ಮಡಿಕೇರಿ, ಆ. 23: ವೀರಾಜಪೇಟೆ, ಪೊನ್ನಂಪೇಟೆ ಹಾಗೂ ನಾಪೋಕ್ಲು ಬ್ಲಾಕ್ಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಒಂದು ಜರುಗುವದರೊಂದಿಗೆ, ರಾಜ್ಯ ಸರಕಾರದ ಸಾಧನೆಗಳನ್ನು ಜನತೆಗೆ ತಲಪಿಸುವಂತೆ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದರು ವೀರಾಜಪೇಟೆ: ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದಿಂದ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರುವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ಪುರಭವನದಲ್ಲಿ ಆಯೋಜಿಸಲಾಗಿದ್ದ ಬ್ಲಾಕ್ ಸಮಿತಿ ಸಭೆಯಲ್ಲಿ ಕಾರ್ಯ ಕರ್ತರುನ್ನುದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಬೂತ್ ಮಟ್ಟದಿಂದಲೇ ಕೆಲಸವನ್ನು ಪ್ರಾರಂಭಿಸಿ. ತನ್ನನ್ನು ಸೇರಿ ಪ್ರತಿಯೊಬ್ಬ ನಾಯಕರು ಒಂದೊಂದು ಬೂತ್ಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಜನ ಸಾಮಾನ್ಯರಿಗೆ ಉಪಯೋಗ ವಾಗುವಂತ ಹಲವಾರು ಜನಪರ ಯೋಜನೆಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಬಿಜೆಪಿ ತನ್ನ ಸಾಧನೆ ಎಂಬಂತೆ ಬಿಂಬಿಸಿ ಕೇವಲ ಪ್ರಚಾರ ಗಿಟ್ಟಿಸಿ ಕೊಳ್ಳುವ ಕಾರ್ಯದಲ್ಲಿ ತೊಡಗಿದೆ. ಸಿದ್ದರಾಮಯ್ಯ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ ಶೇ 95ರಷ್ಟು ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಮೋದಿ ಸರ್ಕಾರ ಕೇವಲ ಪ್ರಚಾರದಲ್ಲಿ ಮಾತ್ರ ಮುಂದಿದೆ. ಅಭಿವೃದ್ದಿ ಕಾರ್ಯಗಳು ಮಾತ್ರ ಶೂನ್ಯವಾಗಿದೆ. ನೋಟ್ ಬ್ಯಾನ್ನಂತಹ ಮಾರಕ ಯೋಜನೆಗಳನ್ನು ತಂದು ಜನ ಸಾಮಾನ್ಯರು ತತ್ತರಿಸಿ ಹೋಗುವಂತೆ ಮಾಡಿರುವದು ಇವರ ಸಾಧನೆಯಾಗಿದೆ ಎಂದರು.
ಎಐಸಿಸಿ ವೀಕ್ಷಕ ವಿಷ್ಣುನಾಥನ್ ಮಾತನಾಡಿ ಸರ್ವೆ ಕಾರ್ಯ ನಡೆಸಿದರೆ ಗೆಲುವು ಸಾಧ್ಯವಿಲ್ಲ. ಕಾರ್ಯಕರ್ತರು ಬೂತ್ ಮಟ್ಟ ದಿಂದಲೆ ಎಲ್ಲಾ ವರ್ಗ, ಎಲ್ಲಾ ಹಂತದ ಜನರನ್ನು ಒಗ್ಗೂಡಿಸಿ ಪಕ್ಷದ ಪರ ಕೆಲಸ ಮಾಡುವಂತಾಗಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರÀ ಅಧಿಕಾರದಲ್ಲಿದ್ದಾಗ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದಾರೆ. ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಜೈಲಿಗೆ ಹೋದವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಕ್ರಿಮಿನಲ್ಗಳಿಗೆ ಮಹತ್ವ ನೀಡುತ್ತಿದ್ದಾರೆ. ಆದರೆ ಸಿ.ಎಂ ಸಿದ್ದರಾಮಯ್ಯ ಸ್ವಚ್ಚ ಆಡಳಿತ ನೀಡಿ ಜನ ಸಾಮನ್ಯರಿಂದ ಉತ್ತಮ ಮುಖ್ಯಮಂತ್ರಿ ಅನ್ನಿಸಿಕೊಂಡಿದ್ದಾರೆ. ಕಳೆದ ಬಾರಿ ಅಲ್ಪ ಮತಗಳಿಂದ ಈ ಕ್ಷೇತ್ರದಲ್ಲಿ ಸೋತ ಬಿ.ಟಿ ಪ್ರದೀಪ್ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಬೇಕು. ಮುಂದಿನ ಬಾರಿಯು ಕಾಂಗ್ರೆಸ್ ಪಕ್ಷ ಅಧಿüಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಮುಕ್ಕಾಟ್ಟಿರ ಶಿವು ಮಾದಪ್ಪ ಮಾತನಾಡಿ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮುಂದಿನ ದಿನಗಳಲ್ಲಿ ಬೂತ್ ಮಟ್ಟದಿಂದಲೆ ಸಭೆಗಳನ್ನು ನಡೆಸಲಾಗುವದು. ಪಕ್ಷದಲ್ಲಿ ಸಣ್ಣಪುಟ್ಟ ಒಡಕುಗಳು ಇದೆ. ಅದನ್ನು ಸರಿಪಡಿಸಲಾಗುವದು ಎಂದು ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರುಗಳಾದ ಶಿವರಾಂ, ಮಿಟ್ಟು ಚಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಕಾರ್ಯ ದರ್ಶಿಗಳಾದ ಸಿ.ಎಸ್ ಅರುಣ್ ಮಾಚಯ್ಯ, ಮಮತಾ, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿದ್ದರು. ವಕ್ತಾರ ಎಂ.ಎಸ್ ಪೂವಯ್ಯ ಸ್ವಾಗತಿಸಿದರು. ಪಶ್ಚಿಮ ಪದವಿದರರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ ದಿನೇಶ್ ವಂದಿಸಿದರು.
