ವೀರಾಜಪೇಟೆ: ವೀರಾಜಪೇಟೆ ಐತಿಹಾಸಿಕ ಗಣೇಶೋತ್ಸವದ ನಾಡಹಬ್ಬದ ಒಕ್ಕೂಟದ ಸಹಕಾರದೊಂದಿಗೆ “ಸರ್ಚ್‍ಕೂರ್ಗ್ ಮೀಡಿಯಾ” ದಿಂದ ವೀರಾಜಪೇಟೆ ಗಣೇಶೋತ್ಸವ-2017 ನೂತನ ‘ಆ್ಯಪ್’ ಅನ್ನು ಹೊರ ತರಲಾಗಿದೆ. ”ಆ್ಯಪ್‍ನಲ್ಲಿ ವೀರಾಜಪೇಟೆ ಸಾರ್ವಜನಿಕ ಗಣೇಶೊತ್ಸವದ ಇತಿಹಾಸ, ಉತ್ಸವ ಸಮಿತಿಗಳು, ದೇವಾಲಯಗಳ ಮಾಹಿತಿ ಮುಂತಾದ ಹತ್ತು ಹಲವು ಮಾಹಿತಿಗಳು ಲಭ್ಯವಿದೆ. “ವೀರಾಜಪೇಟೆ ಗಣೇಶೋತ್ಸವ-2017” ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ವೀಕ್ಷಿಸಬಹುದಾಗಿದೆ.

ಆ್ಯಪ್ ಬಿಡುಗಡೆ ಸಂದರ್ಭ ನಾಡಹಬ್ಬದಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ನಾಯಕ್, ಖಜಾಂಚಿಗಳಾದ ಬಿ.ಎಸ್. ಪ್ರದೀಪ್ ರೈ, ಗೌರವ ಸಲಹೆಗಾರರಾದ ದಿವಾಕರ್ ಶೆಟ್ಟಿ, ಕೆ.ಬಿ.ಹರ್ಷವಧರ್Àನ್, ಬಿ.ಕೆ .ಜೀವನ್ ಉಪಸ್ಥಿತರಿದ್ದರು.

ಸುಂಟಿಕೊಪ್ಪ : ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ ಗೌರಿ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.

ಇಲ್ಲಿನ ಕೊದಂಡರಾಮ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕಾರ್ಯಗಳು ನಡೆದು ಮೆರವಣಿಗೆ ಮೂಲಕ ಸಾಗಿ ಇಲ್ಲಿನ ಸಮೀಪದ ಗದ್ದೆಹಳ್ಳದ ಪಟ್ಟೆಮನೆ ಕುಟುಂಬಸ್ಥರಲ್ಲಿ ಹಿರಿಯವರಾದ ಮಾದಯ್ಯನವರಿಗೆ ಸೇರಿದ ಗೌರಿ ಬಾವಿಯಲ್ಲಿ ಶುದ್ಧ ಗಂಗಾಜಲದೊಂದಿಗೆ,ವಿಶೇಷ ಪೂಜೆ ವಿಧಿವಿಧಾನಗಳು ನಡೆದವು.ಗೌರಮ್ಮನ ಪೂಜೆಯಲ್ಲಿ ಬಳಸುವ ಪಂಚ ವಸ್ತುಗಳಾದ ಕರಿಮಣಿ, ಬಿಚ್ಚೋಲೆ, ಅರಸಿನ ಕುಂಕುಮ, ಬಾಚಣಿಕೆ ಹಾಗೂ ಕನ್ನಡಿಯನ್ನು ಬಾವಿಗೆ ಹಾಕಲಾಯಿತು.

ಗೌರಮ್ಮನ ಮೂರ್ತಿಯನ್ನು ಹೂವಿನ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ನಾದಸ್ವರದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ತರಲಾಯಿತು.

ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಹಿರಿಯ ಅರ್ಚಕರಾದ ಹಾ.ಮ.ಗಣೇಶ್ ಶರ್ಮಾ, ಮಂಜುನಾಥ ಶರ್ಮಾ ಅವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆದವು. ತಾ. 25ರಂದು (ಇಂದು) ಬೆಳಿಗ್ಗೆ 10.15 ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ತಾ. 25 ರಿಂದ ಸೆ. 10 ರವರೆಗೆ ಪ್ರತಿರಾತ್ರಿ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉತ್ಸವ ಸಮಿತಿಗಳು ಆಯೋಜಿಸಿವೆ.

ಸಂಗೀತ ಸ್ಪರ್ಧೆ

ವೀರಾಜಪೇಟೆ : ವೀರಾಜಪೇಟೆ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿಯಿಂದ ತಾ. 27ರಂದು ಎನ್. ವೇಂಕಟೇಶ್ ಕಾಮತ್ ಟ್ರಸ್ಟ್‍ನ ಸಹಯೋಗದಲ್ಲಿ “ವಾಯ್ಸ್ ಆಫ್ ವೀರಾಜಪೇಟೆ 2017” ಸಂಗೀತ ಸ್ಪರ್ಧೆಯನ್ನು ಪೂರ್ವಾಹ್ನ 11 ಗಂಟೆಯಿಂದ ರಾತ್ರಿ 8ಗಂಟೆಯ ತನಕ ಹÀಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಜಿ.ಕಾಮತ್ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ತಾ. 26ರೊಳಗೆ ಸಮಿತಿಯ ಜೆ.ಎನ್ .ಸಂಪತ್ ಕುಮಾರ್ ಅವರನ್ನು 9008509929 ಸಂಪರ್ಕಿಸಬಹುದು.

ಕ್ರೀಡಾ ಕೂಟ

ಗೌರಿ ಗಣೇಶೋತ್ಸವ ಪ್ರಯುಕ್ತ ಕ್ರೀq ಕೂಟ ತಾ. 27 ರಿಂದ 30 ರವರೆಗೆ ಕ್ರೀಡಾ ಕೂಟವನ್ನು ಹಾಗೂ ಹೊನಲು ಬೆಳಕಿನ ಫುಟ್‍ಬಾಲ್ ಪಂದ್ಯಾಟವನ್ನು ವೀರಾಜಪೇಟೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಕೆ.ವಿ ಸಂತೋಷ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ತಾ. 27ರಂದು ಸಂಜೆ 5 ಗಂಟೆಗೆ ಅಂತರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಮುಂಡಂಡ ಅನುಪಮ ಮಂದಣ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ, ಬಿಜೆಪಿ ಅಧ್ಯಕ್ಷ ಬಿ.ಬಿ ಭಾರತೀಶ್, ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ವಹಿಸಲಿದ್ದಾರೆ.

ಸಂಜೆ 6.30 ಗಂಟೆಗೆ 5 ಜನರ ಹೊನಲು ಬೆಳಕಿನ ಫುಟ್‍ಬಾಲ್ ಪಂದ್ಯಾಟಕ್ಕೆ ಸಮಿತಿ ಅಧ್ಯಕ್ಷ ಕೆ.ವಿ ಸಂತೋಷ್ ಚಾಲನೆ ನೀಡಲಿದ್ದಾರೆ. ತಾ. 28ರಂದು ಪೂರ್ವಹ್ನ 10 ಗಂಟೆಗೆ ಛತ್ರಕೆರೆ ಬಳಿ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪುರುಷರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಹಿಳೆಯರಿಗೆ ಸೀಮಿತಗೊಂಡಂತೆ ಸಾರ್ವಜನಿಕ ಮಹಿಳೆಯರಿಗೆ ಪುರಭವನದಲ್ಲಿ ಪಂದ್ಯಾಟ ನಡೆಯಲಿದೆ. ಆಟಗಾರರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರುವಂತೆ ಹೇಳಿದರು.

ಮಾಜಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಮಾತನಾಡಿ 30 ರಂದು ಫುಟ್‍ಬಾಲ್ ಫೈನಲ್ ಪಂದ್ಯಾಟ 5 ಗಂಟೆಗೆ ನಡೆಯಲಿದ್ದು ಕರ್ನಾಟಕ ಹಾಗೂ ಕೇರಳ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ಎಂಎಲ್‍ಸಿಗಳಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಅಂತರಾಷ್ಟ್ರೀಯ ಫ್ಲೋರ್‍ಬಾಲ್ ಆಟಗಾರ ಐತಿಚಂಡ ಪೂವಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ಉಪಸ್ಥಿತಲಿರುವರು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸದಸ್ಯರಾದ ಬಿ.ಡಿ ಸುನೀತಾ, ಚಂದ್ರಶೇಖರ್, ಟಿ.ಜೆ. ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಬೈಕ್ ರ್ಯಾಲಿ : ಐತಿಹಾಸಿಕ ನಾಡಹಬ್ಬ ಗೌರಿ ಗಣೇಶ ಉತ್ಸವ ಸಮಿತಿಗಳ ಒಕ್ಕೂಟದಿಂದ ಇಂದು ಗೌರಿ ಗಣೇಶೊತ್ಸವದ ಪ್ರಯುಕ್ತ ಪಟ್ಟಣದ ಮುಖ್ಯ ಬೀದಿಗಳಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದ ಬಳಿ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ರ್ಯಾಲಿಗೆ ಚಾಲನೆ ನೀಡಿದರು. ಇದೇ ಸಂದರ್ಭ ಒಕ್ಕೂಟದ ಪದಾಧಿಕಾರಿ ಗಳಾದ ಅನಿಲ್ ಮಂದಣ್ಣ, ಕೆ.ಬಿ. ಹರ್ಷವರ್ಧನ, ಪುರುಷೊತ್ತಮ್,

ಡಿ.ಜಿ.ಕೇಶವ, ದಿನೇಶ್ ನಾಯರ್, ಪ್ರದೀಪ್ ರೈ, ವಿವೇಕ್ ರೈ, ಸನ್ನಿ ಕಾವೇರಪ್ಪ, ರಚನ್ ಮತ್ತಿತರರು ಹಾಜರಿದ್ದರು.