ಗೋಣಿಕೊಪ್ಪಲು, ಆ.23: ಗೋಣಿಕೊಪ್ಪಲಿನ ಕುಕ್ಕೆ ವ್ಯಾಪಾರಿ ಹಾಗೂ ಗೂಡ್ಸ್ ಅಟೋ ಮಾಲೀಕ ಎಂ.ರಮೇಶ್(32) ಹತ್ಯೆಗೆ ಸಂಬಂದಿಸಿದಂತೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಗಣೇಶ್‍ಕುಮಾರ್ ಶವಪರೀಕ್ಷೆ ನಡೆಸಿದ್ದು, ತಾ.21 ರಂದು ರಾತ್ರಿ 10 ಗಂಟೆಯಿಂದ 12 ಗಂಟೆ ನಡುವೆ ಹರಿತವಾದ ಮಚ್ಚಿನಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.ಕುತ್ತಿಗೆ ಹಾಗೂ ದೇಹದ ಇತರೆ ಭಾಗದಲ್ಲಿ ಗಾಢವಾದ ಗಾಯಗಳಾಗಿದ್ದು ಹರಿತವಾದ ಕತ್ತಿಯಿಂದಲೇ ಹಲ್ಲೆ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದ್ದು ಮೃತರ ವಿಷೇರಾ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ನಡುವೆ ಗೋಣಿಕೊಪ್ಪಲು ಪೆÇಲೀಸ್ ನಿರೀಕ್ಷಕ ಹೆಚ್.ವೈ.ರಾಜು, ಪೆÇನ್ನಂಪೇಟೆ ಪೆÇಲೀಸ್ ನಿರೀಕ್ಷಕ ಬಿ.ಜಿ.ಮಹೇಶ್ ಹಾಗೂ ವೀರಾಜಪೇಟೆ ನಗರ ಠಾಣಾ ಪೆÇಲೀಸ್ ಉಪನಿರೀಕ್ಷಕ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಮೂರು ತಂಡಗಳನ್ನು ತನಿಖಾಧಿಕಾರಿ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ರಚಿಸಿದ್ದು ಪ್ರಮುಖ ಆರೋಪಿ ಸೆರೆಗಾಗಿ ಹುಡುಕಾಟ ಆರಂಭಗೊಂಡಿದೆ.
ಬರ್ಬರ ಹತ್ಯೆಗೀಡಾದ ರಮೇಶ್‍ನ ಮೃತದೇಹವನ್ನು ಇಂದು 12 ಗಂಟೆ ಸುಮಾರಿಗೆ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಕುಟುಂಬವರ್ಗ ಹಾಗೂ ಸ್ನೇಹಿತರ ಶೋಕ ಸಾಗರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ತಾ.17 ರಂದು ಮದುವೆ ನಿಶ್ಚಯಗೊಂಡಿದ್ದ ಬೆಂಗಳೂರಿನ ಭಾವಿಪತ್ನಿ ರೇವತಿ ಮತ್ತು ಪೆÇೀಷಕರು ಕುಟುಂಬವರ್ಗ ಭಾಗವಹಿಸಿದ್ದರು.ನಿಶ್ಚಿತಾರ್ಥಗೊಂಡ ಕೇವಲ 5 ದಿನಗಳ ಅಂತರದಲ್ಲಿ ಭಾವಿಪತಿ ರಮೇಶ್ ಹತ್ಯೆ ರೇವತಿಯನ್ನು ತೀವ್ರ ಅಧೀರಳನ್ನಾಗಿ ಮಾಡಿರುವದು ಕಂಡು ಬಂತು. ಅಕ್ಟೋಬರ್ 27 ರಂದು ಧರ್ಮಸ್ಥಳದಲ್ಲಿ ವಿವಾಹಕ್ಕೆ ದಿನಾಂಕ ನಿಗಧಿ ಮಾಡಲಾಗಿತ್ತು. ಆದರೆ, ವಿಧಿ ಲಿಖಿತ ಬೇರೆಯೇ ಆಗಿತ್ತು.
‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ರೇವತಿ ತಾ.21 ರಂದು 6.30 ಗಂಟೆಯಿಂದ 8.30 ಗಂಟೆಯವರೆಗೆ ಮೊಬೈಲ್ ಸಂಭಾಷಣೆ ನಿರಂತರ ನಡೆಸಿದ್ದೆವು. 8.30 ರಿಂದ ರಾತ್ರಿಯ ಅಡುಗೆ ವ್ಯವಸ್ಥೆ ಮಾಡಬೇಕಾಗಿದ್ದರಿಂದ ಸಂಪರ್ಕ ಕಡಿತ ಮಾಡಿದ್ದೆ. ಈ ಹಂತದಲ್ಲಿ ತಾನು ಗೂಡ್ಸ್ ಆಟೋ ತೆಗೆದುಕೊಂಡು ಬಾಡಿಗೆ ಹೊರ
ಟಿರುವದಾಗಿಯೂ, ಬಾಡಿಗೆ ತೆರಳಲು ಇಷ್ಟವಿಲ್ಲವೆಂದೂ ರೇವತಿಯೊಂದಿಗೆ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದು ನಂತರ ಅರ್ಧಗಂಟೆಯಲ್ಲಿ ಅಡುಗೆ ಕಾರ್ಯ ಮುಗಿಸಿ ತನ್ನ ಸಂಬಂದಿ ಹೇಮಾವತಿ ಮೊಬೈಲ್‍ನಿಂದ 10 ಗಂಟೆಯವರೆಗೂ ರಮೇಶ್ ಅವರೊಂದಿಗೆ ಮಾತನಾಡಿದ್ದೆ. ಈ ಹಂತದಲ್ಲಿ ರಮೇಶ್ ಸಹೋದರಿ ಸೆಲ್ವಿ ನಿರಂತರ ಕರೆ ಮಾಡುತ್ತಿದ್ದ ಹಿನ್ನೆಲೆ ಪರಿಚಿತರ ಬಾಡಿಗೆ ತೆರಳುತ್ತಿರುವದಾಗಿ ಹೇಳಿದ ವಿಚಾರವನ್ನು ಸೆಲ್ವಿಗೆ ರೇವತಿ ತಿಳಿಸಿದ್ದು, ಮತ್ತೆ ತಿರುಗಿ 10.02 ನಿಮಿಷಕ್ಕೆ ರಮೇಶ್‍ಗೆ ಕರೆ ಮಾಡುವ ಸಂದರ್ಭ ಫೆÇೀನ್‘ನಾಟ್ ರೀಚೇಬಲ್’ ಆಗಿತ್ತು ಎಂದು ರೇವತಿ ತಿಳಿಸಿದ್ದಾರೆ.
ಆದರೆ, ರಮೇಶ್ ಸುಮಾರು 11 ಗಂಟೆಯವರೆಗೂ ಫೆÇೀನ್ ಸಂಪರ್ಕದಲ್ಲಿರಲಿಲ್ಲ. 10.10 ನಿಮಿಷದ ಮುನ್ನವೇ ಹಂತಕರು ತಮ್ಮ ಕ್ರೌರ್ಯ ಮೆರೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ರಮೇಶ್ ಹತ್ಯೆ ನಂತರವೇ ಸ್ನೇಹಿತ ಮನೋಜ್ 10.15 ರ ಸಮಯದಲ್ಲಿ ಅರುವತ್ತೊಕ್ಕಲು ರೇಣು ಮನೆಗೆ ತೆರಳಿ ಗೂಡ್ಸ್ ಆಟೋದ ಅವಶ್ಯಕತೆ ಕುರಿತು ಮಾತಾಡಿರಬಹುದು.