ಗೋಣಿಕೊಪ್ಪಲು : ಬಿಜೆಪಿ ಕಾರ್ಯಕರ್ತರು ವಿಸ್ತಾರಕ್ ಕಾರ್ಯಕ್ರಮದ ಮೂಲಕ ರಾಜ್ಯ ಸರ್ಕಾರದ ಸಾಧನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜಾಗೃತಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಭಾಗ್ಯಗಳು ನೇರವಾಗಿ ಜನರಿಗೆ ತಲುಪುತ್ತಿದ್ದು ದೇಶದಲ್ಲಿ ಯಾವದೇ ರಾಜ್ಯದಲ್ಲಿ ಯಾವದೇ ಸರ್ಕಾರ ಈ ರೀತಿಯ ಕೊಡುಗೆ ನೀಡಿಲ್ಲ. ಎಲ್ಲಾ ವರ್ಗದವರಿಗೂ ಸಮಾನವಾಗಿ ಯೋಜನೆ ರೂಪಿಸಿ ಜನಪರ ಸರ್ಕಾರವಾಗಿದೆ. ಪರಿಶಿಷ್ಠ ಜಾತಿ ಹಾಗೂ ಪಂಗಡ ಜನಾಂಗದ ಅಭಿವೃದ್ದಿಗೆ 40 ಸಾವಿರ ಕೋಟಿ ಮೀಸಲಿಟ್ಟ ಏಕೈಕ ಸರ್ಕಾರ ನಮ್ಮದಾಗಿದೆ. ರೈತ ವರ್ಗದ 50 ಸಾವಿರ ರೂಪಾಯಿ ಸಾಲ ಮನ್ನಾ ಮಾಡಿದೆ. ಪ್ರದರ್ಶಿಸಿರುವ ಸರ್ಕಾರ 4 ವರ್ಷ ಪೂರೈಸಿದೆ. ನಮ್ಮ ಮಂತ್ರಿಗಳು ಜನಪರ ಕೆಲಸ ಮಾಡಿದ್ದು ತಲೆತಗ್ಗಿಸುವ ಯಾವ ಕೆಲಸವನ್ನು ಮಾಡಿಲ್ಲ ಎಂದು ಸಮರ್ಥನೆ ನೀಡಿದರು.
ಕೊಡಗು ಕಾಂಗ್ರೆಸ್ ಉಸ್ತುವಾರಿ ವಿಷ್ಣುನಾಥನ್ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಅಲೆ ಮೂಡಿದ್ದು ಪಕ್ಷದ ಪರ ಮತದಾರರು ಒಲವು ತೋರುತ್ತಿದ್ದಾರೆ. ಕಾರ್ಯಕರ್ತರನ್ನು ನಾಯಕರು ಸಂಘಟಿತಗೊಳಿಸುವ ಮೂಲಕ ಪಕ್ಷದ ಬೆಳವಣಿಗೆಗೆ ಕೈಜೋಡಿಸಬೇಕು. ಮುಂದಿನ ವಿಧಾನಸಭಾ ಚುನಾವಣೆ ಗೆಲುವಿಗೆ ಶ್ರಮವಹಿಸಬೇಕು ಎಂದು ಕರೆ ನೀಡಿದರು. ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, ಚುನಾವಣಾ ಪೂರ್ವ ಉತ್ತಮ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿ 2 ಕ್ಷೇತ್ರದ ಗೆಲುವಿಗೆ ಕಾರಣರಾಗಬೇಕು.
