ಗೋಣಿಕೊಪ್ಪಲು, ಆ.22: ಗೋಣಿಕೊಪ್ಪಲಿನಲ್ಲಿ ಈ ಹಿಂದೆ ಹಾಡಹಗಲೇ ನಡೆದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ನಾರಾಯಣ ಸ್ವಾಮಿ ಅವರ ಪತ್ನಿ ಪುಷ್ಪಾ ಕೊಲೆ, ಹಾತೂರುವಿನಲ್ಲಿ ಜರುಗಿದ ಕೊಕ್ಕಂಡ ದಂಪತಿ ಭೀಕರ ಹತ್ಯೆ ಪ್ರಕರಣದ ನಂತರ ನಿನ್ನೆ ತಾ. 21 ರ ರಾತ್ರಿ ನಡೆದ ಯುವಕನ ಹತ್ಯೆ ಇಡೀ ಗೋಣಿಕೊಪ್ಪಲು ನಗರವನ್ನೆ ತಲ್ಲಣಗೊಳಿಸಿದೆ. ನಿರುಪದ್ರವಿ, ಸಾಧು ಸ್ವಭಾವದ, ಕುಕ್ಕೆ ವ್ಯಾಪಾರ ಹಾಗೂ ಗೂಡ್ಸ್ ಆಟೋ ಬಾಡಿಗೆಗೆ ಓಡಿಸುತ್ತಿದ್ದ 32 ವಯಸ್ಸಿನ ಯುವಕ ಎಂ. ರಮೇಶ್ ಹಂತಕರ ಕ್ರೂರತನಕ್ಕೆ ಬಲಿಯಾದ ಯುವಕ. ಮೊನ್ನೆ ತಾ. 17 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ರೇವತಿ ಎಂಬ ಯುವತಿಯೊಡನೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಬಂದಿದ್ದ ಯುವಕ ಗೋಣಿಕೊಪ್ಪಲು-ಅರುವತ್ತೊಕ್ಕಲು ಮುಖ್ಯರಸ್ತೆ ಬದಿಯಲ್ಲಿರುವ ಖಾಲಿ ನಿವೇಶನದಲ್ಲಿ ಇಂದು ಶವವಾಗಿ ಗೋಚರವಾಗಿದ್ದು ಹಸೆಮಣೆ ಏರುವ ಮೊದಲೇ ರುದ್ರಭೂಮಿ ಸೇರುವಂತಾಗಿದೆ.
ಗೋಣಿಕೊಪ್ಪಲಿನ ಗ್ರಾ.ಪಂ.ಹಾಲಿ ಅಧ್ಯಕ್ಷೆ ಸೆಲ್ವಿ ಸಹೋದರ ಹಾಗೂ ಮಾಜಿ ಗ್ರಾ.ಪಂ.ಸದಸ್ಯೆ ರಾಜೇಶ್ವರಿ ಪುತ್ರ ರಮೇಶ್‍ನನ್ನು ಆಗಂತುಕರು ಉಪಾಯದಿಂದ ಪಾರ್ಟಿ ಮಾಡುವದಾಗಿ ನಂಬಿಸಿ ನಿನ್ನೆ ರಾತ್ರಿ 11 ಗಂಟೆ ನಂತರ ಹರಿತವಾದ ಕತ್ತಿ ಬಳಸಿ ಮಾರಣಾಂತಿಕವಾಗಿ ದೇಹದ ವಿವಿಧ ಭಾಗಗಳಿಗೆ ಕಡಿದು ಕುತ್ತಿಗೆಯನ್ನು ಸುಮಾರು 15 ಇಂಚು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವದು ಗೋಚರವಾಗಿದೆ.
