ನಾಪೆÇೀಕ್ಲು, ಆ. 24: ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಜಾನಪದ ಮರೆತರೆ ಸಂಸ್ಕøತಿಯ ವಿನಾಶ ಖಂಡಿತ ಎಂದು ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷ ಡಾ. ಎಸ್.ಬಾಲಾಜಿ ಅಭಿಪ್ರಾಯಪಟ್ಟರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಮಡಿಕೇರಿ ತಾಲೂಕು ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 250 ಜಾನಪದ ನೃತ್ಯ ಪ್ರಾಕಾರಗಳಿದ್ದು, ಗ್ರಾಮೀಣ ಜನರ ಬದುಕು ಹಾಗೂ ಸಂಸ್ಕøತಿಯನ್ನು ಬಿಂಬಿಸುತ್ತಿವೆ. ಜಾನಪದ ವಿಜ್ಞಾನಕ್ಕಿಂತ ದೊಡ್ಡದು. ಜನ ಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸಂಸ್ಕøತಿಯನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ ಎಂದರು.
ಪರಿಷತ್ತಿನ ರಾಜ್ಯ ಸಂಚಾಲಕಿ ಡಾ. ಕನಕತಾರ ಮಾತನಾಡಿ ಜಾನಪದ ಕಲೆಗಳನ್ನು ಇಂದಿನ ಜನರಿಗೆ ಪರಿಚಯಿಸುವ ಉದ್ದೇಶವನ್ನು ಕನ್ನಡ ಜಾನಪದ ಪರಿಷತ್ತು ಹೊಂದಿದ್ದು, ರಾಜ್ಯದ 28 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪರಿಷತ್ತಿನ ಜಿಲ್ಲಾಧ್ಯಕ್ಷೆ ಡಾ.ಕಾವೇರಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಜಾನಪದ ಸಂಸ್ಕøತಿ ಇನ್ನೂ ಉಳಿದುಕೊಂಡಿದೆ. ನೀರು, ಭೂಮಿ, ಮಣ್ಣು ಎಲ್ಲವನ್ನೂ ಸ್ತುತಿಸುವ ಬದುಕು ಗ್ರಾಮೀಣ ಜನರಲ್ಲಿ ಮನೆ ಮಾಡಿದೆ ಎಂದರು.
ಕನ್ನಡ ಜಾನಪದ ಪರಿಷತ್ತಿನ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆಂಪರಾಜ್, ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪೆÇ್ರ.ಕಲ್ಯಾಟಂಡ ಪೂಣಚ್ಚ ಮಾತನಾಡಿದರು.
ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಹಿರಿಯ ಕಲಾವಿದ ಚೌರೀರ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೋಲಾಟ್, ಉರುಟಿಕೊಟ್ಟ್ ಆಟ್ ಮತ್ತು ಜಾನಪದ ನೃತ್ಯ ಪ್ರದರ್ಶಿಸಿದರು. ಕಲಾವಿದ ಅಮ್ಮರಾಮಚಂದ್ರ ಅವರಿಂದ ಏರ್ಪಡಿಸಲಾಗಿದ್ದ ಜಾನಪದ ಗೀತಗಾಯನ ವೀಕ್ಷಕರನ್ನು ರಂಜಿಸಿತು.
ವೇದಿಕೆಯಲ್ಲಿ ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ನಿವೃತ್ತ ಶಿಕ್ಷಕ ಎಂ.ಎಸ್. ಸುಬ್ರಮಣ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಉದಿಯಂಡ ಪದ್ಮಜಾ ಸುಭಾಷ್, ಉಪಸ್ಥಿತರಿದ್ದರು.
ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್. ಸುರೇಶ್ ಸ್ವಾಗತಿಸಿ, ಶ್ರೀರಾಮ ಟ್ರಸ್ಟ್‍ನ ಶಿಕ್ಷಕಿ ಟಿ.ಆರ್. ಸುಬ್ಬಮ್ಮ ನಿರೂಪಿಸಿ, ಉಪನ್ಯಾಸಕಿ ವಂದಿಸಿದರು.