ನಾಪೋಕ್ಲು, ಆ. 30 : ದೇವಾಲಯದ ಆವರಣದಲ್ಲಿ ಜಾನುವಾರು ಮೂಳೆ ನೇತು ಹಾಕಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಲು ಯತ್ನಿಸಿರುವದನ್ನು ಖಂಡಿಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಇಂದು ಕಕ್ಕಬೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತಲ್ಲದೇ ಶಾಂತಿ ಕದಡಲು ಯತ್ನಿಸಿರುವ ಸಮಾಜ ಘಾತುಕ ಶಕ್ತಿಗಳನ್ನು ಬಂಧಿಸಲು ಒಂದು ವಾರದ ಗಡುವು ನೀಡಲಾಯಿತು.ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ದೇವಾಲಯದ ಮುಖ್ಯ ದ್ವಾರದಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ದನದ ಮೂಳೆಗಳನ್ನು ತುಂಬಿಸಿ ನೇತು ಹಾಕಿದ್ದನ್ನು ಖಂಡಿಸಿ ಹಿಂದೂ ಬಾಂಧವರು ಪ್ರತಿಭಟನೆ ನಡೆಸಿದರು.

ದೇವಸ್ಥಾನದ ಕಮಾನಿಗೆ ನೇತು ಹಾಕಿದ್ದ ಚೀಲವನ್ನು ದೇವಳದ ತಕ್ಕರಾದ ಪಾಂಡಂಡ ನರೇಶ್ ಕೆಲಸದವರ ಮೂಲಕ ಕೆಳಗಿಳಿಸಿ ಪರೀಕ್ಷಿಸಿದಾಗ ಕತ್ತರಿಸಿದ ದನದ ನಾಲ್ಕು ಕಾಲು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಈ ಬಗ್ಗೆ ದೇವಸ್ಥಾನ ಸಮಿತಿ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೆÇಲೀಸರ ತಂಡ ಪರಿಶೀಲನೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿತು. ಅದಕ್ಕೆ ತೃಪ್ತರಾಗದ ಗ್ರಾಮಸ್ಥರು ಪೆÇಲೀಸ್ ಉನ್ನತಾಧಿಕಾರಿಗಳು ಸ್ಥಳಕ್ಕಾಗಮಿಸಬೇಕೆÉಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಮಡಿಕೇರಿ ಡಿವೈಎಸ್ಪಿ ಸುಂದರರಾಜ್ ಮತ್ತು ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ಕಿಡಿಗೆಡಿಗಳನ್ನು ಶಿಘ್ರದಲ್ಲಿ ಬಂಧಿಸುವ ಭರವಸೆ ನೀಡಿದರು. ಆದರೂ ಕಕ್ಕಬೆ ಪಟ್ಟಣದಲ್ಲಿ ಗ್ರಾಮಸ್ಥರು, ಹಿಂದೂಪರ

(ಮೊದಲ ಪುಟದಿಂದ) ಸಂಘಟನೆ ಪ್ರಮುಖರು ಪ್ರತಿಭಟನೆ ನಡೆಸಿ ಘೋಷಣೆ ಕೂಗುವದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಇದು ಹೀನಾಯ ಕೃತ್ಯವಾಗಿದೆ. ಸಮಾಜ ಘಾತಕ ಶಕ್ತಿಗಳ ಕಾರ್ಯ ಸಮಾಜದ ಶಾಂತಿ ಕದಡುವದಾಗಿದೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ಗಣೇಶ ಹಬ್ಬ ಮತ್ತು ಬಕ್ರೀದ್ ಹಬ್ಬದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಅಕ್ರಮ ದನದ ಹತ್ಯೆ ಮತ್ತು ಮಾಂಸ ಮಾರಾಟ ದಂದೆ ನಡೆಯುತ್ತಿದು ಪೆÇಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಉಗ್ರಪ್ರತಿಭಟನೆ ನಡೆಸಲಾಗವದು ಎಂದು ಎಚ್ಚರಿಸಿದರು.