ಪೆÇಲೀಸರಿಗೆ ರಮೇಶ್ ಸಹೋದರಿ ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ ನೀಡಿರುವ ದೂರಿನಲ್ಲಿ ತಮಗೆ ಯಾರ ವಿರೋಧವೂ ಇರಲಿಲ್ಲ. ಕುಕ್ಕೆ ವ್ಯಾಪಾರದಲ್ಲಿ ಮಾತ್ರ ಮೊದಲಿನಿಂದಲೂ ನಮ್ಮ ತಾಯಿ ರಾಜೇಶ್ವರಿಗೂ ಮತ್ತೋರ್ವ ಕುಕ್ಕೆ ವ್ಯಾಪಾರಿ ವಸಂತಿ, ನಾರಾಯಣ ಹಾಗೂ ಸೂರ್ಯ ನಡುವೆ ಪೈಪೆÇೀಟಿ ಇತ್ತು. ಗ್ರಾ.ಪಂ.ಚುನಾವಣೆಯ ಸಂದರ್ಭವೂ ಪರಸ್ಪರ ವಿರೋಧವಿತ್ತು ಎಂದು ಹೇಳಿಕೆ ಆಧಾರದಲ್ಲಿ ಪೆÇಲೀಸರು ಇಂದೂ ವಿಚಾರಣೆ ನಡೆಸಿದ್ದಾರೆ. ದೂರನ್ನು ತಾ.22 ರಂದು ಪೂರ್ವಾಹ್ನ 12 ಗಂಟೆಗೂ ಮುನ್ನ ಪೆÇಲೀಸ್ ಠಾಣೆಗೆ ತೆರಳಿ ನೀಡಲಾಗಿದ್ದು ಈ ಹಂತದಲ್ಲಿ ವಸಂತಿ ಅವರ ಪುತ್ರ ನಾರಾಯಣ ನಾಪತ್ತೆಯಾಗಿರುವದು, ಮೊಬೈಲ್ ಫೆÇೀನ್ ಸ್ವಿಚ್ ಆಫ್ ಆಗಿರುವದು ಸಂಶಯಕ್ಕೆ ಎಡೆ ಮಾಡಿರುವ ವಿಚಾರ. ಮನೋಜ್ ಹಾಗೂ ಸೂರ್ಯನ ವಿಚಾರಣೆಗಾಗಿ ತಮ್ಮೊಂದಿಗೆ ಇರಿಸಿಕೊಂಡಿರುವ ಪೆÇಲೀಸರು ಕುಕ್ಕೆ ಅಂಗಡಿ ಸಮೀಪದ ಮಳಿಗೆ ವರ್ತಕರು, ಸ್ನೇಹಿತರ ವಿಚಾರಣೆಯನ್ನೂ ಇಂದೂ ನಡೆಸಿದರು.