(ಮೊದಲ ಪುಟದಿಂದ) ಅರುವತ್ತೊಕ್ಕಲು ಮೈಸೂರಮ್ಮ ಕಾಲೋನಿಗೆ ತೆರಳುವ ಮುಖ್ಯರಸ್ತೆ ಯಿಂದ ಕೇವಲ 100 ಮೀಟರ್ ಅಂತರದಲ್ಲಿ ಗೂಡ್ಸ್ ಅಟೋದಿಂದ ಹೊರಗೆಳೆದು ಹತ್ಯೆಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಗೂಡ್ಸ್ ಆಟೋದ ಒಳಭಾಗ ಮೂರು ಬಾಟಲಿ ಬಿಯರ್, ಅರ್ಧ ಬಾಕಿ ಇರುವ ಬ್ರಾಂದಿ ಬಾಟಲ್ ದೊರೆತಿದೆ. ಒಟ್ಟು ನಾಲ್ಕು ಬಿಯರ್ ಬಾಟಲಿಯಲ್ಲಿ ಮೊದಲ ಬಿಯರ್ ಕುಡಿಯುತ್ತಿದ್ದ ಸಂದರ್ಭವೇ ಕತ್ತಿಯಿಂದ ಹಲ್ಲೆ ನಡೆದಿದೆ. ಸಿಗರೇಟ್ ಪ್ಯಾಕ್, ಚಿಕನ್ ಕಬಾಬ್ ಹಾಗೂ ಈರುಳ್ಳಿ ಇದ್ದು, ಪರಿಚಿತರೇ ಉಪಾಯವಾಗಿ ಕರೆತಂದು ಭೀಕರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವದಾಗಿ ಪೆÇಲೀಸರು ಶಂಕಿಸಿದ್ದಾರೆ.
ಇತ್ತೀಚೆಗಷ್ಟೇ ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿ ಮುಚ್ಚುವಂತೆ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಕಾವೇರಿ ಬಡಾವಣೆ
(ವೆಂಕಟಪ್ಪ ಲೇಔಟ್) ಹಾಗೂ ಮೈಸೂರಮ್ಮ ಕಾಲೋನಿ ನಿವಾಸಿಗಳು, ಮಹಿಳೆಯರು, ಮಕ್ಕಳು ತೀವ್ರ ಪ್ರತಿಭಟನೆ ನಡೆಸಿದ್ದರಲ್ಲದೆ ‘ ಇಲ್ಲಿ ಹೆಣ ಬಿದ್ದರೆ ಅಬಕಾರಿ ಇಲಾಖೆಯೇ ಹೊಣೆ’ ಎಂದು ಪೆÇಲೀಸ್ ಠಾಣೆಯಲ್ಲಿಯೂ ಆರೋಪಿಸಿದ್ದರು. ಇದೀಗ ಕಾಕತಾಳಿಯ ಎಂಬಂತೆ ಹತ್ಯೆ ನಡೆದು ಹೋಗಿದೆ. ಗೋಣಿಕೊಪ್ಪಲಿ ನಲ್ಲಿ ಇದೀಗ ಮೂರು ಮದ್ಯದಂಗಡಿ ಗಳು ತೆರೆಯಲ್ಪಟ್ಟಿದ್ದು, ಎಲ್ಲ ಅಂಗಡಿಗಳಲ್ಲಿ ಸಿಸಿ ಟಿವಿ ಇನ್ನೂ ಅಳವಡಿಕೆಯಾಗಿಲ್ಲ. ಹಂತಕರು ಮದ್ಯವನ್ನು ಯಾವ ಅಂಗಡಿಯಿಂದ ಖರೀದಿಸಿರಬಹುದು ಎಂಬ ಬಗ್ಗೆಯೂ ತನಿಖೆ ಆರಂಭಗೊಂಡಿದೆ.
ಎಂ.ರಮೇಶ್‍ಗೆ ಬಿಯರ್ ಮಾತ್ರ ಸೇವನೆ ಮಾಡುವ ಹವ್ಯಾಸವಿದ್ದು ಗೂಡ್ಸ್ ಆಟೋ ಡ್ರೈವರ್ ಸೀಟ್‍ನಲ್ಲಿ ಕುಳಿತು ಬಿಯರ್ ಸೇವನೆ ಮಾಡುವ ಸಂದರ್ಭವೇ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಪ್ರತಿರೋಧವಾಗಿ ಕೈಯನ್ನು ಅಡ್ಡ ತಂದ ಸಂದರ್ಭ ಎರಡು ಕೈ, ಭುಜ, ಎದೆ ಭಾಗಕ್ಕೂ ಆಳವಾದ ಗಾಯಗಳಾಗಿವೆ. ಇಬ್ಬರೂ ಅಥವಾ ಹೆಚ್ಚಿನವರು ಸೇರಿ ಕೊಲೆ ಮಾಡುವ ದುರುದ್ದೇಶದಿಂದಲೇ ಮುಖ್ಯ ರಸ್ತೆಯಿಂದ ನಿರ್ಜನ ಸ್ಥಳಕ್ಕೆ ಕರೆ ತಂದು ಮದ್ಯಪಾನ ಮಾಡುವ ನಾಟಕವಾಡಿದ್ದಾರೆ.
