ನವದೆಹಲಿ, ಆ. 22: ಭಾರತ ಹಾಕಿ ತಂಡದ ಆಟಗಾರ ಎಸ್.ವಿ. ಸುನಿಲ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯ ಗರಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು ಮಹಿಳಾ ತಂಡದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ 17 ಸಾಧಕರು 2017ರ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಕೇತ್ ಮೈನೆನಿ (ಟೆನ್ನಿಸ್), ಎಸ್‍ಎಸ್ಪಿ ಚೌರಾಸಿಯಾ (ಗಾಲ್ಫರ್), ಮರಿಯಪ್ಪನ್ (ಪ್ಯಾರಾ ಅಥ್ಲೀಟ್), ವರುಣ್ ಸಿಂಗ್ ಭಾಟಿ (ಪ್ಯಾರಾ ಅಥ್ಲೀಟ್), ವಿಜೆ ಸುರೇಖ (ಆರ್ಚರಿ), ಕುಶ್ಬೀರ್ ಕೌರ್ (ಅಥ್ಲೀಟ್), ಅರೋಕಿಯ (ಅಥ್ಲೀಟ್), ಪ್ರಶಾಂತಿ ಸಿಂಗ್ (ಬಾಸ್ಕೆಟ್ ಬಾಲ್), ಲೈಶ್ರಾಮ್ ಡಿಬೆಂಡ್ರೋ ಸಿಂಗ್ (ಬಾಕ್ಸಿಂಗ್), ಒನಮ್ ಬೆಂಬೆಮ್ ದೇವಿ (ಫುಟ್ಬಾಲ್), ಜಸ್ವೀರ್ ಸಿಂಗ್ (ಕಬಡ್ಡಿ), ಪಿಎನ್ ಪ್ರಕಾಶ್ (ಶೂಟಿಂಗ್), ಎ ಅಮಲ್ರಾಜ್ (ಟೇಬಲ್ ಟೆನ್ನಿಸ್), ಸತ್ಯವರ್ತ್ ಕಡಿಯಾನ್ (ಕುಸ್ತಿ), ಇವರುಗಳು ಅರ್ಜುನ ಪ್ರಶಸ್ತಿ ವಿಜೇತರು.
2017ರ ಖೇಲ್ ರತ್ನ ಪ್ರಶಸ್ತಿ ವಿಜೇತರು: ಭೂಪೇಂದ್ರ ಸಿಂಗ್ (ಅಥ್ಲೀಟ್), ಸಯ್ಯದ್ ಶಹೀಬ್ ಹಕ್ಕಿಂ (ಫುಟ್ಬಾಲ್), ಸುಮರೈ ಟೆಟೆ (ಹಾಕಿ), ಲೇಟ್ ಡಾ. ಆರ್ ಗಾಂಧಿ (ಅಥ್ಲೀಟ್).