ಗುಡ್ಡೆಹೊಸೂರು, ಆ. 24: ಇಲ್ಲಿನ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷೆ ಕೆ.ಎಸ್.ಭಾರತಿ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯದರ್ಶಿ ನಂಜುಂಡಸ್ವಾಮಿ ಕಳೆದ ವರ್ಷ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ವಿವರವನ್ನು ಸಭೆಯ ಮುಂದೆ ತಂದರು. ವೇದಿಕೆಯಲ್ಲಿ ಜಿಲ್ಲಾ.ಪಂ. ಸದಸ್ಯರಾದ ಲತೀಫ್, ತಾ.ಪಂ. ಸದಸ್ಯೆ ಪುಷ್ಪ, ಪಿ.ಡಿ.ಓ. ಸುಮೇಶ್, ಪಶುಸಂಗೋಪನೆ ಅಧಿಕಾರಿ ಡಾ. ಚೆಟ್ಟಿಯಪ್ಪ, ಜಿ.ಪಂ. ಇಂಜಿನಿಯರ್ ಫಯಾಜ್, ನೀರಾವರಿ ಇಲಾಖಾದಿ üಕಾರಿ ಜಗದೀಶ್, ಕಂದಾಯ ಇಲಾಖಾಧಿಕಾರಿಗಳು, ಕೃಷಿ ಅಧಿಕಾರಿಗಳು ಮತ್ತು ಸೆಸ್ಕ್ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾಧಿಕಾರಿಗಳು ಹಾಗೂ ಪಂಚಾಯಿತಿಯ ಸರ್ವ ಸದಸ್ಯರು ಹಾಜರಿದ್ದರು. ಈ ಸಂದರ್ಭ ಗ್ರಾಮದ ಅಭಿವೃಧ್ದಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಾದ ಜಿ.ಎಂ. ಮಣಿಕುಮಾರ್
ಎಂ.ಆರ್. ಉತ್ತಪ್ಪ, ಕೆ.ಕೆ. ಚಿದಾನಂದ, ವಿಶುಕುಮಾರ್, ಧನಪಾಲ್, ಲವನಂಜಪ್ಪ, ಮುಂತಾದವರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ನಡುವೆ ವಾದವಿವಾದಗಳು ನಡೆದವು. ಗುಡ್ಡೆಹೊಸೂರಿನಲ್ಲಿ ಕೋಳಿ ಅಂಗಡಿ ವ್ಯಾಪಾರ ಪರವಾನಗಿ ಶುಲ್ಕ ಅಧಿಕವಾಗಿದ್ದು, ಇದರಿಂದಾಗಿ ಗ್ರಾಹಕರಿಂದ ಅಧಿಕ ಹಣ ವಸೂಲಾತಿ ಮಾಡಲಾಗುತ್ತಿದೆ. ಪರವಾನಗಿ ಶುಲ್ಕವನ್ನು ಕಡಿಮೆ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕೋಳಿ ಮಾಂಸ ದೊರೆಯುಂತಾಗು ತ್ತದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು. ಹರೀಶ್ ಎಂಬವರು ವ್ಯಾಪಾರ ಪರವಾನಗಿ ಶುಲ್ಕ ಕಟ್ಟದೆ ಇರುವದರಿಂದ ಪಂಚಾಯಿತಿಯವರು ಅಂಗಡಿಗೆ ಬೀಗ ಹಾಕಿರುವದಕ್ಕೆ ಚರ್ಚೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯವರಿಂದ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆಯಲಾಯಿತು.
ಕುಶಾಲನಗರ ಗ್ರಾಮಾಂತರ ಉಪಠಾಣಾಧಿಕಾರಿ ಕರ್ಣಯ್ಯನ ವಸಂತ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.