ರಾತ್ರಿ 11 ಗಂಟೆ ನಂತರ ಮೊಬೈಲ್ ಸಂಪರ್ಕ ಕಡಿತ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿಯ ಪ್ರಕಾರ ಸಹೋದರ ರಮೇಶ್ ಪ್ರತಿದಿನ 9 ಗಂಟೆಗೂ ಮುನ್ನವೇ ಮನೆ ಸೇರುತ್ತಿದ್ದ. ರಾತ್ರಿ 8 ಗಂಟೆಯಿಂದಲೂ ತಾನೂ ಹಾಗೂ ಬೆಂಗಳೂರಿನಿಂದ ಭಾವಿ ಪತ್ನಿ ರೇವತಿ ಸುಮಾರು 10 ಗಂಟೆಯವರೆಗೂ ಕರೆ ಮಾಡಿದರೂ ‘ಬ್ಯುಸಿ’ ಬರುತ್ತಿದ್ದು, 10.15 ರ ನಂತರ ರೇವತಿಗೆ ಕರೆ ಮಾಡಿ ‘ಪರಿಚಿತರ ಬಾಡಿಗೆ ದೊರೆತ್ತಿದ್ದು ಮನೆಗೆ ಹಿಂತಿರುಗಲು ತಡವಾಗಬಹುದು’ ಎಂದು ರಮೇಶ್ ಉತ್ತರಿಸಿದ ಮಾಹಿತಿ ಲಭ್ಯವಾಗಿದ್ದು ಸುಮಾರು 11 ಗಂಟೆಯವರೆಗೂ ಫೆÇೀನ್ ಸಂಪರ್ಕದಲ್ಲಿದ್ದ ಹಿನ್ನೆಲೆ ನಂತರವೇ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ರಮೇಶ್‍ನ ಸ್ಯಾಮ್‍ಸಂಗ್ ಫೆÇೀನ್ ಪೆÇಲೀಸರ ವಶದಲ್ಲಿದ್ದು ಮಹತ್ತರ ಕುರುಹು ನೀಡುವ ಸಾಧ್ಯತೆ ಇದೆ, ಬೆರಳಚ್ಚು ತಜ್ಞರ ತಪಾಸಣೆ, ಬಿದ್ದಿದ್ದ ಕೂದಲು ಸಂಗ್ರಹ, ಮದ್ಯದ ಬಾಟಲ್ ‘ಬ್ಯಾಚ್ ನಂ’ ಆಧಾರದಲ್ಲಿ ಮದ್ಯಗಂಗಡಿ ಪತ್ತೆ ಕಾರ್ಯ, ಕೊಲೆ ಮಾಡುವ ಮೂಲ ಉದ್ದೇಶವನ್ನು ಕೂಡಲೇ ಪತ್ತೆ ಮಾಡುವ ಸಾಧ್ಯತೆಯನ್ನು ಪೆÇಲೀಸ್ ಮೂಲಗಳು ತಿಳಿಸಿವೆ.
