸ್ ಇಲಾಖೆಯಿಂದ ಇರುವ ಷರತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಶನಿವಾರಸಂತೆ: ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಕಾನೂನನ್ನು ಪಾಲಿಸುವದು ಕಡ್ಡಾಯವಾಗಿದೆ ಎಂದು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ ಹೇಳಿದರು.

ಶನಿವಾರಸಂತೆ ಪೊಲೀಸ್ ಠಾಣಾ ಸಭಾಂಗಣದಲ್ಲಿ ಗೌರಿ-ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ವಿಶ್ವನಾಥ್ ಸ್ವಾಗತಿಸಿ, ರಾಧ ವಂದಿಸಿದರು.

ಕೈಕೇರಿ

ಈರಣ್ಣ ಕಾಲೋನಿ ಕೈಕೇರಿ ಶ್ರೀ ವಿಘ್ನೇಶ್ವರ ಯುವಕ ಸಂಘದ ವತಿಯಿಂದ 6ನೇ ವರ್ಷದ ಗೌರಿ ಗಣೇಶ ಉತ್ಸವ ಮೂರ್ತಿ ಪ್ರತಿಷ್ಠಾಪನೆಯನ್ನು ತಾ. 25 ರಂದು ನಡೆಸಲಾಗುವದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾ. 25 ರಂದು 9 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ನಂತರ 9 ದಿನಗಳು ಸಂಜೆ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ತಾ. 26 ರಿಂದ ಸೆಪ್ಟೆಂಬರ್ ಒಂದರ ತನಕ ವಿಘ್ನೇಶ್ವರ ಮೂರ್ತಿಗೆ ಪ್ರತಿ ಸಂಜೆ 7 ಗಂಟೆಗೆ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. 2 ರಂದು ಅಲಂಕೃತ ಮಂಟಪದಲ್ಲಿ ಗಣೇಶನ ಮೂರ್ತಿಯನ್ನು ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುವದು. ಅನ್ನಸಂತರ್ಪಣೆ, ಕ್ರೀಡಾಕೂಟ, ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಅರ್ವತ್ತೊಕ್ಲು: ಅರ್ವತ್ತೊಕ್ಲು ಮೈಸೂರಮ್ಮ ನಗರದ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯಿಂದ 15ನೇ ವರ್ಷದ ಉತ್ಸವ ನಡೆಸಲಾಗುವದು ಎಂದು ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾ. 24 ಬೆಳಗ್ಗೆ 8.15 ರಿಂದ 9 ಗಂಟೆಯ ಒಳಗೆ ಶ್ರೀ ಗೌರಿ ದೇವಿಯ ಪ್ರತಿಷ್ಠಾಪನೆಯನ್ನು ಗಂಗಾ ಪೂಜೆಯೊಂದಿಗೆ ಅರ್ವತ್ತೋಕ್ಲು ಗ್ರಾಮದಲ್ಲಿ ನೆರವೇರಿಸಲಾಗುವದು. 25 ರಂದು ಬೆಳಗ್ಗೆ 9.15 ರಿಂದ 10.20ರ ಒಳಗೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವದು.

27 ರಂದು ರಾತ್ರಿ 10 ಗಂಟೆಗೆ ಬೆಳ್ಳಿ ರಥದ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಗುವದು ಎಂದು ತಿಳಿಸಿದ್ದಾರೆ.

