ಮಡಿಕೇರಿ, ಆ. 29: ಜಿಲ್ಲೆಯಾ ದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ ಮಳೆಯ ಆರ್ಭಟ ಹೆಚ್ಚಾಗಿತ್ತು. ರಾತ್ರಿ ಕೂಡ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕೆಲವೆಡೆ ಮನೆಕುಸಿತ, ಭೂಕುಸಿತ ಸಂಭವಿಸಿದೆ. ಕಾವೇರಿ ನದಿ ಸೇರಿದಂತೆ ಇತರ ನದಿ - ತೊರೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ.ಭಾರೀ ಗಾಳಿ - ಮಳೆಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಎರಡು ಮನೆಗಳು ಕುಸಿದಿವೆ. ಅಲ್ಲಿನ ನಿವಾಸಿಗಳಾದ ಧನು ಹಾಗೂ ನರಸಮ್ಮ ಎಂಬವರ ಮನೆಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಡರಾತ್ರಿ 12.40ರ ವೇಳೆಗೆ ಧನು ಅವರ ಮನೆ ಕುಸಿದಿದ್ದು, ಇಂದು ಬೆಳಿಗ್ಗೆ 6 ಗಂಟೆ ವೇಳೆಗೆ ನರಸಮ್ಮ ಅವರ ಮನೆ ಕುಸಿದಿದೆ. ಸ್ಥಳಕ್ಕೆ ನಗರಸಭಾ ಸದಸ್ಯ ಕೆ.ಎಂ. ಗಣೇಶ್, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಕ್ಕಂದೂರು : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಪಿ.ಪಿ. ಗಂಗಾಧರ ಹಾಗೂ ಬಿ.ಎಸ್. ಮಂಜಪ್ಪ ಅವರುಗಳ ಮನೆಗೆ ತೆರಳುವ ರಸ್ತೆ ಸಂಪೂರ್ಣ ಕುಸಿದು ಬಿದ್ದಿದೆ. ನಿನ್ನೆ ರಾತ್ರಿ ರಸ್ತೆ ಕುಸಿದಿದ್ದು, ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಸುವರ್ಣ ಭೇಟಿ ನೀಡಿ ಪರಿಶೀಲಿಸಿ ರಸ್ತೆ ದುರಸ್ತಿಗೆ ಮಳೆ ಹಾನಿ ಪರಿಹಾರ ನಿಧಿಯಡಿ ಅನುದಾನ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

(ಮೊದಲ ಪುಟದಿಂದ)

ಭಾಗಮಂಡಲ

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದ್ದು, ಸಂಗಮದಲ್ಲಿ ನೀರಿನ ಏರಿಕೆಯಲ್ಲಿ ಯಾವದೇ ವ್ಯತ್ಯಾಸ ಕಂಡು ಬಂದಿಲ್ಲ. ಸಣ್ಣಪುಲಿಕೋಟು ಗ್ರಾಮದ ಉದಿಯನ ಜೀವನ್ ಎಂಬವರ ಮನೆಯ ಮೇಲ್ಛಾವಣಿ ಇಂದು ಬೆಳಿಗ್ಗೆ ಕುಸಿದು ಬಿದ್ದಿದೆ. ಮನೆಯವರು ಒಳಗಿದ್ದು, ಅಟ್ಟ ಇದ್ದುದರಿಂದ ಯಾವದೇ ಅಪಾಯ ಸಂಭವಿಸಿಲ್ಲ.

ಕುಶಾಲನಗರ

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ನದಿ, ತೊರೆಗಳಲ್ಲಿ ನೀರಿನ ಹರಿವಿನ ಪ್ರಮಾಣ ಏರು ಪೇರಾಗಿದೆ. ಕಾವೇರಿ ಜಲಾನಯನ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ. ಪಟ್ಟಣ ವ್ಯಾಪ್ತಿಯಲ್ಲಿ 1 ದಿನದ ಅವಧಿಯಲ್ಲಿ 36.2 ಮಿಮೀ ಪ್ರಮಾಣದ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ಹಾರಂಗಿ ಜಲಾಶಯ ಮತ್ತು ಚಿಕ್ಲಿಹೊಳೆ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳ ಗೊಂಡಿದ್ದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತ ಮಳೆಯಿಂದ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ.

