ಮಡಿಕೇರಿ: ಚೇರಂಬಾಣೆ ಜುಮಾ ಮಸ್ಜಿದ್ ಮತ್ತು ಮದ್ರಸ್ ವಿದ್ಯಾರ್ಥಿಗಳಿಂದ 71ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ವಿಜೃಂಭಣೆಯಿಂದÀ ಆಚರಿಸಲಾಯಿತು ಧ್ವಜರೋಹಣವನ್ನು ಜನಾಬ್ ಬಿ.ಎಂ. ಕುಂಜಬ್ದುಲ್ಲಾ ಅಧ್ಯಕ್ಷರು ಮುಸ್ಲಿಂ ಜಮಾಅತ್ ಚೇರಂಬಾಣೆ ನೆರವೇರಿಸಿದರು. ಪ್ರಾಸ್ತಾವಿಕ ಭಾಷಣವನ್ನು ಜಮಾಅತ್ ಕಥೀಬ್ ಜನಾಬ್ ಅಬ್ಬಾಸ್ ಸಖಾಫಿ ಮತ್ತು ಸದರ್ ಮೂಹಲ್ಲಿಂ ಅಶ್ರಫ್ ಜಲಾಲಿ ನೆರವೇರಿಸಿದರು. ಮದ್ರಸ ಮಕ್ಕಳಿಂದÀ ರಾಷ್ಟ್ರಗೀತೆ ಹಾಡಿಸಲಾಯಿತು. ಜಮಾಅತ್ ಸದಸ್ಯರು ಹಾಜರಿದ್ದರು.

ಚೆಯ್ಯಂಡಾಣೆ: ಚೆಯ್ಯಂಡಾಣೆ ಸ.ಮಾ.ಪ್ರಾ. ಶಾಲೆಯಲ್ಲಿ 71ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ತಾ.ಪಂ. ಸದಸ್ಯೆ ಉಮಾ ಪ್ರಭು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಮೀನ ಕೆ.ಸಿ. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಬಿ.ಎನ್. ಚಂಪಕ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆದವು.

ತಾ.ಪಂ. ಸದಸ್ಯೆ ಉಮಾ ಪ್ರಭು ಹಾಗೂ ನರಿಯಂದಡ ಗ್ರಾ.ಪಂ. ಸದಸ್ಯ ರತೀಶ್‍ಕುಮಾರ್, ಅಧ್ಯಕ್ಷಸ್ಥಾನ ವಹಿಸಿದ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ್ ಇವರುಗಳು ಮಾತನಾಡಿದರು. ಎಸ್.ಡಿ.ಎಂ.ಸಿ. ಸದಸ್ಯರುಗಳು, ಪೋಷಕರು, ಶಿಕ್ಷಕರು ಹಾಜರಾಗಿದ್ದರು. ಸಹ ಶಿಕ್ಷಕಿ ಅರ್ಶಿಯಾ ವಂದಿಸಿದರು. ಗೋಣಿಕೊಪ್ಪಲು: ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಸುನಿಲ್ ಮಾದಪ್ಪ ಧ್ವಜರೋಹಣ ನೆರವೇರಿಸಿದರು. ಗ್ರಾಮದ ಹಿರಿಯ ಬುಟ್ಟಿಯಂಡ ಅಪ್ಪಾಜಿ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.

ಈ ಸಂದರ್ಭ ಸಂಘದ ಕಾರ್ಯದರ್ಶಿ ರಾಜಶೇಖರ್, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಡಾ.ಶಿವಪ್ಪ, ನಿರ್ದೇಶಕಿ ಸುಮಿ ಸುಬ್ಬಯ್ಯ, ನೂರೇರ ರತಿ ಅಚ್ಚಪ್ಪ, ವೈದ್ಯ ಸುರೇಶ್ ಹಾಗೂ ಗ್ರೀಷ್ಮಾ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಆಟೋ ಮೊಬೈಲ್ಸ್ ವರ್ಕರ್ಸ್ ಅಸೋಸಿಯೇಶನ್ ವತಿಯಿಂದ ವೆಂಕಟಪ್ಪ ಬಡವಾಣೆಯಲ್ಲಿ ಸಂಘದ ಸದಸ್ಯ ಕೃಷ್ಣ ಧ್ವಜರೋಹಣ ನೆರವೇರಿಸಿದರು.

