ವೀರಾಜಪೇಟೆ, ಆ. 23: ವೀರಾಜಪೇಟೆ ಪಟ್ಟಣದಲ್ಲಿ ಶತಮಾನ ಗಳಿಂದಲೂ ಆಚರಿಸಿ ಕೊಂಡು ಬಂದ ಐತಿಹಾಸಿಕ ಪ್ರಸಿದ್ಧ ಗೌರಿ ಗಣೇಶೋತ್ಸವ ಸಂಬಂಧ ಈ ಬಾರಿ ತಾ:24ರಂದು ಗೌರಿ ಉತ್ಸವ, ತಾ.25ರಂದು ಗಣೇಶೋತ್ಸವವನ್ನು ಆಚರಿಸಲು 21 ಉತ್ಸವ ಸಮಿತಿಗಳು ಸಿದ್ಧತೆ ನಡೆಸಿವೆ.

ಎಲ್ಲಾ ಸಮಿತಿಗಳು ಸಂಪ್ರದಾಯದಂತೆ ಅಪರಾಹ್ನ ರಾತ್ರಿ ಪೂಜೆಗಳನ್ನು ನಿರಂತರವಾಗಿ ನಡೆಸಲಿವೆ. ಆಯ್ದ ಉತ್ಸವ ಸಮಿತಿಗಳು 11ದಿನಗಳು ನಿರಂತರ ವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಉತ್ಸವದ ಸಂದರ್ಭ ಶಾಂತಿ ಕಾಪಾಡುವ ದೃಷ್ಟಿಯಿಂದ ಗೌರಿ ಗಣೇಶೋತ್ಸವ ಸಮಿತಿಯ ಒಕ್ಕೂಟ ಹಾಗೂ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಗಳು ನಡೆದಿವೆ. ಅನ್ಯೋನ್ಯತೆ ಪರಸ್ಪರ ಶಾಂತಿ ಸೌಹಾರ್ದತೆಯಿಂದ ಉತ್ಸವ ಆಚರಿಸಲು ಉತ್ಸವ ಸಮಿತಿಗಳು ನಿರ್ಧರಿಸಿವೆ.

ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯು 11 ದಿನಗಳವರೆಗೂ ರಾತ್ರಿ ಪೂಜಾ ಸೇವೆಯ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ತಾ.24ರಿಂದ ಗೌರಿ ಉತ್ಸವಕ್ಕೆ ಚಾಲನೆ, ತಾ. 25ರಂದು ಗಣೇಶೋತ್ಸವ ಗಣೇಶನ ಪ್ರತಿಷ್ಠಾಪನೆಯೊಂದಿಗೆ ಚಾಲನೆ ನೀಡಲಿದ್ದು, ಸೆಪ್ಟಂಬರ್ 5ರಂದು ಅನಂತಪದ್ಮನಾಭ ವ್ರತದ ದಿನದಂದು ರಾತ್ರಿ 9 ಗಂಟೆಗೆ 21 ಉತ್ಸವ ಸಮಿತಿಗಳು ಸರದಿ ಪ್ರಕಾರ ಗೌರಿ ಗಣೇಶನ ಸಾಮೂಹಿಕ ಮೆರವಣಿಗೆ ನಂತರ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಚಾಲನೆ ನೀಡಲಿವೆ.

ಕಳೆದ ಬಾರಿ ಗೌರಿ ಗಣೇಶೋತ್ಸವ 11 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 20 ಉತ್ಸವ ಸಮಿತಿಗಳು ಪಾಲ್ಗೊಂಡಿದ್ದರೆ, ಈ ಬಾರಿ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿಯೊಂದಿಗೆ 21 ಸಮಿತಿಗಳು ಉತ್ಸವದಲ್ಲಿ ಭಾಗವಹಿಸಲಿವೆ.

ಗಣಪತಿ ಸೇವಾ ಟ್ರಸ್ಟ್‍ನ ಗಣಪತಿ ದೇವಸ್ಥಾನ(ಗಡಿಯಾರ ಕಂಬದ ಬಳಿ), ಜೈನರ ಬೀದಿಯ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಪಂಜರುಪೇಟೆಯ ಮಹಾಗಣಪತಿ ಸೇವಾಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಪಂಜರುಪೇಟೆಯ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿ ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ನೆಹರೂ ನಗರದ ನೇತಾಜಿ ಉತ್ಸವ ಸಮಿತಿ, ಚಿಕ್ಕಪೇಟೆಯ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ದಖನಿಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಉತ್ಸವ ಸಮಿತಿ, ಕುಕ್ಲೂರು ವಿಘ್ನೇಶ್ವರ ಉತ್ಸವ ಸಮಿತಿ, ಪೌರಸೇವಾ ನೌಕರರ ಸಂಘದ ವಿನಾಯಕ ಉತ್ಸವ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗೌರಿಕೆರೆಯ ಗಣಪತಿ ಸೇವಾ ಸಮಿತಿ, ಮಲೆತಿರಿಕೆ ಬೆಟ್ಟ ವರದ ವಿನಾಯಕ ಉತ್ಸವ ಸಮಿತಿ, ಬಾಲ ಆಂಜನೇಯ ಗಣಪತಿ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ ಸೇರಿದಂತೆ ಒಟ್ಟು 21 ಉತ್ಸವ ಸಮಿತಿ ಗಳಿಂದ ಈ ಬಾರಿ ಗೌರಿ ಗಣೇಶೋತ್ಸ ವದ ಆಚರಣೆ ನಡೆಯಲಿದೆ.

-ಡಿ.ಎಂ. ರಾಜ್‍ಕುಮಾರ್.