ಶಾಂತಿನಿಕೇತನ: ಮಡಿಕೇರಿಯ ಶಾಂತಿನಿಕೇತನ ಬಡಾವಣೆಯಲ್ಲಿ ತಾ. 25ರಿಂದ ಸೆ. 6 ರ ತನಕ ಶ್ರೀ ಗೌರಿ - ಗಣೇಶೋತ್ಸವ ಜರುಗಲಿದೆ. ಶಾಂತಿನಿಕೇತನ ಯುವಕ ಸಂಘದಿಂದ 39ನೇ ವರ್ಷದ ಗಣೇಶೋತ್ಸವದಲ್ಲಿ 13 ದಿವಸ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು, ಸೆ. 6 ರಂದು ಅಲಂಕೃತ ಮಂಟಪದಲ್ಲಿ ಉತ್ಸವಮೂರ್ತಿ ಇರಿಸಿ ನಗರದ ಮುಖ್ಯರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

ಓಂಕಾರ್ ಯುವ ವೇದಿಕೆ: ಮಡಿಕೇರಿ ಬ್ರಾಹ್ಮಣರ ಬೀದಿಯ ಓಂಕಾರ್ ಯುವ ವೇದಿಕೆ ವತಿಯಿಂದ 28ನೇ ವರ್ಷದ ಗೌರಿ - ಗಣೇಶೋತ್ಸವ ತಾ. 25ರಿಂದ 29ರ ತನಕ ಜರುಗಲಿದೆ. ಈ ಪ್ರಯುಕ್ತ ಚೌತಿಯಂದು ಬೆಳಿಗ್ಗೆ 11 ಗಂಟೆಗೆ ಗಣಪತಿ ಹೋಮ, ಪೂಜಾಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ನಿತ್ಯ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ತಾ. 29 ರಂದು ಮಧ್ಯಾಹ್ನ 12 ಗಂಟೆಗೆ ಪುಷ್ಪಾಲಂಕೃತ ಮಂಟಪದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಬಳಿಕ ರಾತ್ರಿ ವಿಸರ್ಜನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಡಗದಾಳು: ಕಡಗದಾಳುವಿನ ಶ್ರೀ ಬೊಟ್ಲಪ್ಪ ಯುವ ಸಂಘದಿಂದ 25ನೇ ವರ್ಷದ ಗೌರಿ- ಗಣೇಶೋತ್ಸವ ದೊಂದಿಗೆ ತಾ. 25 ರಿಂದ 29 ರ ತನಕ ಕಾರ್ಯಕ್ರಮವಿದೆ. 25ನೇ ವರ್ಷ ಸ್ಮರಣಾರ್ಥ ಬೆಳ್ಲಿ ಬೆನಕ-2017 ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹಾಕತ್ತೂರು: ಹಾಕತ್ತೂರಿನ ಶ್ರೀಗಣೇಶ ಸೇವಾ ಸಮಿತಿಯು 35ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ತೆಕ್ಕಡೆ ಚೇತನ್ ಹಾಗೂ ಕಾರ್ಯದರ್ಶಿಯಾಗಿ ಪಿ.ಈ.ದಿವಾಕರ ಆಯ್ಕೆಯಾಗಿದ್ದಾರೆ. ಚೌತಿಯಂದು ಅದ್ಧೂರಿ ಉತ್ಸವ ಆಚರಣೆಗೆ ತಯಾರಿ ನಡೆದಿದೆ.

ಬಕ್ಕಬಾಣೆ: ಬಿಳಿಗೇರಿ ಸಮೀಪದ ಬಕ್ಕಬಾಣೆಯ ಶ್ರೀಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 18ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಮಂಡುವಂಡ ಟಾಟಾ ದೇವಯ್ಯ ಹಾಗೂ ಕಾರ್ಯದರ್ಶಿಯಾಗಿ ಬಿ.ಎನ್.ಪ್ರಸಾದ್ ಆಯ್ಕೆಯಾಗಿದ್ದಾರೆ. ಇಲ್ಲಿ ಕೂಡ ಚೌತಿಯಂದು ಉತ್ಸವ ಆಚರಣೆಗೆ ತಯಾರಿ ನಡೆದಿದೆ.