ಸಂಘದ ವತಿಯಿಂದ ದೇವರಪುರದ ವಿಕಲಚೇತನ ಶಾಲೆಗೆ ಹಾಸಿಗೆ ಮತ್ತು ಸ್ಟೌವ್ ವಿತರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸಹದೇವನ್, ಕಾರ್ಯದರ್ಶಿ ರಫೀಕ್, ಖಜಾಂಜಿ ಅನಿಲ್, ಸಹಕಾರ್ಯದರ್ಶಿ ಜೋಸ್, ಗೌರವಾಧ್ಯಕ್ಷ ದಾಮೋದರ್, ಉಪಾಧ್ಯಕ್ಷ ಅಶ್ವತ್ ಪಾಲ್ಗೊಂಡಿದ್ದರು.ಗೋಣಿಕೊಪ್ಪಲು: ಮಾರ್ಕೇಟ್ ವರ್ತಕರ ಸಂಘದ ವತಿಯಿಂದ ಇಲ್ಲಿನ ಮಾರ್ಕೇಟ್ ಆವರಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ವಕೀಲ ಶಮೀರ್ ಧ್ವಜರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಸಂಘದ ಸದಸ್ಯ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಭಗತ್‍ಸಿಂಗ್ ಪುರುಷರ ಸಂಘ, ಅನುಗ್ರಹ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಉಮಾಮಹೇಶ್ವರಿ ದೇವಾಲಯದಿಂದ ಆರ್‍ಎಂಸಿ ಆವರಣದ ತನಕ ಬೈಕ್ ಜಾಥ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದರು. ಜನರಲ್ ತಿಮ್ಮಯ್ಯ ಮತ್ತು ಫೀ.ಮಾ ಕಾರ್ಯಪ್ಪ ಸ್ಮಾರಕದ ಎದುರು ನಿವೃತ್ತ ಪ್ರಾಂಶುಪಾಲ ಇಟ್ಟೀರ ಬಿದ್ದಪ್ಪ ಹಾಗೂ ಉದ್ಯಮಿ ಕೊಲ್ಲೀರ ಕಾವೇರಪ್ಪ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಭಗತ್ ಪುರುಷರ ಸಂಘದ ಅಧ್ಯಕ್ಷ ಕಿಶೋರ್, ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಸಿಂಗಿ ಸತೀಶ್, ಸದಸ್ಯರಾದ ಕೃಷ್ಣ, ಅಶೋಕ್, ವೇಣು, ಅನುಗ್ರಹ ಯುವಕ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಗ್ರಾ.ಪಂ ಸದಸ್ಯ ಅಶ್ರಫ್, ಜೆ.ಸಿ.ಐ ಪೊನ್ನಂಪೇಟೆ ನಿಸರ್ಗದ ನಿಕಟಪೂರ್ವ ಅಧ್ಯಕ್ಷ ಕಿರಣ್ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಬಸ್ ನಿಲ್ದಾಣ ವರ್ತಕರ ವತಿಯಿಂದ ಧ್ವಜಾರೋಹಣ ಮಾಡಲಾಯಿತು. ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ವರ್ತಕರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವತಿಯಿಂದ ನಗರದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರೂ ವಿದ್ಯಾರ್ಥಿಗಳು ಮುಖ್ಯಬೀದಿಯಲ್ಲಿ ಸಾಗಿ ಘೋಷಣೆ ಕೂಗಿದರು.

ವೀರಾಜಪೇಟೆ: ಪೆರುಂಬಾಡಿಯ ಶಂಸುಲ್ ಉಲಮಾ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲೆ ಭಾನುಮತಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸಂಸ್ಥೆಯ ಸದಸ್ಯ ಘನಿ ಮುಸ್ಲಿಯಾರ್ ಶಾದುಲಿ ಬಾಖವಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಛದ್ಮವೇಷಗಳನ್ನು ಧರಿಸಲಾಯಿತು.

