ಮಡಿಕೇರಿ, ಆ.26 : ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಮಾಣಗೊಳ್ಳಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮಾರ್ಗಕ್ಕೆ ಯಾರೂ ತಡೆಯೊಡ್ಡಬಾರದೆಂದು ಕರಿಕೆ, ಭಾಗಮಂಡಲ, ಚೆಟ್ಟಿಮಾನಿ ಹಾಗೂ ಅಯ್ಯಂಗೇರಿ ಭಾಗಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಗ್ರಾಮಸ್ಥರಾದ ಕುದುಕುಳಿ ಭರತ್, ಪರಿಸರ ವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಗ್ರಾಮ ವ್ಯಾಪ್ತಿಯ ಅಭಿವೃದ್ಧಿಯ ಬಗ್ಗೆ ಗೋಣಿಕೊಪ್ಪದಲ್ಲಿ ಕುಳಿತುಕೊಂಡು ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ, ನಮ್ಮ ಅಭಿವೃದ್ಧಿಯನ್ನು ನಾವೇ ನಿರ್ಧರಿಸುತ್ತೇವೆ. ಭಾಗಮಂಡಲ ಮಾರ್ಗವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಭಾಗಮಂಡಲದಲ್ಲಿ ಪರಿಸರವಾದಿಗಳು ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಲಾಗುವದು ಎಂದು ಎಚ್ಚರಿಕೆ ನೀಡಿದರು.

(ಮೊದಲ ಪುಟದಿಂದ) ಯಾವದೇ ಪಕ್ಷದವರು ಹೆದ್ದಾರಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಆದರೆ, ಕೇವಲ ಪರಿಸರವಾದಿಗಳು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯಲ್ಲಿರುವ ಪರಿಸರವಾದಿಗಳು ತಾವು ತೋಟ ಮಾಡುವ ಸಂದರ್ಭ ಎಷ್ಟು ಮರಗಳನ್ನು ಹನನ ಮಾಡಿದ್ದಾರೆ ಎನ್ನುವದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.ಸೂಕ್ಷ್ಮ ಪರಿಸರ ತಾಣದ ಹೆಸರಿನಲ್ಲಿ ಪರಿಸರ ವಾದಿಗಳ ಕುಮ್ಮಕ್ಕಿನಿಂದಾಗಿ ಕೃಷಿ ಜಮೀನಿನ ಒಂದು ಕಿ.ಮೀ. ಪ್ರದೇಶ ಸೂಕ್ಷ್ಮ ವಲಯವಾಗಿ ಘೋಷಣೆ ಯಾಗಿರುವದರಿಂದ ರೈತರು ಸಂಕಷ್ಟವನ್ನು ಎದುರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಪಾಣತ್ತೂರು, ಭಾಗಮಂಡಲ, ಮಡಿಕೆÉೀರಿ ರಾಷ್ಟ್ರೀಯ ಹೆದ್ದಾರಿ ಮತ್ತು ಮೈಸೂರು, ಕುಶಾಲನಗರ ರೈಲ್ವೆ ಯೋಜನೆ, ಮೈಸೂರು, ಮಡಿಕೇರಿ, ಮಂಗಳೂರು ರಾಷ್ಟ್ರ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ನಿರ್ಧರಿಸಿರುವದು ಸ್ವಾಗತಾರ್ಹ. ಸಂದರ್ಭಕ್ಕೆ ಅನುಗುಣ ವಾಗಿ ಮರಗಳನ್ನು ಕಡಿಯ ಬೇಕಾಗಿರುವದು ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಪರಿಸರವಾದಿಗಳ ವಿರೋಧ ಖಂಡನೀಯವೆಂದು ಭರತ್ ಹೇಳಿದರು. ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ರಸ್ತೆಯಲ್ಲಿ ವಾಹನ ದಟ್ಟಣೆÉ ಹೆಚ್ಚಾಗಿ ಪ್ರಯಾಣ ಕಷ್ಟಕರವಾಗಿದೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಆಗಲೇಬೇಕೆಂದು ಅವರು ಒತ್ತಾಯಿಸಿದರು. ಕರಿಕೆ, ಭಾಗಮಂಡಲ, ಚೆಟ್ಟಿಮಾನಿ ಮತ್ತು ಅಯ್ಯಂಗೇರಿ ಭಾಗಗಳ ಬೆಳೆಗಾರರು ಈಗಾಗಲೆ ಸೂಕ್ಷ್ಮ ಪರಿಸರ ತಾಣದ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಿದ್ದಾರೆ. ಇದೇ ಸಂಘಟನೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗದ ಪರವಾಗಿ ಹೋರಾಟ ನಡೆಸಲಾಗುವದೆಂದು ತಿಳಿಸಿದರು. ಅಭಿವೃದ್ಧಿ ಪರ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವವರಿಗೆ ಗ್ರಾಮಸ್ಥರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುದುಕುಳಿ ಭರತ್ ಎಚ್ಚರಿಕೆ ನೀಡಿದರು.

