ಸೋಮವಾರಪೇಟೆ, ಆ. 28: ಶ್ರೀಮಂತ ಸಂಸ್ಕøತಿ ಹಾಗೂ ಮಾನವೀಯ ಮೌಲ್ಯಗಳು ಮತ್ತು ಜೀವನದ ಕಲೆಗಳನ್ನು ಒಳಗೊಂಡಿ ರುವ ಈ ಮಣ್ಣಿನ ಜಾನಪದೀಯ ಸಂಸ್ಕøತಿಯ ಬಗ್ಗೆ ಯುವ ಜನಾಂಗಕ್ಕೆ ಇನ್ನಷ್ಟು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಸ್ವರ್ಣಗೌರಿ ದಿನದಂದು ತಾಲೂಕಿನ ಜಾನಪದೀಯ ಹಿನ್ನೆಲೆ ಹೊಂದಿರುವ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಪರಿಷತ್ ವತಿಯಿಂದ ಇತ್ತೀಚೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಎಲ್ಲಾ ವಿಷಯಗಳಿಗೂ ಮೂಲ ಎಂಬುದು ಇದ್ದೇ ಇರುತ್ತದೆ. ಅದರಂತೆ ಜನಜೀವನದ ಮೂಲ ಜಾನಪದೀಯ ಸಂಸ್ಕøತಿಯಾಗಿದೆ. ಈಗಿನ ಜೀವನ ತನ್ನ ಪಥವನ್ನು ಬದಲಿಸಿಕೊಳ್ಳುತ್ತಿವೆ. ಐಷಾರಾಮಿ ಸುಖೀ ಜೀವನದ ಬೆನ್ನುಬಿದ್ದು, ಶ್ರೀಮಂತ ಸಂಸ್ಕøತಿಯ ಬದುಕು ಕಾಣದಾಗುತ್ತಿದೆ ಎಂದ ಅವರು, ಲೋಕೋದ್ಧಾರಕ್ಕೆ ತನ್ನ ಜೀವನವನ್ನೇ ಮುಡಿಪಿಟ್ಟ ಹೊನ್ನಮ್ಮನ ಜೀವನ ಎಲ್ಲರಿಗೂ ಪ್ರೇರಣೆಯಾಗಬೇಕು. ತ್ಯಾಗದಲ್ಲೂ ಸಾರ್ಥಕತೆ ಕಂಡ ಇಂತಹ ಜಾನಪದ ಬದುಕಿನ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಆಗಬೇಕು ಎಂದರು.

ಸಕಲ ಜೀವರಾಶಿಗಳಿಗೂ ನೀರು ಆಧಾರವಾಗಿದ್ದು, ಕೆರೆಕಟ್ಟೆಗಳು, ನದಿತೊರೆಗಳ ನೀರು ಕಲುಷಿತಗೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಅಭಿಪ್ರಾಯಿಸಿದ ಅನಂತಶಯನ ಅವರು, ಮಣ್ಣಿನ ಸೊಗಡಿನೊಂದಿಗೆ ಜಾನಪದ ಸಂಸ್ಕøತಿ ಬೆಸೆದುಕೊಂಡಿದ್ದು, ಇಂತಹ ಸಂಸ್ಕøತಿ ಉಳಿಯಬೇಕು. ಉಳಿಸುವ ಮೂಲಕ ಮುಂದಿನ ಜನಾಂಗಕ್ಕೂ ಪರಿಚಯಿಸಿ ವರ್ಗಾಯಿಸಬೇಕು ಎಂದರು.

ಈ ಸಂದರ್ಭ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಕುಶಾಲಪ್ಪ, ಪದಾಧಿಕಾರಿಗಳಾದ ಅಂಬೇಕಲ್ ನವೀನ್, ಶೋಭಾ ಸುಬ್ಬಯ್ಯ, ಪಿ.ಆರ್. ರಾಜೇಶ್, ಜಯಶ್ರೀ ಅನಂತಶಯನ, ಸುಶೀಲ ಕುಶಾಲಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರಮೋಹನ್, ಕಾರ್ಯದರ್ಶಿ ವಿನೋದ್, ಹೋಬಳಿ ಅಧ್ಯಕ್ಷ ಮುರಳೀಧರ್, ಕಾರ್ಯದರ್ಶಿ ರುಬೀನಾ, ಪದಾಧಿಕಾರಿಗಳಾದ ಸುದರ್ಶನ್, ನ.ಲ. ವಿಜಯ, ನಳಿನಿಗಣೇಶ್, ಪುಟ್ಟಣ್ಣ ಆಚಾರ್ಯ, ದೀಪಿಕಾ, ಮಾಚಯ್ಯ, ಪ್ರಸನ್ನ ಅವರುಗಳು ಉಪಸ್ಥಿತರದ್ದು, ಪರಿಷತ್ ವತಿಯಿಂದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿದರು.