ನೇರುಗಳಲೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾ.ಪಂ. ವ್ಯಾಪ್ತಿಯ ಮಾಜಿ ಸೈನಿಕರುಗಳಾದ ಹಿತ್ಲುಮಕ್ಕಿ ಗ್ರಾಮದ ಎನ್.ಟಿ. ಪುಟ್ಟಪ್ಪ, ಬಿ.ಆರ್. ಕೃಷ್ಣಪ್ಪ, ದೊಡ್ಡಬ್ಬೂರು ಗ್ರಾಮದ ರಾಘವ, ರುದ್ರಪ್ಪ, ಕರ್ಕಳ್ಳಿ ಗ್ರಾಮದ ಬಸಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ಸದಸ್ಯರುಗಳು, ಪಿಡಿಓ ಮಂಜುಳಾ, ಮಾಜಿ ಅಧ್ಯಕ್ಷರುಗಳಾದ ಮೋಹನ್‍ದಾಸ್, ಲೋಕನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮೈಸೂರು ವಿದ್ಯಾ ವಿಕಾಸ ಸಂಸ್ಥೆ ಸ್ನಾತಕೋತ್ತರ ಪದವಿ ವಾಣಿಜ್ಯ ವಿಭಾಗದ ಪ್ರೊ. ಡಾ. ಸಿ.ಜೆ. ಪ್ರಿಯಾ ಧ್ವಜಾರೋಹಣ ನೆರವೇರಿಸಿದರು. ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಧ್ಯಾಪಕ ಹರೀಶ್ ಕಿಗ್ಗಾಲು ದಿನದ ಮಹತ್ವದ ಕುರಿತು ಭಾಷಣ ಮಾಡಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೇಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಪಳಂಗಂಡ ಮುದ್ದಪ್ಪ, ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಖಜಾಂಚಿ ಪುದಿಯೊಕ್ಕಡ ಸುಬ್ರಮಣಿ, ನಿರ್ದೇಶಕರು ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ವಿದ್ಯಾಸಂಸ್ಥೆಯ ಎನ್‍ಸಿಸಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಮುಖ್ಯ ಅತಿಥಿಗಳು ಗೌರವರಕ್ಷೆ ಸ್ವೀಕರಿಸಿದರು. ದಿನದ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ ಮಾಜಿ ಪ್ರಾಂಶುಪಾಲೆ ಡಾ. ಸಿ.ಜೆ. ಪ್ರಿಯಾ ಹಾಗೂ ಅವರ ಪತಿ ರವಿಕುಮಾರ್ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸುಂಟಿಕೊಪ್ಪ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೋತ್ಸವದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವ್ಯೆ.ಯಂ. ಕರುಂಬಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಾಚಾರ್ಯ ಪಿ. ಸೋಮಚಂದ್ರ ಮಾತನಾಡಿದರು.

ಈ ಸಂದರ್ಭ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಸ್ಥಳೀಯರು, ಮಕ್ಕಳು ಇದ್ದರು.ಪ್ರಾಥಮಿಕ ಶಾಲೆ: ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಲ್ಲೇಟಿರ ಅರುಣ್ ಬೇಬ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್, ಪ್ರಬಾರ ಶಾಲಾ ಮುಖ್ಯ ಶಿಕ್ಷಕ ಸುಬ್ರಮಣಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದ ಹಾಜರಿದ್ದರು.ಜೇಸೀ ಸಂಸ್ಥೆ: ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆ ವತಿಯಿಂದ ಸ್ಥಳೀಯ ಮಸಗೋಡು ಚನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಜೇಸೀ ಅಧ್ಯಕ್ಷ ಮನೋಹರ್, ಶಾಲೆಯ ಟ್ರಸ್ಟಿಗಳಾದ ಬೆಂಗಳೂರು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಖ್ಯೋಪಾಧ್ಯಾಯ ಕೊಮಾರಿಗೌಡ, ಶಿಕ್ಷಕ ಕಿಶೋರ್ ಕುಮಾರ್, ಮಾಜಿ ಸೈನಿಕ ಪಿ.ಕೆ. ಮುತ್ತಣ್ಣ, ಜೇಸೀ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ರಂಗಸಮುದ್ರ: ಸಮೀಪದ ರಂಗಸಮುದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲಿಗೆ ಧ್ವಜಾರೋಹಣ ನೆರವೇರಿಸಿ, ದಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ವಹಿಸಿದ್ದರು.

