ಮಡಿಕೇರಿ, ಆ. 28: ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವೇಷಧಾರಿ ಪುಟಾಣಿಗಳು ಉದ್ಘಾಟಿಸಿದರು. 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸೂಕ್ಷ್ಮ ಪರಿಸರ ವಲಯ ಘೋಷಣೆ ಪರಿಣಾಮ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕರ್ಣಯ್ಯನ ಸುಪ್ರಿತಾ ಮಧು (ಪ್ರ), ಕಟ್ಟೆಮನೆ ಜಾಗೃತಿ ಸೋನಾಜಿತ್ (ದ್ವಿ), ಕುದುಕುಳಿ ಲವಿನ್, ಕುಂಚಡ್ಕ ಶ್ಯಾನ್ ಪ್ರಕಾಶ್ (ತೃ), ಬಹುಮಾನಗಳಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ಬಾಕಿಲನ ದ್ರುವ ನಂಜಪ್ಪ (ಪ್ರ), ಪಾಣತ್ತಲೆ ಮಯೂರಿ (ದ್ವಿ), ಕುಲ್ಲಚೆಟ್ಟಿರ ಧನುಶ್ರೀ (ತೃ) ಬಹುಮಾನ ಪಡೆದರು. ಏಕಪಾತ್ರಭಿನಯದಲ್ಲಿ ಕಟ್ಟೆಮನೆ ಜಾಹ್ನವಿ, ಚೆರಿಯಮನೆ ಪ್ರೀತಂ ಚಿಣ್ಣಪ್ಪ, ಅಂಚೆಮನೆ ಕುಶನ್ ಲೋಕೇಶ್, ಛದ್ಮವೇಷದಲ್ಲಿ ಕಾಳೇರಮ್ಮನ ಲಕ್ಷ್ಮಣ್ ಅಶೋಕ್, ಚೋಂಡಿರ ಯಶಸ್‍ಗೌಡ, ಕುಲ್ಲಚೆಟ್ಟಿರ ವನ್ಯಶ್ರೀ ಅವರುಗಳು ಬಹುಮಾನ ಪಡೆದರು.

ತೀರ್ಪುಗಾರರಾಗಿ ಪತ್ರಕರ್ತ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪನ್ಯಾಸಕ ಬಾಣೆಗದ್ದೆ ಪ್ರದೀಪ್, ಚಿತ್ರಕಲಾ ಶಿಕ್ಷಕ ಕೋಡಿ ಭರತ್, ಉಪನ್ಯಾಸಕಿ ಅಪೂರ್ವ, ಪತ್ರಕರ್ತರಾದ ಕಿಶೋರ್ ರೈ, ವಿಘ್ನೇಶ್ ಭೂತನಕಾಡು ಕಾರ್ಯನಿರ್ವಹಿಸಿದರು. ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೊಯಪ್ಪ, ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ, ಖಜಾಂಚಿ ಕಟ್ಟೆಮನೆ ಸೋನಾಜಿತ್, ನಿರ್ದೇಶಕರು ಹಾಜರಿದ್ದರು.