ಗೋಣಿಕೊಪ್ಪಲು

ದಕ್ಷಿಣ ಕೊಡಗಿನ ಎಲ್ಲೆಡೆ 2 ಇಂಚಿನಿಂದ 5 ಇಂಚುಗಳವರೆಗೂ ಕಳೆದ 24 ಗಂಟೆ ಅವಧಿಯಲ್ಲಿ ಮಳೆಯಾಗಿದೆ. ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಇಂದಿನವರೆಗೆ ಒಟ್ಟು 50.24 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 36.26 ಇಂಚು ಮಳೆಯಾಗಿ ಕೊರತೆ ಕಂಡು ಬಂದಿತ್ತು. ಕಳೆದ 24 ಗಂಟೆ ಅವಧಿಯಲ್ಲಿ ಗೋಣಿಕೊಪ್ಪಲಿನಲ್ಲಿ 2 ಇಂಚಿಗೂ ಅಧಿಕ ಮಳೆ ದಾಖಲಾಗಿದೆ.

ಮಾಕುಟ್ಟ ವ್ಯಾಪ್ತಿಯಲ್ಲಿ ಕಳೆದ ಒಂದು ದಿನದಲ್ಲಿ ಸುಮಾರು 5 ಇಂಚು ಮಳೆ ದಾಖಲಾಗಿದೆ. ಬಿ.ಶೆಟ್ಟಿಗೇರಿ ಕುಟ್ಟಂದಿ ವ್ಯಾಪ್ತಿಯಲ್ಲಿ ಇಂದಿನವರೆಗೆ 102 ಇಂಚು ಮಳೆ ದಾಖಲಾಗಿದ್ದು ಕಳೆದ ವರ್ಷ ಇದೇ ಅವಧಿಗೆ ಪ್ರಮಾಣ ಕೇವಲ 80 ಇಂಚು ಇತ್ತು. ಬಿಟ್ಟಂಗಾಲ-ವಿ.ಬಾಡಗ ವ್ಯಾಪ್ತಿಯಲ್ಲಿ ಒಟ್ಟಾರೆ ಈವರೆಗೆ 88 ಇಂಚು ಮಳೆ ದಾಖಲಾಗಿದೆ.

ಕುಟ್ಟ ವ್ಯಾಪ್ತಿಯಲ್ಲಿ ಕಳೆದ ವರ್ಷ ಈವರೆಗೆ 46 ಇಂಚು ಮಳೆಯಾಗಿತ್ತು. ಈ ಬಾರಿ ಒಟ್ಟು 38 ಇಂಚು ಮಳೆ ದಾಖಲಾಗಿ 8 ಇಂಚು ಮಳೆ ಕೊರತೆ ಕಂಡು ಬಂದಿದೆ. ಕೃಷಿ ತಜ್ಞರ ಪ್ರಕಾರ ಇನ್ನೂ 15 ದಿನ ಇದೇ ರೀತಿಯ ಮಳೆ ಮುಂದುವರಿದರೆ ಅಲ್ಲಲ್ಲಿ ಜಲ ಹುಟ್ಟುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕೈಕೇರಿ ಗ್ರಾಮಸ್ಥರೊಬ್ಬರ ಮನೆಂiÀi ಆವರಣ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಗೋಣಿಕೊಪ್ಪಲು ಮುಖ್ಯರಸ್ತೆ ಭಾರೀ ಹೊಂಡಗಳಾಗಿ ಪರಿವರ್ತನೆಯಾಗಿದ್ದು ಇಲ್ಲಿನ ವಿಜಯಾ ಬ್ಯಾಂಕ್ ಮುಂಭಾಗ, ಬಸ್ ನಿಲ್ದಾಣ, ಪೆÇನ್ನಂಪೇಟೆ ರಸ್ತೆ ತಿರುವು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಪಾದಚಾರಿಗಳ ಓಡಾಟವೇ ಕಷ್ಟ ಸಾಧ್ಯವಾಗಿದೆ. ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಈ ಹಿಂದೆ ಶಕ್ತಿಯ ವರದಿ ನಂತರ ಮುಖ್ಯ ರಸ್ತೆಯ ಗುಂಡಿಗಳಿಗೆ ಕಲ್ಲು ಮಣ್ಣು ಸುರಿದಿದ್ದರೂ, ಇದೀಗ ಮಳೆಗೆ ಮತ್ತೆ ಭಾರೀ ಹೊಂಡಗಳಾಗಿ ವಾಹನ ಓಡಾಟ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳ ಓಡಾಟಕ್ಕೆ ತೀವೃ ತೊಂದರೆಯುಂಟಾಗಿದೆ.

ಬಿರುನಾಣಿ, ಇರ್ಪು ಜಲಪಾತ, ಶ್ರೀಮಂಗಲ, ಹುದಿಕೇರಿ, ಪೆÇನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ, ಬಾಳೆಲೆ-ಕೊಟ್ಟಗೇರಿ ಯಲ್ಲಿಯೂ ಉತ್ತಮ ಮಳೆಯಾಗಿದೆ.