ತಾ.17 ರಂದು ರಮೇಶ್ ನಿಶ್ಚಿತಾರ್ಥದ ಮರುದಿನ ಬೆಂಗಳೂರಿನಲ್ಲಿಯೇ ಇದ್ದ ಸಂದರ್ಭ ಮನೋಜ್ ಕರೆ ಮಾಡಿ (ತಾ.18) ಬೇಗ ಬಾ ಗೂಡ್ಸ್ ಆಟೋ ಬಾಡಿಗೆ ಇದೆ ಎಂದು ರಮೇಶ್‍ಗೆ ಕರೆ ಮಾಡಲಾದ ಸಂದರ್ಭ ತಾಯಿ ರಾಜೇಶ್ವರಿಯೂ ಮನೋಜ್‍ನೊಂದಿಗೆ ಮಾತನಾಡಿದ್ದರು. ಇದಕ್ಕೂ ಕೆಲವು ದಿನಗಳ ಹಿಂದೆ ರಮೇಶ್ ಮನೆಯಲ್ಲಿದ್ದ ಸಂದರ್ಭ ರಾತ್ರಿ 8 ಗಂಟೆ ಸುಮಾರಿಗೆ ಮನೋಜ್ ಕರೆ ಮಾಡಿ ಮಳಿಗೆಯ ಬೀಗ ತೆರೆಸಿ ಕುಕ್ಕೆಯೊಂದನ್ನು ಖರೀದಿ ಮಾಡಿರುವದಾಗಿಯೂ, ನಂತರ ಪ್ರತಿ ನಿತ್ಯ ರಮೇಶ್‍ನನ್ನು ಭೇಟಿ ಮಾಡಿ ಮನೋಜ್ ತೆರಳುತ್ತಿದ್ದುದಾಗಿಯೂ ರಾಜೇಶ್ವರಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಿಂದ ಮಾತ್ರ ಮನೋಜ್ ಹೆಚ್ಚು ಆತ್ಮೀಯನಾಗಿ ತನ್ನ ಮಗನೊಂದಿಗೆ ವರ್ತಿಸುತ್ತಿದ್ದ ಎಂದು ಹೇಳಿದ ಅವರು ಸೂರ್ಯನಿಗಿಂತಲೂ ನಾರಾಯಣ್ ಮತ್ತು ನಮ್ಮ ನಡುವೆ ಕುಕ್ಕೆ ವ್ಯಾಪಾರದಲ್ಲಿ ಅಧಿಕ ಜಗಳವಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಇಬ್ಬರು ಪುತ್ರರ ಅಗಲಿಕೆಯ ಶೋಕದಲ್ಲಿರುವ ರಾಜೇಶ್ವರಿ ಅವರು ತನ್ನ ಪತಿ ಮಾದು ಮಾನಸಿಕ ಅಸ್ವಸ್ತರಾಗಿದ್ದು ದೂರದ ಚೆನ್ನೈನಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಪೆÇಲೀಸ್ ಮೂಲಗಳ ಪ್ರಕಾರ ಇನ್ನೆರಡು ದಿನಗಳಲ್ಲಿ ಪ್ರಕರಣ ಬೆಳಕಿಗೆ ಬರಲಿದ್ದು, ಈ ನಡುವೆ ನಾಪತ್ತೆಯಾಗಿರುವ ನಾರಾಯಣ ಶರಣಾಗತಿಗೂ ಪ್ರಯತ್ನ ಸಾಗಿದೆ ಎನ್ನಲಾಗುತ್ತಿದೆ.
ಪ್ರತಿಭಟನೆ ಎಚ್ಚರಿಕೆ
ಗೋಣಿಕೊಪ್ಪಲು : ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ಕೊಲೆ ಪ್ರಕರಣದ ಆರೋಪಿಗಳನ್ನು ಮುಮದಿನ 15 ದಿನಗಳಲ್ಲಿ ಬಂಧಿಸದಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್ ಆರ್ ಪರಶುರಾಂ ಸುದ್ದಿಗೊಷ್ಟಿಯಲ್ಲಿ ಎಚ್ಚರಿಸಿದ್ದಾರೆ.ಸಾಮಾಜಿಕ ನ್ಯಾಯದಡಿ ಮೃತರ ಕುಟುಂಬಕ್ಕೆ ಸರ್ಕಾರ 10 ಲಕ್ಷ ಹಣ ಹಾಗೂ ಎಲ್ಲಾ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು.ಖಜಾಂಜಿ ಕುಮಾರ್ ಮಹಾದೇವ್, ತಾಲೂಕು ಸಂಚಾಲಕ ತಂಗರಾಜ್, ಗ್ರಾಮ ಸಂಚಾಲಕ ಅಣ್ಣಪ್ಪ, ಸಂಚಾಲಕ ಪಿ ಬಿ ರಾಜು ಗೋಷ್ಠಿಯಲ್ಲಿದ್ದರು. -ವರದಿ: ಟಿ.ಎಲ್.ಶ್ರೀನಿವಾಸ್