ಜಲಾಲಿಯಾ ಮಸೀದಿ: ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಜಲಾಲಿಯಾ ಮಸೀದಿ ಆವರಣ ದಲ್ಲಿ ಧರ್ಮಗುರುಗಳಾದ ಅಬೂಬಕರ್ ಸಿದ್ಧೀಖ್ ಮೊಂಟುಗೋಳಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಕೆ.ಎ. ಆದಮ್, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಮುನೀರ್ ಸಅದಿ, ಸೋ.ಪೇಟೆ ಎಸ್‍ಎಸ್‍ಎಫ್ ಅಧ್ಯಕ್ಷ ಅಬ್ದುಲ್ ಅಜೀಜ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು. ಬಜೆಗುಂಡಿ ಮಸೀದಿ: ಇಲ್ಲಿಗೆ ಸಮೀಪದ ಬಜೆಗುಂಡಿಯ ಖಿಳಾರಿಯ ಮಸೀದಿ ವತಿಯಿಂದ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬಜೆಗುಂಡಿ ಹಯತ್ತುಲ್ ಇಸ್ಲಾಂ ಅರಬಿಕ್ ಮದರಸ ಅಧ್ಯಕ್ಷ ಕೆ.ಎ. ಯಾಕೂಬ್ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಧರ್ಮಗುರುಗಳಾದ ಸಾದಲಿ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೇಮಾನ್, ಉಪಾಧ್ಯಕ್ಷ ಹನೀಫ್, ಪದಾಧಿಕಾರಿಗಳು ಉಪಸ್ಥಿತರಿದ್ದರು.ಕೂಡಿಗೆ: ಇಲ್ಲಿನ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಪೋಷಕ ಪರಿಷತ್ತಿನ ಉಪಾಧ್ಯಕ್ಷೆ ನೀಲಮ್ಮ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪೋಷಕ ಪರಿಷತ್ತಿನ ಅಧ್ಯಕ್ಷ ಯದುಕುಮಾರ್ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ವೀಣಾವಿಜಯ್ ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ, ಶಿಕ್ಷಕರು ದಿನದ ಮಹತ್ವವನ್ನು ತಿಳಿಸಿದರು.

ಪಾಲಿಬೆಟ್ಟ : ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕಿ ಎಂ. ಬಿ. ಪಾರ್ವತಿ ಕರೆ ನೀಡಿದರು. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಕೆ. ಎಂ. ಭವಾನಿ ವಹಿಸಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳುವಳಿಯ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಹಾಗೂ ದೇಶಭಕ್ತಿ ಗೀತೆಯ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕು| ತಸ್ಲೀಮಾ ಕಾರ್ಯಕ್ರಮ ನಿರೂಪಿಸಿದರು. ಕು| ಆಯಿಷಾ ಸ್ವಾಗತಿಸಿ, ಕು| ಆಬಿದಾ ವಂದಿಸಿದಳು.