ಪೊನ್ನಂಪೇಟೆ: ಪೊನ್ನಂಪೇಟೆ ನಾಡು ಹಳ್ಳಿಗಟ್ಟು ಗ್ರಾಮದಲ್ಲಿರುವ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ತಾ. 25 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಸಾಮೂಹಿಕ ಗಣಪತಿ ಹೋಮವನ್ನು ನಡೆಸಲು ತೀರ್ಮಾನಿಸಲಾಗಿದೆ.

ಧಾರ್ಮಿಕ್: ಮಡಿಕೇರಿ ಜಿ.ಟಿ. ರಸ್ತೆಯ ಧಾರ್ಮಿಕ್ ಯುವ ವೇದಿಕೆ ವತಿಯಿಂದ 10ನೇ ವರ್ಷದ ಉತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ತಾ. 25 ರಂದು ಬೆಳಿಗ್ಗೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಸಂಜೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ಮಂಗಳಾದೇವಿ ನಗರ: ಶ್ರೀ ಆದಿಪರಾಶಕ್ತಿ ಯುವಕ ಸಂಘದ ವತಿಯಿಂದ 42ನೇ ವರ್ಷದ ಉತ್ಸವ ಆಚರಣೆ ನಡೆಯಲಿದ್ದು, ಸೆಪ್ಟೆಂಬರ್ 9 ರಂದು ಉತ್ಸವ ಮೂರ್ತಿಯ ವಿಸರ್ಜನೆ ನೆರವೇರಲಿದೆ.

ವೀರಾಜಪೇಟೆ: ಬಸವೇಶ್ವರ ದೇವಸ್ಥಾನದಲ್ಲಿ ಗೌರಿ-ಗಣೇಶೋತ್ಸವ ಪ್ರಯುಕ್ತ ತಾ. 24 ರಿಂದ ಸೆ. 5 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾಯ್ಸ್ ಆಫ್ ವೀರಾಜಪೇಟೆ, ಡ್ಯಾನ್ಸ್-ಡ್ಯಾನ್ಸ್, ಮ್ಯಾಜಿಕ್ ಶೋ, ನೃತ್ಯ ರೂಪಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ಗೋಣಿಕೊಪ್ಪಲು: ಗಣೇಶೋತ್ಸವ ಹಾಗೂ ಬಕ್ರೀದ್ ಸಂದರ್ಭ ಅಹಿತಕರ ಘಟನೆಗಳು ನಡೆದರೆ ಸಮಿತಿ ಸದಸ್ಯರುಗಳೇ ನೇರ ಹೊಣೆ ಹೊರಬೇಕಾಗುತ್ತದೆ. ಪೊಲೀಸ್ ಇಲಾಖೆ ನೀಡಿರುವ ನಿಯಮದಂತೆ ಸಾರ್ವಜನಿಕವಾಗಿ ಹಬ್ಬ ಆಚರಿಸಬೇಕು ಎಂದು ವೃತ್ತ ನಿರೀಕ್ಷಕ ಪಿ.ಕೆ. ರಾಜು ಸಲಹೆ ನೀಡಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮತ್ತು ಬಕ್ರೀದ್ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಉಪ ನಿರೀಕ್ಷಕ ಹೆಚ್.ವೈ. ರಾಜು, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಪ್ರಮುಖ ಸದಸ್ಯರುಗಳಾದ ಕುಲ್ಲಚಂಡ ಗಣಪತಿ, ಪ್ರಭಾವತಿ ಉಪಸ್ಥಿತರಿದ್ದರು.

ಸುಂಟಿಕೊಪ್ಪ: ಸಮೀಪದ ಹೊರೂರು ಮಠದ ಸಾರ್ವಜನಿಕ ಶ್ರೀ ಗೌರಿ-ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ತಾ. 25 ರಿಂದ 27 ರವರೆಗೆ ಗೌರಿ-ಗಣೇಶೋತ್ಸವ ನಡೆಯಲಿದೆ.