ಸಂಶಯಾತ್ಮಕ ನಡೆ: ಓರ್ವನ ವಿಚಾರಣೆ
ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ವಿಚಾರಣೆ ನಡೆಯುತ್ತಿದೆ. ಮನೋಜ್ ಎಂಬ ಅರುವತ್ತೊಕ್ಕಲು ನಿವಾಸಿ ಪೈಂಟರ್ ಕಾರ್ಮಿಕನಾಗಿದ್ದು, ರಾತ್ರಿ 10.15 ಗಂಟೆ ಸುಮಾರಿಗೆ ಅರುವತ್ತೊಕ್ಕಲುವಿನ ರೇಣು ಎಂಬ ಗೂಡ್ಸ್ ಆಟೋ ಚಾಲಕರಲ್ಲಿಗೆ ತೆರಳಿ ‘ ತನ್ನ ಮಿತ್ರ ರಮೇಶ್‍ನ ಗೂಡ್ಸ್ ಅಟೋ ಕೆಸರಿನಲ್ಲಿ ಸಿಲುಕಿದೆ, ಹೊರತೆಗೆಯಲು ಬನ್ನಿ ಎಂದು ಕರೆದಿದ್ದಾನೆ. ಆದರೆ, ರೇಣು ರಾತ್ರಿ ಬರಲು ನಿರಾಕರಿಸಿದ್ದಾರೆನ್ನ ಲಾಗಿದೆ. ನಂತರ 11.30 ಗಂಟೆ ಸುಮಾರಿಗೆ ಅರುವತ್ತೊಕ್ಕಲುವಿನ ನಿವಾಸಿ ಫಿಲಿಪೆÇೀಸ್ ಮ್ಯಾಥ್ಯು ಅವರ ಮನೆಗೆ ತೆರಳಿ ಮಿತ್ರನನ್ನು ಯಾರೋ ಕಡಿದಿದ್ದಾರೆ. ಗೂಡ್ಸ್ ಆಟೋ ಸಿಲುಕಿಕೊಂಡಿದೆ ಎಂದು ಸಹಾಯಕ್ಕಾಗಿ ಕರೆದಾಗ ಪೆÇಲೀಸ್ ಠಾಣೆಗೆ ದೂರವಾಣಿ ಕರೆ ಮಾಡು. ಸ್ನೇಹಿತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸು ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ 6.15 ಗಂಟೆ ಸುಮಾರಿಗೆ ಮನೋಜ್ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರಿಗೆ ಕರೆ ಮಾಡಿ ಯಾವದೋ ಸಹಾಯ ಬೇಕಾಗಿದೆ ಎಂದು ಕೇಳಲಾಗಿ 8.30 ರ ನಂತರ ಮನೆಗೆ ಬಾ ಎಂದು ಹೇಳಿದ್ದಾರೆ.
ಈ ಹಂತದಲ್ಲಿ ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟ ಮಾಡುವ ಉಂಬೈ ಎನ್ನುವವರು ಅರುವತ್ತೊಕ್ಕಲು ಕಡೆ ಮೀನು ವ್ಯಾಪಾರಕ್ಕಾಗಿ ತೆರಳುವಾಗ ಗೂಡ್ಸ್ ಆಟೋ ನೋಡಿ ಹತ್ತಿರ ಹೋಗಿ ಪರಿಶೀಲಿಸಿದಾಗ ರಮೇಶ್ ಹತ್ಯೆ ಬೆಳಕಿಗೆ ಬಂದಿದೆ. ಕೂಡಲೇ ಪೆÇಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಬೆಳಿಗ್ಗೆ ಸುಮಾರು 7.30 ಗಂಟೆಗೆ ಮಾಹಿತಿ ಪಡೆದ ಪೆÇಲೀಸ್ ನಿರೀಕ್ಷಕ ಹೆಚ್.ವೈ. ರಾಜು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರಿಗೆ ಮಾಹಿತಿ ರವಾನೆ ಮಾಡಿ ಶಂಕಿತ ವ್ಯಕ್ತಿ ಮನೋಜ್‍ನನ್ನು ವಶಕ್ಕೆ ಪಡೆದಿದ್ದಾರೆ.
ಅಂದಾಜು ಮೂರು ಮಂದಿ ಸೇರಿ ಹತ್ಯೆ ಮಾಡಿರುವ ಸಾಧ್ಯತೆ ಇದ್ದು ವೀರಾಜಪೇಟೆ ಡಿವೈಎಸ್‍ಪಿ ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದು ಹಂತಕರ ಪತ್ತೆಗೆ ನಿರ್ದೇಶನ ನೀಡುತ್ತಿದ್ದಾರೆ.
