ವೀರಾಜಪೇಟೆ, ಆ. 24: ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವದ ಪ್ರಯುಕ್ತವಾಗಿ ಇಂದು ಇಲ್ಲಿನ ಮುಖ್ಯ ಬೀದಿಗಳಲ್ಲಿ ಗೌರಿ ಪಲ್ಲಕ್ಕಿ ಮೆರವಣಿಗೆ ನಾದಸ್ವರದ ವಾದ್ಯಗೋಷ್ಠಿಯೊಂದಿಗೆ ಜರುಗಿತು.ವೀರಾಜಪೇಟೆಯ ಸಿದ್ದಾಪುರ ರಸ್ತೆ, ತೆಲುಗರಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮೂರ್ನಾಡು ರಸ್ತೆ, ದೇವರಕಾಡು, ಅಪ್ಪಯ್ಯ ಸ್ವಾಮಿ ರಸ್ತೆಯ ಮಾರ್ಗವಾಗಿ ಗೌರಿ ಪಲ್ಲಕ್ಕಿ ರಾತ್ರಿ 8ಗಂಟೆಗೆ ಬಸವೇಶ್ವರ ದೇವಾಲ ಯವನ್ನು ತಲುಪಿ ನಂತರ ಗೌರಿಯನ್ನು ಸಂಪ್ರದಾಯದಂತೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು.ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶೋತ್ಸವದ ಉತ್ಸವ ಸಮಿತಿ ಯಿಂದ ಗೌರಿ ಪಲ್ಲಕ್ಕಿ ಮೆರವಣಿಗೆ ಯನ್ನು ಏರ್ಪಡಿಸಲಾಗಿತ್ತು. ವೀರಾಜಪೇಟೆಯ ಇತಿಹಾಸ ಪ್ರಸಿದ್ದ ಗೌರಿ ಪಲ್ಲಕ್ಕಿ ಮೆರವಣಿಗೆ ಅನೇಕ ದಶಕ ಗಳಿಂದಲೂ ನಡೆಯುತ್ತಿದ್ದು ಕೊಡಗಿ ನಲ್ಲಿ ವಿಶೇಷತೆಯನ್ನು ಪಡೆದಿದೆ.