ಸ್ವಾತಂತ್ರೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ, ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಆರ್.ಕೆ. ಚಂದ್ರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಪೋಷಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಚೆಟ್ಟಳ್ಳಿ: ಚೇರಳ-ಶ್ರೀಮಂಗಲ ಗ್ರಾಮದ ಬಕ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಗ್ರಾಮಸ್ಥ ಹೆಚ್.ಎಸ್. ನಾಗೇಶ್ ಧ್ವಜಾರೋಹಣ ಮಾಡಿದರು. ಮಕ್ಕಳು ಧ್ವಜವಂದನೆಯನ್ನು ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡಿದರು. ಭಾಷಣ, ದೇಶಭಕ್ತಿ ಗೀತೆ ನೆರವೇರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪ್ರತೀ ವರ್ಷದಂತೆ ಭಗವತಿ ಸ್ರೀಶಕ್ತಿ ಸಂಘ, ಹೇಮಶ್ರೀ ಭಗವತಿ ಸಂಘ ಹಾಗೂ ವಿನಾಯಕ ಸೇವಾ ಸಮಿತಿಯಿಂದ ಶಾಲಾ ಸುತ್ತಲು ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಕಲ್ಕಂದೂರು: ಸಮೀಪದ ಕಲ್ಕಂದೂರು ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಾಜಿ ಸೈನಿಕ ಇಸ್ಮಾಯಿಲ್ ಧ್ವಜಾರೋಹಣ ನೆರವೇರಿಸಿದರು. ಎಸ್‍ಎಸ್‍ಎಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭ ಮಸೀದಿಯ ಅಧ್ಯಕ್ಷ ಉಮ್ಮರ್ ಕೆ.ಎಂ., ಕಾರ್ಯದರ್ಶಿ ಸಿದ್ದೀಕ್, ಧರ್ಮಗುರು ಮುಸ್ತಫ ಸಖಾಫಿ, ಅಜೀಜ್ ಮುಸ್ಲಿಯಾರ್, ಎಸ್‍ಎಸ್‍ಎಫ್‍ನ ಅಜೀಜ್ ಸಖಾಫಿ, ಅಬ್ದುಲ್ ಸಲಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗೋಣಿಕೊಪ್ಪಲು ಕಾವೇರಿ ಕಾಲೇಜು: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ಎನ್‍ಎಸ್‍ಎಸ್ ಘಟಕ ಮತ್ತು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಜಲಸಂರಕ್ಷಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮತ್ತು ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ, ಸದಸ್ಯೆ ರತಿ ಅಚ್ಚಪ್ಪ, ಸುರೇಶ್ ರೈ ಹಾಗೂ ಎನ್‍ಎಸ್‍ಎಸ್ ಘಟಕದ ಸಂಯೋಜಕ ವನಿತ್‍ಕುಮಾರ್ ನೇತೃತ್ವ ವಹಿಸಿದ್ದರು.

ಮಾಲ್ದಾರೆ: ಮಾಲ್ದಾರೆಯ ದಿಡ್ಡಳ್ಳಿ ಆಶ್ರಮ ಶಾಲೆಯಲ್ಲಿ ತಾ.ಪಂ. ಸದಸ್ಯೆ ಕಾವೇರಮ್ಮ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ, ಶಿಕ್ಷಕ ವೃಂದ ಇದ್ದರು. ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಹನಫಿ ಜಾಮೀಯಾ ಮಸೀದಿ: ಗೋಣಿಕೊಪ್ಪಲು ಹನಫಿ ಜಾಮೀಯಾ ಹೊಸೂರು: ಹೊಸೂರು ಶ್ರೀ ಮಹಾದೇವರ ದೇವಸ್ಥಾನ ಆವರಣದಲ್ಲಿ 71 ನೇ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿಸಲು ವನಮಹೋತ್ಸವ ಹಮ್ಮಿಕೊಳ್ಳಲಾಯಿತು. ಮೊಳ್ಳೇರ ಸುಭಾಸ್ ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ , ವೀರಾಜಪೇಟೆ ವಲಯಾರಣ್ಯಾಧಿಕಾರಿ ಗೋಪಾಲ್, ಉಪ ವಲಯಾರಣ್ಯಾಧಿಕಾರಿ ದೇವಯ್ಯ, ರ್ಯಾಪಿಡ್ ರೆಸ್ಪಾನ್ಸ್ ಟೀಮ್‍ನ ಸದಸ್ಯರು, ಇಲಾಖಾ ಸಿಬ್ಬಂದಿ, ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಮುಖರು ಪಾಲ್ಗೊಂಡು ದೇವಸ್ಥಾನ ಆವರಣದಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗೋಣಿಕೊಪ್ಪಲಿನ ವಿವಿಧ ಬಡಾವಣೆಗಳಲ್ಲಿಯೂ ಅದ್ಧೂರಿ ಆಚರಣೆ ಕಂಡು ಬಂತು.

