ಕಿರುಗೂರು: ತಾ. 26 ರಂದು ಪೂರ್ವಾಹ್ನ 10.30 ಗಂಟೆಗೆ ಎ.ಡಿ. ಸುಧೀರ್ ಅಧ್ಯಕ್ಷತೆಯಲ್ಲಿ ಕಿರುಗೂರು ಮಹಿಳಾ ಸಮಾಜದಲ್ಲಿ ವಾರ್ಡ್ ಸಭೆ ನಡೆಯಲಿದೆ.

ಮತ್ತೂರು: ತಾ. 28 ರಂದು ಪೂರ್ವಾಹ್ನ 10.30 ಗಂಟೆಗೆ ಬಿ.ಆರ್. ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಮತ್ತೂರು ಸಮುದಾಯ ಭವನದಲ್ಲಿ ನಡೆಯಲಿದೆ.

ಕೋಟೂರು: ತಾ. 29 ರಂದು ಪೂರ್ವಾಹ್ನ 10.30 ಗಂಟೆಗೆ ಕೆ.ಆರ್. ಮುತ್ತಮ್ಮ ಅಧ್ಯಕ್ಷತೆಯಲ್ಲಿ ಕೋಟೂರು ಅಂಗನವಾಡಿ ಕೇಂದ್ರದಲ್ಲಿ ಸಭೆ ನಡೆಯಲಿದೆ.

ಮಾಯಮುಡಿ: ಮಾಯಮುಡಿ ಗ್ರಾ.ಪಂ. ಗ್ರಾಮ ಸಭೆಯು ತಾ. 30 ರಂದು ಪೂರ್ವಾಹ್ನ 11 ಗಂಟೆಗೆ ಭವಾನಿ ಮೋಹನ್ ಅಧ್ಯಕ್ಷತೆಯಲ್ಲಿ ಮಾಯಮುಡಿ, ಕಂಗಳತ್ತುನಾಡು ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಯಲಿದೆ.

ಹಾಕತ್ತೂರು: ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ವಿಶೇಷ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಹಾಗೂ ಜಮಾಬಂದಿ ತಾ. 30 ರಂದು ಗ್ರಾ.ಪಂ. ಅಧ್ಯಕ್ಷೆ ಎಂ.ಆರ್. ಶಾರದ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿ ವಿ.ಕೆ. ಮಹಾದೇವ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರ ಉಪಸ್ಥಿತಿಯಲ್ಲಿ ಕುವೆಂಪು ಶತಮಾನೋತ್ಸವ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ನಾಲ್ಕೇರಿ: ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನಾಲ್ಕೇರಿ ವಾರ್ಡ್ ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಎ.ಬಿ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ತಾ. 29 ರಂದು ಪೂರ್ವಾಹ್ನ 10.30 ಗಂಟೆಗೆ ನಡೆಯಲಿದೆ.

ಪಾಲಿಬೆಟ್ಟ: ಪಾಲಿಬೆಟ್ಟ ಗ್ರಾ.ಪಂ.ನ 2017-18ನೇ ಸಾಲಿನ ಗ್ರಾಮ ಸಭೆ ತಾ. 28 ರಂದು ಪೂರ್ವಾಹ್ನ 11 ಗಂಟೆಗೆ ಪಾಲಿಬೆಟ್ಟ ಗ್ರಾ.ಪಂ. ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಪಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹಾಲುಗುಂದ: ತಾ. 30 ರಂದು ಪೂರ್ವಾಹ್ನ 11 ಗಂಟೆಗೆ ಹಾಲುಗುಂದ ಗ್ರಾ.ಪಂ.ನ ಗ್ರಾಮ ಸಭೆ ಎ.ಎಂ. ಸಾದುಲಿ ಅಧ್ಯಕ್ಷತೆಯಲ್ಲಿ ಕೊಂಡಂಗೇರಿ ಶಾಲಾ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.