ಚೆಟ್ಟಳ್ಳಿ: ಗೌರಿ-ಗಣೇಶೋತ್ಸವದ ಹಿನ್ನೆಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ನೇತೃತ್ವದಲ್ಲಿ ಚೆಟ್ಟಳ್ಳಿ ಪೊಲೀಸ್ ಉಪ ಠಾಣೆ ಯಲ್ಲಿ ಶಾಂತಿ ಸಭೆ ನಡೆಯಿತು.

ಗೋಣಿಕೊಪ್ಪಲು: ಹಳ್ಳಿಗಟ್ಟು ಗ್ರಾಮದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ತಾ. 25 ರಂದು ಬೆಳಿಗ್ಗೆ 7 ಗಂಟೆಗೆ ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಗಣಪತಿ ಹೋಮ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ನಾಪೆÇೀಕ್ಲು: ಗೌರಿ-ಗಣೇಶ, ಬಕ್ರೀದ್ ಹಬ್ಬಗಳನ್ನು ಜಾತಿ, ಮತ ಭೇದ ಮರೆತು ಸೌಹಾರ್ದತೆಯಿಂದ ಶಾಂತಿಯುತವಾಗಿ ನಡೆಸಬೇಕು ಎಂದು ಮಡಿಕೇರಿಯ ಡಿವೈಎಸ್ಪಿ ಸುಂದರ್ ರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹಬ್ಬಗಳ ಪ್ರಯುಕ್ತ ನಾಪೆÀÇೀಕ್ಲು ಮಹಿಳಾ ಸಮಾಜದಲ್ಲಿ ಕರೆಯ ಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ನಾಪೆÇೀಕ್ಲು ಪಟ್ಟಣದಲ್ಲಿ ಸೆ. 1 ರಂದು ನಡೆಯುವ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯ ಹಿನ್ನೆಲೆ ಮಧ್ಯಾಹ್ನ 12 ಗಂಟೆಯಿಂದ ಹಳೇ ತಾಲೂಕು ರಸ್ತೆಯ ಪೆಟ್ರೋಲ್ ಬಂಕ್‍ನಿಂದ ಮಾರುಕಟ್ಟೆಯವರೆಗೆ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ ಅವರು ಕಾನೂನು ಉಲ್ಲಂಘಿಸು ವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಕೊಟ್ಟಮುಡಿ ಹಂಸ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ ನಾವೆಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ನಾವೆಲ್ಲರೂ ಒಂದೇ ಎಂಬದನ್ನು ಪ್ರದರ್ಶಿಸಬೇಕು ಎಂದರು. ಎಂ.ಎ. ಮನ್ಸೂರ್ ಅಲಿ ಪಟ್ಟಣದಲ್ಲಿ ಗಾಂಜಾ ಮಾರಟ ಎಗ್ಗಿಲ್ಲದೆ ನಡೆಯುತ್ತಿದೆ. ಯುವಕರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪಟ್ಟಣದಲ್ಲಿ ನಡೆಯುವ ಸಣ್ಣ ಪುಟ್ಟ ಅಹಿತಕರ ಘಟನೆಗಳಿಗೆ ಇದೇ ಕಾರಣವಾಗಿದೆ. ಪೆÇಲೀಸ್ ಇಲಾಖೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಕೂಡಿಗೆ: ಕೂಡಿಗೆಯ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ 11ನೇ ವರ್ಷದ ಶ್ರೀ ಗೌರಿ-ಗಣೇಶೋತ್ಸವವನ್ನು ತಾ. 25 ರಂದು ಹಮ್ಮಿಕೊಳ್ಳಲಾಗಿದೆ.

ತಾ. 27 ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೂಡಿಗೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ.ಟಿ. ಪ್ರವೀಣ್ ತಿಳಿಸಿದ್ದಾರೆ.

