ಮಡಿಕೇರಿ, ಆ. 23: ಕೊಡಗಿನ ವ್ಯಕ್ತಿ ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ. ಗಣಪತಿ ಅವರು ಕಳೆದ ವರ್ಷ ಮಡಿಕೇರಿಯ ಲಾಡ್ಜ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಪ್ರಕರಣ ಇದೀಗ ತಿರುವು ಪಡೆಯುತ್ತಿದೆ.ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್‍ನಲ್ಲಿ ಇಂದು ಬಿತ್ತರವಾದ ವರದಿಯೊಂದರಲ್ಲಿ ಈ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಗೊಂಡಿದೆ. ಮಾಜಿ ಶಾಸಕರು,

(ಮೊದಲ ಪುಟದಿಂದ) ಕೆಲವು ಶಾಸಕರಿಗೆ ಸಂಬಂಧಿಸಿದ ಸಾಕ್ಷ್ಯ ದಾಖಲಾತಿಗಳನ್ನು ನಾಶ ಮಾಡ ಲಾಗಿದೆ. ರಾಜ್ಯ ಸರಕಾರ ನಿಯಮಿತ ಸಿಐಡಿ ಗಣಪತಿ ಸಾವು ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದೆ ಎಂಬದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಿಖರ ವರದಿ ನೀಡಿರುವದಾಗಿ ವಾಹಿನಿ ವಿವರವಿತ್ತಿದೆ.

2690 ಎಂಎಸ್ ವಾರ್ಡ್‍ನ ದಾಖಲಾತಿಗಳು, 791 ಟೆಕ್ಸ್ಟ್ ಮಾಹಿತಿಗಳು, 31 ಪಿಪಿಟಿ ದಾಖಲೆಗಳು, 57 ಮೆಸೇಜ್‍ಗಳು, 145 ಪಿಡಿಎಫ್ ದಾಖಲೆಗಳು, 100 ಇಮೇಲ್‍ಗಳು ಹಾಗೂ 2500 ಫೋಟೋ, 352 ಸಂಪರ್ಕ ನಂಬರ್‍ಗಳು, 30 ದೂರವಾಣಿ ಕರೆಗಳನ್ನು ನಾಶಮಾಡಲಾಗಿದೆ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಗಣಪತಿ ಸಾವಿಗೀಡಾದ ಸಂದರ್ಭ ಮಡಿಕೇರಿಯ ಲಾಡ್ಜ್‍ನ ಕೊಠಡಿಯೊಳಗೆ ಶವ ಪತ್ತೆಯಾಗಿದ್ದರೂ ಕೊಠಡಿಯ ಬಾಗಿಲಿನ ಬೀಗ ತೆರೆಯಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಶವದ ಮೇಲೆ ಬುಲ್ಲೆಟ್ ಗುರುತಿದ್ದರೂ ತನಿಖೆಯಲ್ಲಿ ಈ ಬಗ್ಗೆ ಕೈ ಬಿಡಲಾಗಿದೆ ಎನ್ನಲಾಗಿದೆ. ಶವದ ಕಾಲಿನ ಭಾಗದಲ್ಲಿ ಬೆರಳು ಗುರುತನ್ನು ತನಿಖೆ ಸಂದರ್ಭ ಪಡೆಯದಿರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸಾಕ್ಷಿಯೊಬ್ಬರಿಂದ ಖಾಲಿ ಹಾಳೆಗೆ ಸಹಿ ಮಾಡಿರುವದಾಗಿ ಸಾಕ್ಷಿಯೊಬ್ಬರು ಬಹಿರಂಗಪಡಿಸಿದ್ದಾರೆ. ಪ್ರಕರಣದಲ್ಲಿ ಕೇಂದ್ರ ಸಚಿವರೊಬ್ಬರ ಸಂಬಂಧಿಯ ಕರೆಯೂ ಮೊಬೈಲ್‍ನಲ್ಲಿ ದಾಖಲಾಗಿದ್ದು, ಇದನ್ನು ಕೂಡ ತನಿಖೆಯಲ್ಲಿ ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ.ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಸಕ್ತ ಸುಪ್ರೀಂಕೋರ್ಟ್‍ನಲ್ಲಿ ಮೃತ ಗಣಪತಿ ಸಹೋದರ ಮಾಚಯ್ಯ ಮತ್ತು ತಂದೆ ಕುಶಾಲಪ್ಪ ಅವರುಗಳು ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಮಹತ್ವ ಪಡೆದುಕೊಂಡಿದೆ.