ಗೋಣಿಕೊಪ್ಪಲು: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಯನ್ಸ ಶಾಲಾ ಆಶ್ರಯದಲ್ಲಿ ‘ಸ್ಪಿರಿಟ್ ಆಫ್ ಪ್ರೀಡಂ ರನ್’ ಪೆÇನ್ನಂಪೇಟೆ ಬಸ್ ನಿಲ್ದಾಣದಿಂದ ಗೋಣಿಕೊಪ್ಪಲು ಉಮಾ ಮಹೇಶ್ವರಿ ಪೆಟ್ರೋಲ್ ಪಂಪ್‍ವರೆಗೆ ಶಾಲಾ-ಕಾಲೇಜು, ಸಾರ್ವಜನಿಕ ವಿಭಾಗದಲ್ಲಿ ರಸ್ತೆ ಓಟ ನೆರವೇರಿತು.

ವಾಹನ ಚಾಲಕರ ಸಂಘ: ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ಆಶ್ರಯದಲ್ಲಿ 4ನೇ ವರ್ಷದ ಸೈಕ್ಲೋಥೋನ್ ಸ್ಪರ್ಧೆ ಯಶಸ್ವಿಯಾಗಿ ಅಧ್ಯಕ್ಷ ಸಿ.ಕೆ. ಬೋಪಣ್ಣ ನೇತೃತ್ವದಲ್ಲಿ ಜರುಗಿತು. ಸುಮಾರು 7 ವಿಭಾಗದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಸುಮಾರು 207 ಸ್ಪರ್ಧಾಳುಗಳು ಭಾಗವಹಿಸಿದ್ದು, ಅಪರಾಹ್ನ ಶಾಸಕ ಕೆ.ಜಿ. ಬೋಪಯ್ಯ ಬಹುಮಾನ ವಿತರಣೆ ಮಾಡಿದರು.ಪೆÇಲೀಸ್ ಠಾಣೆ: ಪೆÇಲೀಸ್ ಠಾಣಾ ಆವರಣದಲ್ಲಿ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಧ್ವಜಾರೋಹಣ ನೆರವೇರಿಸಿದರು. ಪೆÇಲೀಸ್ ಉಪ ನಿರೀಕ್ಷಕ ರಾಜು ಹಾಗೂ ಸಿಬ್ಬಂದಿ ರಾಷ್ಟ್ರಗೀತೆ ಹಾಡಿ ದೇಶಭಕ್ತಿಯನ್ನು ಮೆರೆದರು.

ಮಾಜಿ ಸೈನಿಕರ ಸಂಘ: ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ 71ನೇ ಸ್ವಾತಂತ್ರೋತ್ಸವ ನಡೆಯಿತು. ನಿವೃತ್ತ ಮೇಜರ್ ಮಂದಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಕಾರ್ಯದರ್ಶಿ ಬಸಪ್ಪ, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಆವರಣದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ನಿರ್ದೇಶಕ ಎ.ಪಿ. ವೀರರಾಜ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಜೆ. ಜವರ, ಜಿಲ್ಲಾ ನಿರ್ದೇಶಕ ತೇಲಪಂಡ ಕವನ್ ಕಾರ್ಯಪ್ಪ, ತಾಲೂಕು ಕಾರ್ಯದರ್ಶಿ ಎಸ್.ಡಿ. ವಿಜೇತ್, ತಾಲೂಕು ಖಜಾಂಚಿ ಡಿ.ಪಿ. ಲೋಕೇಶ್, ನಿರ್ದೇಶಕರುಗಳು, ಎಸ್. ಮಹೇಶ್, ಬಿ.ಎ. ಭಾಸ್ಕರ್, ಎಸ್.ಎ. ಮುರಳೀಧರ, ರುಬಿನಾ ಮತ್ತಿತರರು ಉಪಸ್ಥಿತರಿದ್ದರು.

ವರ್ತಕರ ಸಂಘ: ಗೋಣಿಕೊಪ್ಪಲು ವರ್ತಕರ ಸಂಘದ ವತಿಯಿಂದ ಅಧ್ಯಕ್ಷ ಸುನಿಲ್ ಮಾದಪ್ಪ ನೇತ್ರತ್ವದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ, ಬಳಿಕ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಸಭಾ ಕಾರ್ಯಕ್ರಮ ಜರುಗಿತು.

ಗೋಣಿಕೊಪ್ಪಲು ಎಪಿಎಂಸಿ: ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ ನೇತ್ರತ್ವದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಮುಂಭಾಗ ಧ್ವಜಾರೋಹಣ ಹಾಗೂ ದೇಶಭಕ್ತಿ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸದಸ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.