ಮಡಿಕೇರಿ: ಸರಕಾರಿ ಬಾಲಕ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿ ಚಿಕ್ಕ ಬಸವಯ್ಯ ಧ್ವಜಾರೋಹಣ ಮಾಡಿದರು. ಪ್ರಾರ್ಥನೆ, ಸ್ವಾಗತ ಭಾಷಣವನ್ನು ನಿಲಯದ ಮೇಲ್ವಿಚಾರಕಿ ಡಿ.ಸಿ. ಪೊನ್ನಮ್ಮರಿಂದ ಮಾಡಲಾಯಿತು. ಆಟೋಟಗಳ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ, ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮದೆ ಮಹೇಶ್ವರ ಪ್ರೌಢಶಾಲೆಯ ಶಿಕ್ಷಕ ಶ್ರೀನಿವಾಸ ಹಾಗೂ ಸುಚರಿತ ಭಾಷಣ ಮಾಡಿದರು. ಆ ದಿನ ನಿಲಯದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಶೂ ಮತ್ತು ನೋಟ್ಸ್ ಪುಸ್ತಕಗಳನ್ನು ಮೇಲಾಧಿಕಾರಿ ಚಿಕ್ಕಬಸವಯ್ಯ ವಿತರಿಸಿದರು.

ಗರಗಂದೂರು: ಇಲ್ಲಿನ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿವೃತ್ತ ಮುಖ್ಯ ಶಿಕ್ಷಕಿ ಕೆ.ಕೆ. ಸರೋಜ ಧ್ವಜಾರೋಹಣ ಮಾಡಿದರು. ಜಯಘೋಷದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಅಧ್ಯಕ್ಷರು, ಸದಸ್ಯರು, ಪೋಷಕರು ಭಾಗವಹಿಸಿದ್ದರು

ಚೆನ್ನಯನಕೋಟೆ: ಚೆನ್ನಯ್ಯನಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾ.ಪಂ. ಸದಸ್ಯ ಎಂ.ಡಿ. ಅರುಣ್ ನೆರವೇರಿಸಿದರು. ಜಯ ಕರ್ನಾಟಕ ಸಂಘಟನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚನ್ನಯ್ಯನಕೋಟೆ ಅಂಗನವಾಡಿ ಮಕ್ಕಳಿಗೆ ಸಿಹಿ ಹಂಚಲಾಯಿತು.

ವೀರಾಜಪೇಟೆ: ಇಲ್ಲಿನ ಕೊಡವ ಸಮಾಜದ ತ್ರಿವೇಣಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಚೆರುಮಂದಂಡ ನಾಣಯ್ಯ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಸಿಹಿಯನ್ನು ಹಂಚಲಾಯಿತು.

ಮದೆ: ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿತು. ಕಾಲೇಜಿನ ಅಧ್ಯಕ್ಷರಾದ ಹುದೇರಿ ರಾಜೇಂದ್ರ, ಪ್ರಾಂಶುಪಾಲೆ ಗುಲಾಬಿ ಜನಾರ್ಧನ, ಮುಖ್ಯೋಪಾಧ್ಯಾಯ ಬಿ.ಆರ್. ಜೋಯಪ್ಪ, ಶಿಕ್ಷಕ ವೃಂದದವರಿದ್ದರು.

ಅರಮೇರಿ: ಎಸ್.ಎಂ.ಎಸ್. ವಿದ್ಯಾಪೀಠದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ನಿವೃತ್ತ ಸೈನಿಕ ಭವಾನಿ ಶಂಕರ್ ರಾವ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಭಾಷಣ ರೂಪದಲ್ಲಿ ವ್ಯಕ್ತಪಡಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಮಧುಸೂದನ್ ನಾಯಕ್ ಸ್ವಾಗತಿಸಿ, ವಂದಿಸಿದರು.

ಪೊನ್ನಂಪೇಟೆ: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ದಿಲನ್ ಚಂಗಪ್ಪ, ಸದಸ್ಯರಾದ ವಾಸು ಉತ್ತಪ್ಪ, ಆಶಿಕ್ ಚಂಗಪ್ಪ, ಕೊಕ್ಕಂಡ ಕಾವೇರಪ್ಪ, ದೀನಾ ಹಾಜರಿದ್ದರು. ಶಾಲಾ ಮಕ್ಕಳು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು ಹಾಜರಿದ್ದರು.

ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ದಿನೇಶ್ ಬಾಬು, ರಜನಿ ಸಿಹಿ ಹಂಚಿದರು. ವೈಷ್ಣವಿ ಮೆಡಿಕಲ್ಸ್‍ನ ಶಿವರಾಜ್ ಚಾಕಲೇಟ್ ವಿತರಿಸಿದರು.

ವೀರಾಜಪೇಟೆ: ವೀರಾಜಪೇಟೆ ತಾಲೂಕು ಹಬ್ಬ ಆಚರಣಾ ಸಮಿತಿ ಹಾಗೂ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದಿಂದ ಸ್ವಾತಂತ್ರ್ಯೋತ್ಸವ ನಡೆಯಿತು.

ಅಂದು ಸನ್ಮಾನಿಸಲ್ಪಟ್ಟ ಮಾಜಿ ಸೈನಿಕರುಗಳಾದ ದಿ. ಸೀನಪ್ಪ ಪೂಜಾರಿ, ಬಿದ್ದಂಡ ಗಣಪತಿ, ಕಡೇಮಾಡ ಎಸ್. ಉತ್ತಪ್ಪ, ಪರಿಞರಂಡ ಪೂಣಚ್ಚ.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಸ್ಮೀತಾ ಪ್ರಕಾಶ್, ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಅಧ್ಯಕ್ಷ ಇ.ಸಿ. ಜೀವನ್, ಉಪಾಧ್ಯಕ್ಷೆ ತಸ್ಲೀಮ್ ಅಕ್ತರ್, ಪೊಲೀಸ್ ಉಪ ಅಧೀಕ್ಷಕ ನಾಗಪ್ಪ, ಕೊಡಗು ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಆಡಳಿತ ಮಂಡಳಿ ಸದಸ್ಯರಾದ ಪಿ.ಎಸ್. ನಂದ, ಹರೀಶ್ ಉತ್ತಯ್ಯ, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಮಾಡು ಅಮ್ಮತ್ತಿ: ‘ಭಾರತೀಯ ನಾವೆಲ್ಲರೂ ಒಂದೆ’ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಆಟೋರಿಕ್ಷಾಗಳಿಂದ ಅಮ್ಮತ್ತಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ಕಾರ್ಮಾಡು ಗ್ರಾ.ಪಂ. ಅಧ್ಯಕ್ಷೆ ಅಕ್ಕಚೀರ ರೋನ ಭೂಮಯ್ಯ ಧ್ವಜಾರೋಹಣ ನೆರವೇರಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಹೆಚ್.ಪಿ. ಪಾಪಣ್ಣ, ಶ್ರೀಜೇಶ್, ದೊಂಬಯ್ಯ, ಮೋಹನ್, ಬಾಲಕೃಷ್ಣ ಸೇರಿದಂತೆ ನೂರಕ್ಕೂ ಹೆಚ್ಚು ಆಟೋ ಚಾಲಕರು ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಮಾರ್ಕೇಟ್ ವರ್ತಕರ ಸಂಘದ ವತಿಯಿಂದ ಇಲ್ಲಿನ ಮಾರ್ಕೇಟ್ ಆವರಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ವಕೀಲ ಶಮೀರ್ ಧ್ವಜರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಸಂಘದ ಸದಸ್ಯ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಭಗತ್‍ಸಿಂಗ್ ಪುರುಷರ ಸಂಘ, ಅನುಗ್ರಹ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಉಮಾಮಹೇಶ್ವರಿ ದೇವಾಲಯದಿಂದ ಆರ್‍ಎಂಸಿ ಆವರಣದ ತನಕ ಬೈಕ್ ಜಾಥ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದರು. ಜನರಲ್ ತಿಮ್ಮಯ್ಯ ಮತ್ತು ಫೀ.ಮಾ ಕಾರ್ಯಪ್ಪ ಸ್ಮಾರಕದ ಎದುರು ನಿವೃತ್ತ ಪ್ರಾಂಶುಪಾಲ ಇಟ್ಟೀರ ಬಿದ್ದಪ್ಪ ಹಾಗೂ ಉದ್ಯಮಿ ಕೊಲ್ಲೀರ ಕಾವೇರಪ್ಪ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಭಗತ್ ಪುರುಷರ ಸಂಘದ ಅಧ್ಯಕ್ಷ ಕಿಶೋರ್, ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಸಿಂಗಿ ಸತೀಶ್, ಸದಸ್ಯರಾದ ಕೃಷ್ಣ, ಅಶೋಕ್, ವೇಣು, ಅನುಗ್ರಹ ಯುವಕ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಗ್ರಾ.ಪಂ ಸದಸ್ಯ ಅಶ್ರಫ್, ಜೆ.ಸಿ.ಐ ಪೊನ್ನಂಪೇಟೆ ನಿಸರ್ಗದ ನಿಕಟಪೂರ್ವ ಅಧ್ಯಕ್ಷ ಕಿರಣ್ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಬಸ್ ನಿಲ್ದಾಣ ವರ್ತಕರ ವತಿಯಿಂದ ಧ್ವಜಾರೋಹಣ ಮಾಡಲಾಯಿತು. ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ವರ್ತಕರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವತಿಯಿಂದ ನಗರದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರೂ ವಿದ್ಯಾರ್ಥಿಗಳು ಮುಖ್ಯಬೀದಿಯಲ್ಲಿ ಸಾಗಿ ಘೋಷಣೆ ಕೂಗಿದರು.

