ಮಡಿಕೇರಿ, ಆ.28 : ಮಾಲ್ದಾರೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂಪಾಯಿ ಮೌಲ್ಯದ ಗೊಬ್ಬರ ಹಾಗೂ ಕರಿಮೆಣಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘÀದ ಅಧ್ಯಕ್ಷರನ್ನು ಪದಚ್ಯುತ ಗೊಳಿಸಬೇಕೆಂದು ಕಾವೇರಿಸೇನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ.ರವಿ ಚಂಗಪ್ಪ, ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ತಾ. 20 ರಂದು ಸಹಕಾರ ಸಂಘದ ನೋಂದಾವಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಆದರೆ, ಅಧಿಕಾರಿಗಳು ತನಿಖೆÉ ನಡೆಸುವ ಭರವಸೆ ನೀಡಿರುವದರಿಂದ ಪ್ರತಿಭಟನೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿರುವದಾಗಿ ತಿಳಿಸಿದರು.

ಸಂಘÀದ ಗುಮಾಸ್ತರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವಂತೆ ಅಧ್ಯಕ್ಷರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸೆÀ.20ರ ನಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಪ್ರಧಾನ ಕಾರ್ಯದರ್ಶಿ ರಘು ಮಾಚಯ್ಯ, ಸೋಮವಾರಪೇಟೆ ಅಧ್ಯಕ್ಷ ಹೊಸಬೀಡು ಶಶಿ, ಮಾಲ್ದಾರೆ ಸಹಕಾರ ಸಂಘದ ಸದಸ್ಯರುಗಳಾದ ಬಿ.ಕೆ.ರಾಘವ ಹಾಗೂ ಸಿ.ವಿಜು ಬಿದ್ದಪ್ಪ ಉಪಸ್ಥಿತರಿದ್ದರು.