ಕೂಡಿಗೆ: ಕೂಡಿಗೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನುಸೂಯ ನೆರವೇರಿಸಿದರು. ತಾಲೂಕು ಸಹಕಾರ ಕೂಟದ ಮಾಜಿ ನಿರ್ದೇಶಕ ಕೆ.ಕೆ ನಾಗರಾಜಶೆಟ್ಟಿ ದಿನದ ಮಹತ್ವ ಕುರಿತು ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸಲೀನ, ನಿರ್ದೇಶಕರು, ಶಾಲಾ ಶಿಕ್ಷಕರುಗಳು ಹಾಜರಿದ್ದು ವಿವಿಧ ಸ್ಪರ್ಧೆ ನಡೆಯಿತು.ವೀರಾಜಪೇಟೆ : ಅನ್ವಾರುಲ್ ಹುದಾ ಧಾರ್ಮಿಕ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧಾರ್ಮಿಕ ಮುಖಂಡ ಅಶ್ರಫ್ ಅಹ್ಸನಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಕೊಳಕೇರಿ, ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ರಶೀದ್ ಸಅದಿ, ಇಸ್ಮಾಯಿಲ್ ಸಖಾಫಿ, ಅಬ್ದುಲ್ ರಹಮಾನ್ ಅಹ್ಸನಿ, ಶಫೀಖ್ ಸಖಾಫಿ, ಪಟ್ಟಣ ಪಂಚಾಯತಿ ಸದಸ್ಯ ಮಹಮ್ಮದ್ ರಾಫಿ, ಮತ್ತಿನ್, ಬೇಟೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಸಂತ್, ಆರ್ಜಿ ಗ್ರಾಮ ಪಂಚಾಯತಿ ಸದಸ್ಯ ಬಶೀರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಗೋಣಿಕೊಪ್ಪಲು : ಇಲ್ಲಿನ ಹರಿಶ್ಚಂದ್ರಪುರ ವರ್ತಕರಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಜಮಹಾತ್ ಮಸೀದಿಯ ಮುಖ್ಯಸ್ಥ ಅನ್ವರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯ ಕಲೀಮುಲ್ಲಾ, ಮಾಜಿ ಗ್ರಾ.ಪಂ ಅಧ್ಯಕ್ಷ ಕೊಪ್ಪೀರ ಸನ್ನಿ ಸೋಮಯ್ಯ, ವರ್ತಕರಾದ ಜಮ್ಮಡ ಜಯಂತ್, ಜನಾರ್ಧನ್, ಮೊಹಮ್ಮದ್ ಆಲಿ, ಫಯಾಜ್ ಅಹಮ್ಮದ್, ನೌಶದ್ ಪಾಲ್ಗೊಂಡಿದ್ದರು.ಸಿದ್ದಾಪುರ: ಅಮ್ಮತ್ತಿ ಸಮೀಪದ ಇಂಜಲಗರೆಯ ಭಗವತಿ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾಫಿ ಬೆಳೆಗಾರ ವೆಂಕಪ್ಪ ರೈ ದ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ನಾ ಕನ್ನಡಿಗ ಟೋಮಿ ಥೋಮಸ್ ಹಾಗೂ ಮೋಹನ್ ಕುಮಾರ್ ತಿಳಿಸಿದರು. ಈ ಸಂದರ್ಭ ಸ್ಥಳಿಯರಾದ ಲೋಕನಾಥ್, ನಿವೃತ ಆರಕ್ಷಕ ಸುಂದರರಾಜ್ ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಸಿಹಿ ಹಂಚಲಾಯಿತು. ಭಗವತಿ ಯುವಕ ಸಂಘದ ಪಾದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಕಲ್ಲುಗುಂಡಿ : ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರ, ಕೆನರಾ ಬ್ಯಾಂಕ್ ಕಲ್ಲುಗುಂಡಿ ಮತ್ತು ಚರ್ಚ್ ಬಿಲ್ಡಿಂಗ್ ಎಲ್ಲಾ ಸಂಸ್ಥೆಗಳ ಸಹಭಾಗಿತ್ವದಲ್ಲಿ 71ನೇ ಸ್ವಾತಂತ್ರ್ಯದಿನಾಚರಣೆಯನ್ನು ಚರ್ಚ್ ಬಿಲ್ಡಿಂಗ್‍ನಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಸೈನಿಕ ನವೀನ್ ಎ.ಕೆ. ನೆರವೇರಿಸಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕ ಕಿಶೋರ್ ಸಂದರ್ಬೋಚಿತ ಮಾತುಗಳನ್ನಾಡಿ ದರು. ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈಶ್ವರ ಆಚಾರ್ಯ, ಡಾ| ಕುಮಾರ ಸುಬ್ರಹ್ಮಣ್ಯ, ಇಬ್ರಾಹಿಂ, ಸ್ಥಳೀಯರು ಹಾಗೂ ಸ್ಪಾಟ್ ಕಂಪ್ಯೂಟರ್ ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.ಮದೀನ ವಿದ್ಯಾಸಂಸ್ಥೆ : ವೀರಾಜಪೇಟೆಯ ಸುಣ್ಣದಬೀದಿಯಲ್ಲಿರುವ ಮದೀನ ವಿದ್ಯಾಕೇಂದ್ರದಿಂದ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ಪಾಲ್ಗೊಂಡಿದ್ದರು. ಪ. ಪಂ. ಸದಸ್ಯರುಗಳಾದ ಎಸ್. ಎಚ್. ಮೈನುದ್ದೀನ್, ಎಸ್. ಎಚ್. ಮತೀನ್, ಹಾಗೂ ಏಜಾಜ್ ಅಹಮ್ಮದ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಫಯಾಜ್, ಶಿರಾಜುದ್ದೀನ್ ಮೌಲಾನ, ಮುಸ್ಲೀಂ ಬ್ಯಾಂಕ್ ವ್ಯವಸ್ಥಾಪಕ ಮುಕ್ತಾರ್ ಅಹಮ್ಮದ್ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಫಾಹೀಂ, ಮನ್ಸೂರ್ ಅಹಮ್ಮದ್, ಯಾಶೀರ್, ಆಫ್ಜಲ್ ಹಫೀಜ್, ಅನ್ಸಾರ್ ಹಫೀಜ್ ಹಾಜರಿದ್ದರು. ಫಾಹೀಂ ಅಹಮ್ಮದ್ ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಸಮಾರಂಭಕ್ಕೆ ಮೊದಲು ಸಂಕೇತ್ ಪೂವಯ್ಯ ಅವರು ವಿದ್ಯಾಕೇಂದ್ರದ ಮುಂದೆ ಧ್ವಜಾರೋಹಣ ಮಾಡಿದರು. ಕಾಟಕೇರಿ: ಸಮೀಪದ ಕೂರನಬಾಣೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇರಿ 71ನೇ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮದೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರತ್ನ ಹಾಗೂ ಊರಿನ ಸಾರ್ವಜನಿಕರು ಭಾಗವಹಿಸಿದ್ದರು ಕೊನೆಯಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತ್ತು.

ಚಿಕ್ಕಮುಂಡೂರು : ಚಿಕ್ಕಮುಂಡೂರಿನ ಗ್ರಾಮದ ಹಿರಿಯ ಸಹಕಾರಿ ದಿವಂಗತ ಐನಂಡ ಎಸ್ ಕಾರ್ಯಪ್ಪ ಹಾಗೂ ಜಾನಕಿ ಕಾರ್ಯಪ್ಪ ನೆನಪಿನಲ್ಲಿ ಧವಸ ಭಂಡಾರ ಆವರಣದಲ್ಲಿ ಅಶೋಕಸ್ಥಂಭವನ್ನು ಐನಂಡ ಬೇಬಿ ತಮ್ಮಯ್ಯ ಮತ್ತು ಸಹೋದರರು ನಿರ್ಮಿಸಿದ್ದರು. ಉದ್ಘಾಟನೆ ಮತ್ತು ಧ್ವಜಾರೋಹಣ ವನ್ನು ಮಾಜಿ ಸೈನಿಕ ಐನಂಡ ಕೆ. ಮಂದಣ್ಣ ನೆರವೇರಿಸಿ ಮಾತನಾಡಿದರು.

ಚಿಕ್ಕಮುಂಡೂರು ಧವಸ ಭಂಡಾರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸರಳ ಸಮಾರಂಭದಲ್ಲಿ ಕೋಟೂರು ಸಂಘದ ನಿರ್ದೇಶಕ ದೇಯಂಡ ಬೋಪಣ್ಣ, ಕರ್ತಮಾಡ ವಿಜಯ, ಅಜ್ಜಿಕುಟೀರ ಅಚ್ಚಯ್ಯ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಧವಸ ಭಂಡಾರದ ಅಧ್ಯಕ್ಷ ಮುಂಡುಮಾಡ ಗಣೇಶ್ ಮಾದಪ್ಪ ಅದ್ಯಕ್ಷತೆ ವಹಿಸಿದ್ದರು. ಚಿಮ್ಮಣಮಾಡ ಬೇಬಿ ಪೂವಮ್ಮ ಪ್ರಾರ್ಥನೆ, ಕಳ್ಳಿಚಂಡ ಅಪ್ಪುಣು ಪೊನ್ನಪ್ಪ ಸ್ವಾಗತಿಸಿ ಕಾಂiರ್Àಕ್ರಮವನ್ನು ನಿರೂಪಿಸಿ ದರು.