ಸೋಮವಾರಪೇಟೆ, ಆ. 22: ತಾಲೂಕು ಶ್ರೀ ನಾರಾಯಣಗುರು ಸೇವಾ ಸಮಿತಿ ಹಾಗೂ ತುಳುನಾಡ ಬಿಲ್ಲವ ಮಹಿಳಾ ಸಂಘಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಆಟಿ ಸಂಭ್ರಮಾಚರಣೆಯ ಬಿ.ಜಿ. ಶೇಖರ್ ಸ್ಮರಣಾರ್ಥ ಹಗ್ಗಜಗ್ಗಾಟ ಸ್ಪರ್ಧೆಯ ಟ್ರೋಫಿಯನ್ನು ಸತತ ನಾಲ್ಕನೇ ಬಾರಿಗೆ ಜಾರನಮನೆ ತಂಡ ತನ್ನ ಮುಡಿಗೇರಿಸಿಕೊಂಡಿತು. ಚಂದನಮಕ್ಕಿ ತಂಡ ದ್ವಿತೀಯ ಬಹುಮಾನ ಪಡೆಯುವಲ್ಲಿ ತೃಪ್ತಿಪಟ್ಟುಕೊಂಡಿತು.

ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದಿವಂಗತ ಲಕ್ಷ್ಮಿ ಸ್ಮರಣಾರ್ಥ ಟ್ರೋಫಿಯನ್ನು ತುಳುನಾಡ ಬಿಲ್ಲವ ಮಹಿಳಾ ತಂಡ ತನ್ನದಾಗಿಸಿಕೊಂಡರೆ, ಕೋಟಿ ಚನ್ನಯ್ಯ ತಂಡ ದ್ವಿತೀಯ ಬಹುಮಾನ ಪಡೆಯಿತು. ಪುರುಷರ ಭುಜ ಗುದ್ದಾಟ ಸ್ಪರ್ಧೆಯಲ್ಲಿ ರುಕ್ಮಯ್ಯ (ಪ್ರ), ಪ್ರಕಾಶ್(ದ್ವಿ), ರವಿ(ತೃ), ಮಹಿಳೆಯರ ವಿಭಾಗದಲ್ಲಿ ಸಂಧ್ಯಾ (ಪ್ರ), ರೋಹಿಣಿ (ದ್ವಿ), ಚೈತ್ರ (ತೃ). ಜ್ಞಾಪಕ ಶಕ್ತಿ ಸ್ಪರ್ಧೆಯಲ್ಲಿ ಬೃಂದಾ ರಮೇಶ್ (ಪ್ರ), ನಿವೇದಿತಾ(ದ್ವಿ), ಸ್ವಾತಿ ತೃತೀಯ ಸ್ಥಾನ ಗಳಿಸಿದರು.

ಬಾಲಕರ ವಿಭಾಗದ ಒಂಟಿ ಕಾಲಿನ ಓಟದಲ್ಲಿ ಬಿ.ಬಿ. ರಿತೇಶ್ (ಪ್ರ), ವರುಣ್(ದ್ವಿ), ದೀಪು (ತೃ). ಬಕೆಟ್‍ಗೆ ಚೆಂಡು ಹಾಕುವ ಸ್ಪರ್ಧೆಯಲ್ಲಿ ರಿತೇಶ್(ಪ್ರ), ರಾಜೇಶ್(ದ್ವಿ), ಆದರ್ಶ್(ತೃ). ಬಲೂನ್ ಊದಿ ಒಡೆಯುವ ಸ್ಪರ್ಧೆಯಲ್ಲಿ ದರ್ಶನ್(ಪ್ರ), ಪವನ್(ದ್ವಿ), ಜ್ಞಾನೇಶ್(ತೃ). ಚಮಚದಲ್ಲಿ ಬಾಲ್ ಎತ್ತುವ ಸ್ಪರ್ಧೆಯಲ್ಲಿ ಕಾವ್ಯ(ಪ್ರ), ಸಿಂಚನ(ದ್ವಿ), ಸ್ವಾತಿ ತೃತೀಯ ಸ್ಥಾನ ಪಡೆದರು.

ಪಿರಮಿಡ್ ಜೋಡಣೆಯಲ್ಲಿ ಸಂಜನಾ(ಪ್ರ), ದೀಕ್ಷಿತ್(ದ್ವಿ), ಲಕ್ಷ್ಮಿ(ತೃ). ಸ್ಟ್ರಾ ಊದುವ ಬಾಲಕರ ವಿಭಾಗದಲ್ಲಿ ಪವನ್(ಪ್ರ), ಪ್ರಣವ್(ದ್ವಿ), ಯೋಗಿತ್(ತೃ). ಬಾಲಕಿಯರ ವಿಭಾಗದಲ್ಲಿ ವಿದ್ಯಾ(ಪ್ರ), ಗಗನಶ್ರೀ(ದ್ವಿ), ವಿಶ್ಮಾ(ತೃ). ಪುಟಾಣಿಗಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ವರ್ಣ ಹಾಗೂ ಇಸ್‍ಮಿತ್(ಪ್ರ), ಚಿಂತನಾ ಹಾಗೂ ಕಲ್ಪಕ್ (ದ್ವಿ), ಅಚಲ ಹಾಗೂ ಓಜಸ್ (ತೃ). ಬಕೆಟ್‍ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಜನ್ವಿತಾ ಹಾಗೂ ಪ್ರದ್ವಿತ್(ಪ್ರ), ಅಚಲ ಹಾಗೂ ದಿಗಂತ್(ದ್ವಿ), ಶಶಾಂಕ್(ತೃ) ಬಹುಮಾನ ಗಳಿಸಿದರು.

ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರುಗಳಿಗೆ ಬೆಂಗಳೂರಿನ ಗೋಕುಲ್‍ದಾಸ್ ಎಕ್ಸ್‍ಪೋಟ್ರ್ಸ್ ಸಂಸ್ಥೆಯ ಉಪಾಧ್ಯಕ್ಷ ಸಿ. ಲಕ್ಷ್ಮಣ್ ಪೂಜಾರಿ, ಮಾಜಿ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ಉದ್ಯಮಿಗಳಾದ ಬಿ.ಎಸ್. ಸುಂದರ್, ಬಿ.ಎಸ್. ಶ್ರೀಧರ್, ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್‍ರವರುಗಳು ಬಹುಮಾನ ವಿತರಿಸಿದರು.