ವೀರಾಜಪೇಟೆ: ಪೆರುಂಬಾಡಿಯ ಶಂಸುಲ್ ಉಲಮಾ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲೆ ಭಾನುಮತಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸಂಸ್ಥೆಯ ಸದಸ್ಯ ಘನಿ ಮುಸ್ಲಿಯಾರ್ ಶಾದುಲಿ ಬಾಖವಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಛದ್ಮವೇಷಗಳನ್ನು ಧರಿಸಲಾಯಿತು.

ಮಡಿಕೇರಿ: ಸರಕಾರಿ ಬಾಲಕ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಶನಿವಾರಸಂತೆ: ಶನಿವಾರಸಂತೆ ಗ್ರಾ.ಪಂ. ವತಿಯಿಂದ 71ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರಸಂತೆ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಒಟ್ಟು ಸೇರಿ ಶನಿವಾರಸಂತೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಶನಿವಾರಸಂತೆ ವ್ಯಾಪ್ತಿಯ ವೀಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ, ಬಾಪೂಜಿ ವಿದ್ಯಾಸಂಸ್ಥೆ, ತ್ಯಾಗರಾಜ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾವೇರಿ ವಿದ್ಯಾ ಸಂಸ್ಥೆ, ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಉರ್ದು ಶಾಲೆ, ಭಾರತೀಯ ವಿದ್ಯಾಸಂಸ್ಥೆ ಈ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸ್ವಾಂತ್ರ್ಯೋತ್ಸವವನ್ನು ಆಚರಿಸಲಾಯಿತು.

ತಾ.ಪಂ. ಸದಸ್ಯ ಬಿ.ಎಸ್. ಅನಂತ್ ಕುಮಾರ್, ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲೆಯ ಪ್ರಾಂಶುಪಾಲ ಶಿವಪ್ರಕಾಶ್ ಮಾತನಾಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ಉಷಾ ರಜನಿ, ಹೇಮಾವತಿ, ಸರ್ದಾರ್ ಅಹಮ್ಮದ್, ಆದಿತ್ಯ, ಪಾಂಡು, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ, ರವಿ, ಮುಖ್ಯ ಶಿಕ್ಷಕಿ ಪದ್ಮಾವತಿ, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯಿತಿ ಸದಸ್ಯ ಹರೀಶ್ ಸ್ವಾಗತಿಸಿ, ಉಪಾನ್ಯಶಸಕ ಕೆ.ಪಿ. ಜಯಕುಮಾರ್ ನಿರೂಪಣೆ ಮಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ವಂದಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ದೇಶ ಭಕ್ತಿಗೀತೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಗೆ ಸಿಹಿ ಹಂಚಲಾಯಿತು.