ಗೋಣಿಕೊಪ್ಪಲು, ಆ. 30: ಇಲ್ಲಿನ ಪ್ರೌಢಶಾಲೆಯಲ್ಲಿ ಪೊನ್ನಂಪೇಟೆ ಜೆಸಿಐ ಗೋಲ್ಡನ್ ಹಾಗೂ ಗೋಣಿಕೊಪ್ಪಲು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಸಂತ ಅಂಥೋನಿ ಹಾಗೂ ಅರ್ವತ್ತೋಕ್ಲು ಸರ್ವದೈವತಾ ಶಾಲಾ ತಂಡಗಳು ತಲಾ ಎರಡು ಬಹುಮಾನ ಗೆದ್ದುಕೊಂಡಿದೆ.

ಫಲಿತಾಂಶ: ಪ್ರೈಮರಿ ವಿಭಾಗದಲ್ಲಿ ಸೋಮವಾರಪೇಟೆ ಫಾತಿಮ ಶಾಲೆಯ ರಜತ್ ಗಣಪತಿ (ಪ್ರ), ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಧ್ಯಾನ್ ಪೆಮ್ಮಯ್ಯ (ದ್ವಿ), ಪೊನ್ನಂಪೇಟೆ ಸಂತ ಆಂಥೋನಿಯ ಅಂಚನ್ ದಿನೇಶ್ (ತೃ), ಸಂತ ಅಂಥೋನಿಯ ಲಿಜೊ ಜೇಮ್ಸ್ ನಾಲ್ಕನೆ ಸ್ಥಾನ ಪಡೆದುಕೊಂಡರು.

ಹೈಯರ್ ಪ್ರೈಮರಿ ವಿಭಾಗದಲ್ಲಿ ಅರ್ವತೋಕ್ಲು ಸರ್ವ ದೈವತಾ ಶಾಲೆಯ ಎಂ.ಆರ್. ನೀಲಮ್ಮ (ಪ್ರ), ಸರ್ವ ದೈವತಾದ ವಿ.ಪಿ. ದರ್ಶನ್ (ದ್ವಿ), ಸಾಗರ್ ನಾಚಪ್ಪ (ತೃ), ಧ್ಯಾನ್ ಮಾದಪ್ಪ ನಾಲ್ಕನೇ ಸ್ಥಾನ ಗಳಿಸಿದರು.

ಮುಕ್ತ ವಿಭಾಗದಲ್ಲಿ ಅನನ್ಯ ಸುರೇಶ್ (ಪ್ರ), ಮಣಿ - ನಾಗೇಂದ್ರ (ದ್ವಿ), ಹೆಚ್.ಎನ್. ದರ್ಶನ್ - ಜಿಯೋ ಮ್ಯಾಥ್ಯು (ತೃ) ಸ್ಥಾನ ಪಡೆದರು. ಸುಮಾರು 50 ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

ಜೋಡುಬೀಟಿ ಕೊಡವ ಸಂಘ ಅಧ್ಯಕ್ಷ ಕಳ್ಳಿಚಂಡ ಮುತ್ತಪ್ಪ ಕ್ರೀಡಾಕೂಟ ಉದ್ಘಾಟಿಸಿದರು. ಶಾರದ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ, ಗೋಣಿಕೊಪ್ಪಲು ರೋಟರಿ ಅಧ್ಯಕ್ಷ ಮಚ್ಚಮಾಡ ವಿಜಯ, ಕಾರ್ಯದರ್ಶಿ ದಿಲನ್ ಚೆಂಗಪ್ಪ, ಪೊನ್ನಂಪೇಟೆ ಗೋಲ್ಡನ್ ಜೆಸಿಐ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್ ಹಾಗೂ ಇಂಟ್ರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸ್ನೇಹ ಬಹುಮಾನ ವಿತರಿಸಿದರು.