ಬ್ಲಾಕ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೀಕ್ಷಕರಾದ ಹುಸೈನ್, ಮಮತಾ ಕಟೀಲ್, ಶಿವರಾಮ್, ರಾಮಚಂದ್ರ, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕಾರ್ಯದರ್ಶಿ ಅರುಣ್ ಮಾಚಯ್ಯ, ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪುಷ್ಪಾಲತಾ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕುಸುಮಾ ಜೋಯಪ್ಪ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸರಾಚಂಗಪ್ಪ, , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್, ಪದವೀದರರ ಕ್ಷೇತ್ರದ ಅಭ್ಯರ್ಥಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎ.ಜೆ ಬಾಬು, ಕಾಡ್ಯಮಾಡ ಚೇತನ್ ಜಿ.ಪಂ. ಸದಸ್ಯ ಬಾನಂಡ ಪೃಥ್ವಿ, ಶ್ರೀಜಾ ಶಾಜಿ, ಪಕ್ಷದ ಪ್ರಮುಖರಾದ ಸಾರಾ ಅಯ್ಯಮ್ಮ, ಅರವಿಂದ ಕುಟ್ಟಪ್ಪ, ಮೂಕಳೇರ ಕುಶಾಲಪ್ಪ, ಮತ್ರಂಡ ದಿಲ್ಲು, ಅಬ್ದುಲ್ ರೆಹಮಾನ್, ವಿನಯ ಕುಮಾರ್, ಮೂಕಳೇರ ಸುಮಿತ್ರ, ಆಶಾ ಜೇಮ್ಸ್, ಆಶಾ ಪೂಣಚ್ಚ, ಕೊಲ್ಲಿರ ಬೋಪಣ್ಣ, ಟಾಟು ಮೊಣ್ಣಪ್ಪ, ಪಿ.ಕೆ. ಪೊನ್ನಪ್ಪ, ಪಲ್ವಿನ್ ಪೂಣಚ್ಚ ಇದ್ದರು.
ನಾಪೆÇೀಕ್ಲು: ಪ್ರಧಾನಿ ನರೇಂದ್ರ ಮೋದಿ ಯಾವದೇ ಮಾಧ್ಯಮಗಳಿಗೆ ಮುಖ ತೋರಿಸದೆ, ಹೇಳಿಕೆ ನೀಡದೆ ಯಾವದೇ ವಿಚಾರವನ್ನು ಇತರರಿಗೆ ತಿಳಿಸದೆ, ಮನ ಬಂದಂತೆ ವರ್ತಿಸು ವದರ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಕಕ್ಕಬ್ಬೆ ಮುತ್ತವ್ವ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ವಿರೋಧ ಪಕ್ಷಗಳ ಮೇಲೆ ವಿನಾಃ ಕಾರಣ ಧಾಳಿ ನಡೆಸಿ ಅವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು ಇದರಿಂದ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮೋದಿ ಮತ್ತು ಅಮಿತ್ ಶಾ ಯಾವ ಕೀಳು ಮಟ್ಟಕ್ಕೆ ಹೋಗಲು ತಯಾರಿದ್ದಾರೆ ಎಂಬುದು ನಮಗೆ ಅರಿವಿದೆ.
ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ವಹಿಸಿರುವ ವಿಷ್ಣುನಾಥ್ ಮಾತನಾಡಿ ಬಿಜೆಪಿ ಸರಕಾರಕ್ಕೆ ಹೋಲಿಸಿದರೆ ಸಿದ್ಧರಾಮಯ್ಯ ಅವರ ಸರಕಾರ ಇತರರಿಗೆ ಮಾದರಿಯಾಗಿದೆ. ಸಿದ್ಧರಾಮಯ್ಯ ಅವರು ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸಿದ್ದಾರೆ. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಬೇರೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ವೇದಿಕೆಯಲ್ಲಿ ಕೆಪಿಸಿಸಿ ಉಸ್ತುವಾರಿ ವಹಿಸಿರುವ ಹುಸೇನ್, ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ, ಕೆಪಿಸಿಸಿ ವೀಕ್ಷಕಿ ಮಮತಾ ಗಟ್ಟಿ, ಮಾಜಿ ಎಂ.ಎಲ್.ಸಿ ಅರುಣ್ಯ ಮಾಚಯ್ಯ, ಬಿ.ಎಸ್.ತಮ್ಮಯ್ಯ, ಕೊಲ್ಯದ ಗಿರೀಶ್, ಎಸ್.ಪಿ.ದಿನೇಶ್, ಮಂಜುನಾಥ್ ಕುಮಾರ್, ನವೀನ್ ಡಿಸೋಜ, ಅಬ್ದುಲ್ ರಹಿಮಾನ್, ಮಂಜುಳ, ತಾರಾ ಅಯ್ಯಮ್ಮ, ಬಾಚಮಂಡ ರಾಜಾ ಪೂವಣ್ಣ, ಹನೀಫ್, ಪುಷ್ಟಲತಾ, ಸತೀಶ್, ಬಡಕಡ ದೀನಾ ಪೂವಯ್ಯ ಮತ್ತಿತರರು ಇದ್ದರು. ಕಲಿಯಂಡ ಬೀನಾ ನವೀನ್ ಪಾರ್ಥಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮನಾಥ್ ಸ್ವಾಗತಿಸಿ, ನೆರವಂಡ ಉಮೇಶ್ ನಿರೂಪಿಸಿ, ವಂದಿಸಿದರು.