ಮಡಿಕೇರಿ, ಆ. 24: ಡಿವೈಎಸ್‍ಪಿ ಎಂ.ಕೆ. ಗಣಪತಿ ಸಾವು ಪ್ರಕರಣದ ಬಗ್ಗೆ ಕಳೆದ ವರ್ಷ ಜುಲೈ 7 ರಿಂದ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ನ್ಯಾಯೋಚಿತವಾಗಿ ನಡೆಸಿದ್ದ ಹೋರಾಟದ ನೈಜತೆ ಇದೀಗ ಬೆಳಕಿಗೆ ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರಕಾರ ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಯಲಾಗಿದೆ.

ಸಾಕ್ಷ್ಯ ನಾಶ ಸೇರಿದಂತೆ ಜೆಡಿಎಸ್ ಯಾವ ವಿಚಾರ ಮುಂದಿಟ್ಟು ಕುಟುಂಬ ಸದಸ್ಯರಿಗೆ ಬೆಂಬಲವಾಗಿ ನಿಂತು ಹೋರಾಟ ನಡೆಸಿತ್ತೋ ಅದರ ಸತ್ಯಾಂಶ ಇದೀಗ ಬಯಲಿದೆ ಬಂದಿದೆ. ಈ ಕುರಿತ ಮುಂದಿನ ಹೋರಾಟಕ್ಕೂ ಜೆಡಿಎಸ್ ಪಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಸದಾ ಸಿದ್ದವಿದ್ದು, ಗಣಪತಿ ಕುಟುಂಬಸ್ಥರು ಬಯಸುವ ಸಹಕಾರಕ್ಕೆ ಕೈ ಜೋಡಿಸುವದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊರಬಿದ್ದಿರುವ ಸ್ಫೋಟಕ ವರದಿ ಕುರಿತು ಪ್ರತಿಕ್ರಿಯಿಸಿರುವ ಅವರು ಜೆಡಿಎಸ್ ಪಕ್ಷ ಕುಮಾರಸ್ವಾಮಿ ಅವರ ಕಾಳಜಿಯ ಸಲಹೆಯಂತೆ ನಡೆಸಿದ ಹೋರಾಟಕ್ಕೆ ಮರುಜೀವ ಬಂದಂತಾಗಿದೆ. ಅವರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ನ್ಯಾಯ ದೊರೆತಿಲ್ಲ. ನ್ಯಾಯದೇಗುಲದಿಂದ ಮಾತ್ರ ಇದು ಸಾಧ್ಯ. ಈ ಕುರಿತ ಹೋರಾಟಕ್ಕೆ ಬೆಂಬಲ ನೀಡಲು ಪಕ್ಷ ಸದಾ ಸಿದ್ದವಿರುವದಾಗಿ ತಿಳಿಸಿದ್ದಾರೆ. ಪೊಲೀಸರು ದೇಶದ ಒಳಗೆ ಗಡಿ ಕಾಯುವ ಸೈನಿಕರಿದ್ದಂತೆ. ಆದರೆ ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವದು, ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗುವದು ಆತಂಕಕಾರಿ. ಈ ಬಗ್ಗೆ ಗಣಪತಿ ಅವರಂತಹ ಇನ್ನೊಬ್ಬ ಅಧಿಕಾರಿಯನ್ನು ಕಳೆದುಕೊಳ್ಳಬಾರದು. ಇದು ಜೆಡಿಎಸ್ ಪಕ್ಷದ ಕಾಳಜಿಯಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದು, ಪಕ್ಷ ಈ ಪ್ರಕರಣದ ಆರಂಭದಲ್ಲೇ ಹೋರಾಟ ನಡೆಸಿದೆ. ಮುಂದೆಯೂ ಹೋರಾಟಕ್ಕೆ ಸಿದ್ದವಿದ್ದು, ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಮುಂದುವರಿಯುವದಾಗಿ ಹೇಳಿದ್ದಾರೆ.ನ್ಯಾಯದೇಗುಲದಿಂದ ಮಾತ್ರ ಇದು ಸಾಧ್ಯ. ಈ ಕುರಿತ ಹೋರಾಟಕ್ಕೆ ಬೆಂಬಲ ನೀಡಲು ಪಕ್ಷ ಸದಾ ಸಿದ್ದವಿರುವದಾಗಿ ತಿಳಿಸಿದ್ದಾರೆ. ಪೊಲೀಸರು ದೇಶದ ಒಳಗೆ ಗಡಿ ಕಾಯುವ ಸೈನಿಕರಿದ್ದಂತೆ. ಆದರೆ ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವದು, ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗುವದು ಆತಂಕಕಾರಿ. ಈ ಬಗ್ಗೆ ಗಣಪತಿ ಅವರಂತಹ ಇನ್ನೊಬ್ಬ ಅಧಿಕಾರಿಯನ್ನು ಕಳೆದುಕೊಳ್ಳಬಾರದು. ಇದು ಜೆಡಿಎಸ್ ಪಕ್ಷದ ಕಾಳಜಿಯಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದು, ಪಕ್ಷ ಈ ಪ್ರಕರಣದ ಆರಂಭದಲ್ಲೇ ಹೋರಾಟ ನಡೆಸಿದೆ. ಮುಂದೆಯೂ ಹೋರಾಟಕ್ಕೆ ಸಿದ್ದವಿದ್ದು, ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಮುಂದುವರಿಯುವದಾಗಿ ಹೇಳಿದ್ದಾರೆ.