ವೀರಾಜಪೇಟೆ, ಆ: 28 ಅನೇಕ ದಶಕಗಳಿಂದ ವ್ಯವಸ್ಥಿತವಾಗಿ ವೀರಾಜಪೇಟೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಗೌರಿಗಣೇಶೋತ್ಸವಕ್ಕೆ ಯಾವದೇ ತಾರತಮ್ಯವಿಲ್ಲದೆ ರಾಜ್ಯ ಸರಕಾರ ಮಾನ್ಯತೆಯೊಂದಿಗೆ ಅನುದಾನವನ್ನು ನೀಡಬೇಕು. ಶತಮಾನಗಳ ಸಾಂಪ್ರದಾಯಿಕ ಹಬ್ಬದ ಆಚರಣೆ ಯಾದ ಗೌರಿ ಗಣೇಶೋತ್ಸವಕ್ಕೆ ನಾಡಹಬ್ಬ ಮೈಸೂರಿನ ದಸರಾ ಉತ್ಸವದಂತೆ ಉತ್ತೇಜನ ದೊರೆಯ ಬೇಕು ಎಂದು ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಗೌರಿ ಗಣೇಶೋತ್ಸ ವದ ಕ್ರೀಡಾ ಸಮಿತಿಯಿಂದ ಆಯೋಜಿಸಲಾಗಿದ್ದ ಕ್ರೀಡಾ ಕೂಟವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ ನಮ್ಮ ಶ್ರೀಮಂತ ಸಂಸ್ಕøತಿಯನ್ನು ಸಮಾಜದಲ್ಲಿ ಬಿಂಬಿಸಲು ಇಂತಹ ನಾಡಹಬ್ಬ ಸಾಕ್ಷಿಯಾಗಲಿದೆ. ಕ್ರೀಡಾ ಕೂಟದಲ್ಲಿ ಗಾಮಾಂತರ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗಿದೆ. ಸರಕಾರದ ಅನುದಾನವಿಲ್ಲದ್ದರಿಂದ ಇಲ್ಲಿನ 21 ಗೌರಿ ಗಣೇಶ ಉತ್ಸವ ಸಮಿತಿಗಳು ಆರ್ಥಿಕ ಸಂಕಷ್ಟದಿಂದ ಉತ್ಸವವನ್ನು ಆಚರಿಸಲಿವೆ. ಸರಕಾರ ಸಮಾನತೆ ಯನ್ನು ಕಾಯ್ದಿರಿಸಿಕೊಂಡು ರಾಜ್ಯ ವಿವಿಧೆಡೆಗಳ ನಾಡಹಬ್ಬಕ್ಕೆ ನೀಡುವ ಅನುದಾನವನ್ನು ವೀರಾಜಪೇಟೆಯ ಐತಿಹಾಸಿಕ ಗೌರಿಗಣೇಶೋತ್ಸವಕ್ಕು ನೀಡಬೇಕು ಎಂದು ಆಗ್ರಹಿಸಿದರು.

ಪ.ಪಂ. ಅಧ್ಯಕ್ಷ ಇ.ಸಿ. ಜೀವನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿನ 21 ಉತ್ಸವ ಸಮಿತಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪಟ್ಟಣ ಪಂಚಾಯಿತಿಯಲ್ಲಿ ಉತ್ಸವದ ಪ್ರಯುಕ್ತ ಕ್ರೀಡಾ ಸಮಿತಿ ರಚಿಸಿ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳ ಲಾಗಿದೆ.ಇದರಿಂದ ಸ್ಥಳೀಯ ಕ್ರೀಡಾಪಟುಗಳಿಗೂ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿಯ ಕ್ರೀಡಾ ಸಮಿತಿಯ ಅಧ್ಯಕ್ಷ ಕೆ.ವಿ.ಸಂತೋಷ್, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಮಾಜಿ ಅಧ್ಯಕ್ಷರುಗಳಾದ ಮನೆಯಪಂಡ ಕೆ.ದೇಚಮ್ಮ, ಕೂತಂಡ ಸಚಿನ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮಾಜಿ ಉಪಾಧ್ಯಕ್ಷರುಗಳಾದ ಎಸ್.ಎಚ್.ಮೈನುದ್ದೀನ್, ಎಚ್.ಆರ್. ಚಂದ್ರಶೇಖರ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ ಹೇಮ್‍ಕುಮಾರ್, ಪಂಚಾಯಿತಿ ಸದಸ್ಯರುಗಳು, ಮಹಿಳಾ ಸದಸ್ಯರುಗಳು, ಸಿಬ್ಬಂದಿ ಭಾಗವಹಿಸಿದ್ದರು.

ಇಲ್ಲಿನ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಪ್ರಾರಂಭದಲ್ಲಿ ನಾಮ ನಿದೇರ್ಶನ ಸದಸ್ಯ ಡಿ.ಪಿ ರಾಜೇಶ್ ಸ್ವಾಗತಿಸಿದರು. ಚಾಲ್ರ್ಸ್ ಡಿಸೋಜಾ ನಿರೂಪಿಸಿದರು. ಸದಸ್ಯ ಮಹಮ್ಮದ್ ರಾಫಿ ವಂದಿಸಿದರು.