ಪಕ್ಷಾತೀತವಾಗಿ ಪರಿಸರವಾದಿಗಳ ವಿರುದ್ಧ ಹೋರಾಟ ನಡೆಸಲಾಗುವದೆಂದ ಅವರು, ಕೆಲವು ಸಂದರ್ಭಗಳಲ್ಲಿ ದಿನಕ್ಕೆ 13 ಇಂಚು ಮಳೆ ಬೀಳುವ ಭಾಗಮಂಡಲ, ತಲಕಾವೇರಿ ವ್ಯಾಪ್ತಿಯ ಜನರ ಸಂಕಷ್ಟವನ್ನು ಅರಿತುಕೊಳ್ಳಬೇಕಾಗಿದೆ ಎಂದರು.

ಮೇಲು ಸೇತುವೆಗೆ ಬೆಂಬಲ

ಗ್ರಾಮಸ್ಥರಾದ ಪಾಣತ್ತಲೆ ವಿಶ್ವನಾಥ್ ಮಾತನಾಡಿ, ಭಾಗಮಂಡಲದಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಲು ಸೇತುವೆ ಯೋಜನೆಗೆ ಗ್ರಾಮಸ್ಥರ ಒಪ್ಪಿಗೆ ಇದೆ ಎಂದರು. ಭಾಗಮಂಡಲದ ಸ್ವಾಗತ ದ್ವಾರದಿಂದ ಮಾರುಕಟ್ಟೆಯವರೆಗೆ ಸೇತುವೆ ನಿರ್ಮಾಣವಾಗಲಿದ್ದು, ಇದರ ಕೆಳಭಾಗ ಪರ್ಯಾಯ ರಸ್ತೆ ವ್ಯವಸ್ಥೆ ಇರುತ್ತದೆ. ಇದರಿಂದ ಮಳೆಗಾಲದಲ್ಲಿ ಗ್ರಾಮಸ್ಥರು ಹಾಗೂ ಪ್ರವಾಸಿಗರು ಪ್ರವಾಹದಿಂದ ಸಂಕಷ್ಟಪಡುವದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ಅಯ್ಯಂಗೇರಿ ಗ್ರಾ.ಪಂ. ಸದಸ್ಯ ಕುಯ್ಯಮುಡಿ ಮನೋಜ್ ಕುಮಾರ್, ಭಾಗಮಂಡಲ ಪಂಚಾಯ್ತಿ ಸದಸ್ಯ ಕುದುಪಜೆ ಪÀÅರುಷೋತ್ತಮ ಹಾಗೂ ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ ಮಾತನಾಡಿ, ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಕಾಡು ತುಂಬಿದ್ದು, ವಾಹನ ಚಾಲಕರು ಸಂಕಷ್ಟ ಎದುರಿಸಬೇಕಾಗಿದೆ ಎಂದರು. ಕಿರಿದಾದ ರಸ್ತೆಯಲ್ಲಿ ಪ್ರತಿವರ್ಷ ಕಾಡು ತುಂಬುತ್ತಿದ್ದು, ಲೋಕೋಪಯೋಗಿ ಇಲಾಖೆ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆ ಸಂಪÀÇರ್ಣ ಹದಗೆಟ್ಟಿದ್ದು, ಕಾವೇರಿ ತೀರ್ಥೋದ್ಭವದ ಸಂದರ್ಭ ಮಾತ್ರ ತೇಪೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.