ಗೋಣಿಕೊಪ್ಪಲು, ಆ. 28: ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿ ಕೆಲವು ಸಂಘಟನೆಗಳು ಪೊಲೀಸರನ್ನು ಬಳಸಿಕೊಂಡು ಅಕ್ರಮ ಗೋಸಾಗಾಟ ಎಂದು ಹೇಳುತ್ತ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಸಮುದಾಯದವರ ಭಾವನೆಗಳನ್ನು ಗೌರವಿಸುತ್ತಿದ್ದು. ಮನೆಯ ಕೊಟ್ಟಿಗೆಯಲ್ಲಿ ಕಟ್ಟುಹಾಕಿದ್ದ ಹಸುವನ್ನು ಪೊಲೀಸರು ವಶಕ್ಕೆ ಪಡೆದಿರುವದು ಖಂಡನೀಯ. ಕೆಲವು ಸಂಘಟನೆಗಳು ಸತ್ಯಕ್ಕೆ ದೂರವಾದ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಪ್ರಕರಣವನ್ನು ತಿರುಚಲು ಪ್ರಯತ್ನಿಸಿ ಗೊಂದಲ ನಿರ್ಮಾಣ ಮಾಡುತ್ತಿರುವದು ಸರಿಯಲ್ಲ. ಸಮಾಜದ ಶಾಂತಿ ಕಾಪಾಡಲು ಎಲ್ಲರೂ ಕೈಜೋಡಿಸುತ್ತೇವೆ. ಇಲ್ಲಿನ ಸಂಸ್ಕøತಿಯನ್ನು ಗೌರವಿಸುವದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಇದಕ್ಕೆ ನಾವು ಬದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಗೋಹತ್ಯೆ ಅಪರಾಧÀವೇ ಹೊರತು ಸಾಕುವದು ಅಪರಾಧÀ ಎಂದು ನಮಗೆ ತಿಳಿದಿಲ್ಲ.

ಜಿಲ್ಲಾ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವಿಶ್ವಾಸವಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನಮ್ಮನ್ನೂ ಅನುಮಾನಿಸಿ ಅಪರಾಧಿಯಂತೆ ಪರಿಗಣಿಸುತ್ತಿರುವದು ಖಂಡನೀಯ. ನ್ಯಾಯಾಲಯ ಈ ಬಗ್ಗೆ ಪರಿಶೀಲಿಸಿ ನೈಜತೆ ಹೊರತರಬೇಕೆಂದು ಒತ್ತಾಯಿಸಿದ್ದಾರೆ.