ವೀರಾಜಪೇಟೆ: ಸುಮಾರು 200 ವರ್ಷ ಇತಿಹಾಸವಿರುವ, 80 ವರ್ಷದ ವಯೋವೃದ್ದೆ ಅರ್ಚಕಿಯಾಗಿರುವ, ಗಣಪತಿಯ ವಿಗ್ರಹವಿರುವ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲ ಆಂಜನೆಯ ದೇವಾಲಯದ ವತಿಯಿಂದ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿ ವತಿಯಿಂದ ಸ್ಥಳೀಯ ನಾಲ್ಕು ವಾರ್ಡ್‍ನ ಭಕ್ತಾದಿಗಳು ಸೇರಿ ಈ ಬಾರಿ ಪ್ರಥಮವಾಗಿ ಗಣೇಶೋತ್ಸªವನ್ನು ಅದ್ದೂರಿಯಿಂದÀ ಆಚರಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಪಾಡಂಡ ರಚನ್ ಮೇದಪ್ಪ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ತಾ. 25 ರಂದು ಅಪರಾಹ್ನ 12.30 ಕ್ಕೆ ವಿಘ್ನೇಶ್ವರ ಮೂರ್ತಿಯ ಪ್ರತಿಷ್ಠಾಪನೆ, ಸೆ. 5 ರಂದು ರಾತ್ರಿ 7 ಕ್ಕೆ ಮಹಾಪೂಜಾ ಸೇವೆಯ ಬಳಿಕ ವಿದ್ಯುತ್ ಅಲಂಕೃತ ಮಂಟಪ ಹಾಗೂ ವಾದ್ಯಮೇಳ ದೊಂದಿಗೆ ಗಣೇಶನ ಮೂರ್ತಿ ಯನ್ನು ಗೌರಿ ಕೆರೆಯಲ್ಲಿ ವಿರ್ಸಜಿಸಲಾಗುತ್ತದೆ ಎಂದು ರಚನ್ ಮೇದಪ್ಪ ಹೇಳಿದರು. ಕಾರ್ಯದರ್ಶಿ ಸುನಿಲ್ ನಂಜಪ್ಪ ಮಾತನಾಡಿ, ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಹೇಮಂತ್ ಶೆಟ್ಟಿ ಮತ್ತು ಚೇತನ್ ಮುತ್ತಣ್ಣ, ಖಜಾಂಚಿ ಪುಪ್ಪಣಮಾಡ ದರ್ಶನ್, ಸದಸ್ಯರಾದ ಸಾನ್ ಚಂಗಪ್ಪ ಕಿರಣ್, ಕಾರ್ಯಪ್ಪ, ನಾಚಪ್ಪ, ಯೋಗೇಶ್, ಐಚಮಾಡ ಅನಿಲ್ ಉಪಸ್ಥಿತರಿದ್ದರು.

ಮೂರ್ನಾಡು: ಗೌರಿ-ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಶಾಂತಿ ಸಭೆ ಮೂರ್ನಾಡು ಸಮುದಾಯ ಭವನದಲ್ಲಿ ನಡೆಯಿತು.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಗೌರಿ-ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆವರೆಗೆ ಶಾಂತಿ ಸುವ್ಯವಸ್ಥೆ ಮತ್ತು ಕಾನೂನು ಪಾಲನೆ ಮಾಡುವದಕ್ಕೆ ಸಮಿತಿ ಮುಂದಾಗಬೇಕು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಪ್ರತಿಯೊಬ್ಬರು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಕೊಳ್ಳಬೇಕು. ಯಾವದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡದಂತೆ ಹಬ್ಬವನ್ನು ಆಚರಣೆ ಮಾಡಿ ಎಂದು ಕರೆ ನೀಡಿದರು.

ಸಭೆಯಲ್ಲಿ ಮೂರ್ನಾಡು ಪೊಲೀಸ್ ಉಪಠಾಣೆ ವ್ಯಾಪ್ತಿಯ ವಿವಿಧ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಮಸೀದಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಬೋಜಪ್ಪ ಉಪಸ್ಥಿತರಿದ್ದರು.