ಘಟನಾ ಸ್ಥಳ ಜಮಾಯಿಸಿದ್ದ ಹಿಂದೂ ಬಾಂಧವರು ಕೃತ್ಯವನ್ನು ಖಂಡಿಸಿ ಕಿಡಿಗೇಡಿಗಳನ್ನು ಬಂದಿಸುವಂತೆ ಒತ್ತಾಯಿಸಿ ಘಟನಾ ಸ್ಥಳದಿಂದ ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಕಕ್ಕಬೆ ಪೇಟೆಯ ಕೂಡು ರಸ್ತೆಯಲ್ಲಿ ಪ್ರತಿಭಟನಾ ಸಭೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ ಹಿಂದೂ ಸಮುದಾಯದವರು ಎಲ್ಲರೊಂದಿಗೂ ಅನೋನ್ಯವಾಗಿದ್ದರೂ, ಮತಾಂಧ ಕೆಲವು ಕಿಡಿಗೇಡಿಗಳಿಂದ ಇಂತಹ ಘಟನೆಗಳು ಜರುಗುತ್ತಿದ್ದು, ಇದು ಸಮಾಜದಲ್ಲಿ ಶಾಂತಿ ಕದಡಿ ದ್ವೇಷಕ್ಕೆ ಕಾರಣವಾಗುತ್ತಿದ್ದು, ಇಂತಹ ಸಮಾಜ ಘಾತುಕ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಶಾಂತಿ ನೆಲೆಸುವಂತಾಗಬೇಕು . ಇದೀಗ ಗಣಪತಿ ಹಬ್ಬ ಮತ್ತು ಬಕ್ರೀದ್ ಹಬ್ಬದ ಸಂದರ್ಭವಾಗಿದ್ದು, ಈ ನೀಚ ಕೃತ್ಯವನ್ನು ನಡೆಸಿ ಅಶಾಂತಿಗೆ ಮುಂದಾಗಿರುವದು ಅಕ್ಷಮ್ಯ ಅಪರಾಧ ಯಾರೇ ಆಗಿದ್ದರೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡು ಒಂದು ವಾರದೊಳಗೆ ಬಂಧಿಸಬೇಕು, ತಪ್ಪಿದಲ್ಲಿ ತೀವ್ರ ತರಹ ಹೋರಾಟಕ್ಕೆ ಮುಂದಾಗಿರುವದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ಪ್ರಮುಖರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಬಡಕಡ ಸುರೇಶ್ ಬೆಳ್ಯಪ್ಪ, ಬಿಜೆಪಿ ಕಾರ್ಯದರ್ಶಿ ರವಿ ಬಸಪ್ಪ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಡಿವೈಎಸ್ಪಿ ಸುಂದರಾಜ್ ಅವರು ಅಹವಾಲು ಆಲಿಸಿ ಗಣಪತಿ ಮತ್ತು ಬಕ್ರೀದ್ ಹಬ್ಬದ ಸಂದರ್ಭ ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳು ಯಾರೇ ಆಗಿದ್ದರೂ ಬಂಧಿಸುವದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕಲಿಯಂಡ ಸುನಂದ, ಚಂಡಿರ ಜಗದೀಶ್, ಸುರಾ ನಾಣಯ್ಯ, ಕುಶಾಲಪ್ಪ, ಸ್ವಿಟಾ ಪೆಮ್ಮಯ್ಯ, ಆರ್‍ಆರ್‍ಎಸ್ ಪ್ರಮುಖ ಕಂಗಾಂಡ ಜಾಲಿ ಪೂವಪ್ಪ, ಹಿಂಜಾವೇ ಪ್ರಮುಖ ಕೇಳೇಟಿರ ಸಾಬು ನಾಣಯ್ಯ, ಎಂ.ರಮೇಶ್, ಪ್ರಮೀಳಾ ಪೆಮ್ಮಯ್ಯ, ವಿಜು ಪೂಣಚ್ಚ, ಶರಣ್ ಕುಮಾರ್ ಸೇರಿದಂತೆ ಹಲವಾರು ಹಿಂದೂ ಬಾಂಧವರು ಹಾಜರಿದ್ದರು.

ಬಿಗಿ ಪೆÇಲೀಸ್ ಬಂದೋಬಸ್ತ್: ಪ್ರಕರಣದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪೆÇಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಆದೇಶದಂತೆ ಡಿವೈಎಸ್ಪಿ ಸುಂದರ್ ರಾಜ್ ನಿದೆರ್Éೀಶನದಲ್ಲಿ ವೃತ್ತ ನಿರೀಕ್ಷಕ ಪ್ರದೀಪ್ ಮತ್ತು ನಾಪೆÇೀಕ್ಲು ಠಾಣಾಧಿಕಾರಿ ನಂಜುಂಡ ಸ್ವಾಮಿ ಮತ್ತು ಸಿಬ್ಬಂದಿ ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಸ್ಥಳದಲ್ಲಿ ಡಿ.ಆರ್ ತುಕ್ಕಡಿಯನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ವಿಧ್ವಂಸಕ ಕೃತ್ಯ ತಪಾಸÀಣಾ ಪತ್ತೆದಳ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದೆ.

ಪ್ರಮುಖರ ಖಂಡನೆ : ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ದೂರವಾಣಿ ಮೂಲಕ ‘ಶಕ್ತಿ’ಗೆ ಮಾಹಿತಿ ನೀಡಿದ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಇದರಿಂದ ಜಿಲ್ಲೆಯ ಬಹು ಸಂಖ್ಯಾತರ ಮನಸ್ಸಿಗೆ ಅತೀವ ನೋವುಂಟಾಗಿದೆ. 48 ಗಂಟೆಗಳಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು

ಕಕ್ಕಬೆಯ ನೆಟ್ಟುಮಾಡು ಶ್ರೀ ಭಗವತಿ ದೇವಾಲಯ ಆವರಣವನ್ನು ಅಪವಿತ್ರಗೊಳಿಸಿರುವ ಕೃತ್ಯವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಮೊದಲಾದವರು ತೀವ್ರವಾಗಿ ಖಂಡಿಸಿದ್ದಾರೆ.

- ದುಗ್ಗಳ / ಪಿ.ವಿ.ಪ್ರಭಾಕರ್