ಮಡಿಕೇರಿಯಿಂದ ಶ್ವಾನ ದಳ, ಬೆರಳಚ್ಚು ತಜ್ಞರು
ಮಡಿಕೇರಿಯಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ವಿದ್ವಂಸಕ ಕೃತ್ಯ ತಪಾಸಣಾ ಪತ್ತೆದಳ ವ್ಯಾನ್‍ನಲ್ಲಿ ಇಂದು 12 ಗಂಟೆ ಸುಮಾರಿಗೆ ಆಗಮಿಸಿದರು. ಡಾಗ್ ಸ್ಕ್ವಾಡ್ ನ ಜಿತೇಂದ್ರ ರೈ ಹಾಗೂ ಮನಮೋಹನ್, ಬೆರಳಚ್ಚು ತಜ್ಞರಾದ ಸಂತೋಷ್, ಜಯಕುಮಾರ್ ಸುಮಾರು 1 ಗಂಟೆ ಕಾಲ ತಪಾಸಣೆ ನಡೆಸಿತು. ರಮೇಶ್ ಶವ ಹಾಗೂ ಗೂಡ್ಸ್ ಆಟೋದಲ್ಲಿದ್ದ ವಸ್ತುಗಳ ವಾಸನೆ ಜಾಡು ಹಿಡಿದ ಲಿಯೋ ಶ್ವಾನ ಅರುವತ್ತೊಕ್ಕಲು ಮುಖ್ಯರಸ್ತೆಯಲ್ಲಿ ಒಂದಷ್ಟು ದೂರ ಹೋಗಿ ಹಿಂತಿರುಗಿತು. ನಂತರ ಮತ್ತೆ ರಮೇಶನ ಶವದ ಬಳಿ ಬಂದು ಅಲ್ಲೆ ನಿವೇಶನದಲ್ಲಿಯೇ ಒಂದು ಸುತ್ತು ಹಾಕಿ ತನ್ನ ಕಾರ್ಯ ಮುಗಿಸಿತು. ಸೋಮವಾರ ರಾತ್ರಿ ಮಳೆ ಇದ್ದ ಹಿನ್ನೆಲೆ ಶ್ವಾನಕ್ಕೆ ಸುಳಿವು ಸಿಗುವದು ಕಷ್ಟ ಸಾಧ್ಯ ಎನ್ನಲಾಗಿದೆ.
ರಮೇಶ್‍ನ ಬಟ್ಟೆಯ ಜೇಬನ್ನು ಪರಿಶೀಲಿಸಲಾಗಿ ಒಂದು ಜೇಬಲ್ಲಿ ರೂ.14,600 ಲೆಕ್ಕ ಪತ್ರದ ಚೀಟಿ ಹಾಗೂ ಒಂದು ಮೊಬೈಲ್ ನಂಬರ್ ಸಿಕ್ಕಿದೆ. ಮತ್ತೊಂದು ವೃತ್ತ ಪತ್ರಿಕೆಯಲ್ಲಿಯೂ ಯಾವದೋ ಮೊಬೈಲ್ ನಂ. ಬರೆದಿರುವದು ಸಿಕ್ಕಿದೆ. ಇದೇ ಅಲ್ಲದೆ ರೂ.1240 ಹಾಗೂ ಮತ್ತೊಂದು ಜೇಬಿನಲ್ಲಿ ರೂ.450 ನಗದು ದೊರೆತಿದೆ.
