ಗೋಣಿಕೊಪ್ಪಲು, ಆ.26: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಬಿ. ಮೋನಿಕಾ (18) ತಾ. 25 ರಂದು ಗಣೇಶ ಚತುರ್ಥಿಯ ದಿನವೇ ಪೆÇನ್ನಂಪೇಟೆ ಕಾಟ್ರಕೊಲ್ಲಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೆÇನ್ನಂಪೇಟೆ ಕಾಟಕೊಲ್ಲಿಯ ವೃತ್ತಿಯಲ್ಲಿ ಗಾರೆಕೆಲಸ ಮಾಡುವ ಬಸವರಾಜು ಹಾಗೂ ಲಕ್ಷ್ಮಿ ಅವರ ಹಿರಿಯ ಪುತ್ರಿ ಮೋನಿಕಾ ತಮ್ಮ ಮನೆಯ ಮೇಲ್ಛಾವಣಿಗೆ ಶುಕ್ರವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಬಿ.ಕಾಂ. ಪರೀಕ್ಷೆಯಲ್ಲಿ ಎರಡು ಪಠ್ಯವಿಷಯಗಳಲ್ಲಿ ಅನುತ್ತೀರ್ಣ ಳಾಗಿದ್ದು, ಈ ಬಗ್ಗೆ ತೀವ್ರ ಆತಂಕ ಹಾಗೂ ಚಿಂತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ಪೆÇಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ ಪ್ರಕಾರ ಕಾಲೇಜಿನ ಎನ್‍ಎಸ್‍ಎಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವದು ನಿಜಕ್ಕೂ ವಿಷಾದನೀಯ. ಕಾಲೇಜಿನಲ್ಲಿ ಖಿನ್ನತೆಗೆ ಒಳಗಾದ, ತೀವ್ರ ಮಾನಸಿಕವಾಗಿ ಹಿಂಜರಿಕೆ ಇರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಆತ್ಮಸಮಾ ಲೋಚನಾ ವಿಭಾಗವೂ ಇದ್ದು ಇದರ ಸದುಪಯೋಗ ಪಡೆಯಲು ಮೋನಿಕಾಗೆ ಅವಕಾಶವಿತ್ತು. ಫೇಲಾದ ಪಠ್ಯ ವಿಷಯವನ್ನು ಮುಂದೆ ಪರೀಕ್ಷೆಗೆ ಕುಳಿತು ಪಾಸು ಮಾಡಿ ಕೊಳ್ಳಬಹುದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ದ್ದಾರೆ.

ಮೃತಳ ಗೌರವಾರ್ಥ ಇಂದು ಗೋಣಿಕೊಪ್ಪಲು ಕಾವೇರಿ ಕಾಲೇಜಿಗೆ ರಜಾ ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಪೆÇನ್ನಂಪೇಟೆ ಮೋನಿಕಾಳ ನಿವಾಸಕ್ಕೆ ತೆರಳಿ ದುಃಖ ವ್ಯಕ್ತಪಡಿಸಿದರು. ತಾ.25 ರಂದು ಬೆಳಿಗ್ಗೆ ತನ್ನ ತಂದೆ ಬಸವರಾಜು ಅವರೊಂದಿಗೆ ನಗುನಗುತ್ತಲೇ ಬೆಳಗ್ಗಿನ ಉಪಹಾರ ಸೇವಿಸಿದ್ದ ಆಕೆ, ಮಧ್ಯಾಹ್ನ ಗಣೇಶನನ್ನು ಬಡಾವಣೆಯಲ್ಲಿ ಕೂರಿಸಿದ ಹಿನ್ನೆಲೆ ಊಟ ಮಾಡಿರಲಿಲ್ಲವೆನ್ನಲಾಗಿದೆ.

ಮನೆಯಲ್ಲಿದ್ದ ಸಂದರ್ಭ ತನ್ನ ಬೆಡ್‍ರೂಮ್‍ನಲ್ಲಿಯೇ ಬಾಗಿಲು ಹಾಕಿಕೊಂಡು ಪಠ್ಯವಿಷಯ ಅಭ್ಯಾಸ ಮಾಡುತ್ತಿದ್ದಳೆನ್ನಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿ ಅವರು ಮಗಳನ್ನು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಕಾಫಿ ಕುಡಿಯಲು ಕರೆದು ಕದ ತಟ್ಟುವ ಸಂದರ್ಭ ಒಳಗಿನಿಂದ ಯಾವದೇ ಶಬ್ಧ ಬರಲಿಲ್ಲವೆನ್ನಲಾಗಿದೆ. ನಂತರ ಆಕೆಯ ಕೊಠಡಿಯ ಕಿಟಕಿ ಬಾಗಿಲು ತೆಗೆದು ನೋಡಲಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವದು ತಿಳಿದು ಬಂದಿದೆ.

ಮನೆಯ ಮೇಲ್ಭಾಗಕ್ಕೆ ಶೀಟು ಹೊದಿಸಿದ್ದರಿಂದಾಗಿ ಅದನ್ನು ಒಡೆದು ಛಾವಣಿ ಮೂಲಕ ಇಳಿದು ದೇಹವನ್ನು ಕೆಳಕ್ಕಿಳಿಸಲಾಯಿತು. ಈ ಹಂತದಲ್ಲಿ ಕೂಡಲೇ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆಗೆ ಸಾಗಿಸಲಾಗಿ, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಸೂಚಿಸಲಾಯಿತು ಎನ್ನಲಾಗಿದೆ. ಆದರೆ, ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಆಕೆಯ ಸಾವನ್ನು ಖಚಿತಪಡಿಸಲಾ ಯಿತು. ಡಾ. ಗಣೇಶ್ ಕುಮಾರ್ ಅವರು ಶವಪರೀಕ್ಷೆ ನಡೆಸಿದ್ದು ರಾತ್ರಿ 7.30 ಗಂಟೆ ಸುಮಾರಿಗೆ ಮೃತದೇಹವನ್ನು ಪೆÇನ್ನಂಪೇಟೆ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಇಂದು ಬೆಳಿಗ್ಗೆ ಕಾವೇರಿ ಕಾಲೇಜು ಪ್ರಾಂಶುಪಾಲ ಪೆÇ್ರ. ಪಿ.ಎ. ಪೂವಣ್ಣ, ರಾ.ಸೇ. ಯೋಜನೆ ಸಂಯೋಜಕರಾದ ವನಿತ್‍ಕುಮಾರ್, ಬಿ.ಕಾಂ. ವಿಭಾಗದ ಮುಖ್ಯಸ್ಥೆ ರೀತಾ ಮತ್ತಿತರು ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ನಿವಾಸಕ್ಕೆ ಭೇಟಿ ನೀಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ಪೆÇನ್ನಂಪೇಟೆ ಹಿಂದೂ ರುದ್ರಭೂಮಿಯಲ್ಲಿ ಮೋನಿಕಾಳ ಅಂತ್ಯಕ್ರಿಯೆ ನೆರವೇರಿಸ ಲಾಯಿತು. ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಬಿ.ಜಿ.ಮಹೇಶ್ ಅವರು ಆತ್ಮಹತ್ಯೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. -ಟಿ.ಎಲ್.ಶ್ರೀನಿವಾಸ್