ರಾಜೇಶ್ವರಿ ಅವರಿಗೆ ಇಬ್ಬರು ಅವಳಿ ಗಂಡು ಮಕ್ಕಳಿದ್ದು ಮತ್ತೋರ್ವ ಸುರೇಶ್ ಎಂಬಾತ ಇರ್ಪು ಜಲಪಾತ ವೀಕ್ಷಣೆಗೆ ತೆರಳಿದ ಸಂದರ್ಭ ಜಾರಿ ಬಿದ್ದು, ಮೂಳೆ ಮುರಿತ ಉಂಟಾಗಿ ಯಾವದೇ ಚಿಕಿತ್ಸೆ ಫಲಕಾರಿಯಾಗದೆ 13 ತಿಂಗಳ ಹಿಂದೆ ಮೃತಪಟ್ಟಿದ್ದ, ಇದೀಗ ಇದ್ದ ಏಕೈಕ ಮಗನ ಹತ್ಯೆಯಾಗಿದ್ದು, ತೀವ್ರ ಅಘಾತಕ್ಕೊಳ ಗಾಗಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಮಾತನಾಡಿ ನನಗಾಗಲೀ. ನನ್ನ ತಮ್ಮನಿಗಾಗಲಿ ಯಾರೂ ವೈರಿಗಳಿಲ್ಲ. ಗೂಡ್ಸ್ ಆಟೋ ಬಾಡಿಗೆ ಹಣ ಕೆಲವರಿಂದ ಸಿಗಲಿಲ್ಲ ಎಂದು ಹೇಳುತ್ತಿದ್ದ ಬಿಟ್ಟರೆ ಯಾರನ್ನೂ ಪೀಡಿಸುತ್ತಿರಲಿಲ್ಲ. ಇದೀಗ ನಿಶ್ಚಿತಾರ್ಥ ಆಗಿರುವ ರೇವತಿ ನನ್ನ ತಾಯಿಯ ಅಣ್ಣನ ಮಗಳು. ತುಂಬ ಇಷ್ಟ ಪಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂದು ವಿವರಿಸಿದರು.
ಡಿವೈಎಸ್‍ಪಿ ನಾಗಪ್ಪ, ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಗೋಣಿಕೊಪ್ಪಲು ಪೆÇಲೀಸ್ ಉಪ ನಿರೀಕ್ಷಕ ಹೆಚ್.ವೈ. ರಾಜು, ಪೆÇನ್ನಂಪೇಟೆ ಠಾಣಾಧಿಕಾರಿ ಬಿ.ಜಿ.ಮಹೇಶ್, ವೀರಾಜಪೇಟೆ ನಗರ ಪೆÇಲೀಸ್ ಉಪನಿರೀಕ್ಷಕ ಸಂತೋಷ್ ಕಶ್ಯಪ್ ಹಾಗೂ ಅಪರಾಧ ಪತ್ತೆ ವಿಭಾಗ ಪೆÇಲೀಸ್ ತಂಡ ಮಿಂಚಿನ ಕಾರ್ಯಾಚರಣೆ ಮೂಲಕ ಲಭ್ಯವಿರುವ ಸಾಕ್ಷ್ಯಾಧಾರ ಹಾಗೂ ದುರ್ದೈವಿ ರಮೇಶ್ ಸ್ನೇಹಿತರ ವಿಚಾರಣೆ ನಡೆಸಿದ್ದು ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುದ್ದಿ ಎಲ್ಲೆಡೆ ಹರಡು ತ್ತಿದ್ದಂತೆಯೇ ಸಾರ್ವಜನಿಕರು ತಂಡೋಪತಂಡ ವಾಗಿ ಬಂದು ಬರ್ಬರ ಹತ್ಯೆಯನ್ನು ವೀಕ್ಷಣೆ ಮಾಡುತ್ತಿದ್ದುದು ಕಂಡು ಬಂತು. ರಮೇಶ್ ಕುತ್ತಿಗೆಯಲ್ಲಿ ಚಿನ್ನದ ಚೈನ್ ಹಾಗೇ ಇದ್ದು, ಕೊಲೆಯ ಹಿಂದೆ ವೈಯಕ್ತಿಕ ವೈಷಮ್ಯ ಇರಬಹುದು. ಗೋಣಿಕೊಪ್ಪಲು ಸಮೀಪದ ಗ್ರಾಮದ ಯುವತಿಯೊಬ್ಬಳ ಕೈವಾಡದ ಶಂಕೆಯೂ ಅಲ್ಲಲ್ಲಿ ಇಂದು ಹರಿದಾಡುತ್ತಿದ್ದು ಪೆÇಲೀಸರು ಎಲ್ಲ ಮೂಲಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.