ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯ ವಿವಿಧೆಡೆ ಗಣೇಶೋತ್ಸವವನ್ನು ಆಚರಿಸಲಾಯಿತು. ಭಾಗಮಂಡಲ ದೇವಾಲಯದಲ್ಲಿ ಗಣೇಶನ ಮೂರ್ತಿಗೆ ಬೆಣ್ಣೆಯಿಂದ ಅಲಂಕರಿಸಲಾಗಿತ್ತು.

ದೇವಾಲಯದಲ್ಲಿ ಗಣಹೋಮ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಸ್ಥಳೀಯ ಕಾವೇರಿ ಪದವಿಪೂರ್ವ ಕಾಲೇಜು, ಚೇರಂಗಾಲ ಗ್ರಾಮದ ನಾಗತೀರ್ಥ ಭಕ್ತ ಮಂಡಳಿ, ತಣ್ಣಿಮಾನಿ ಗ್ರಾಮದ ಭಗವತಿ ದೇವಾಲಯ, ತಾವೂರಿನ ಮಹಿಶಾಸುರ ಮರ್ದಿನಿ ದೇವಾಲಯದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು.

ನಾಪೋಕ್ಲು: ಇಲ್ಲಿಗೆ ಸಮೀಪದ ಹೊದವಾಡ ಗ್ರಾಮದ ಶ್ರೀ ಭಗವತಿ ದೇವಾಲಯ ಶ್ರೀ ಗಣಪತಿ ಉತ್ಸವ ಸಮಿತಿ ವತಿಯಿಂದ 12ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು.

ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿದ ಬಳಿಕ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದ ಬಳಿಕ ಭಕ್ತಾದಿಗಳಿಗೆ ಅನ್ನದಾನ ಜರುಗಿತು. ಬಳಿಕ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ ಮುಖ್ಯ ಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕಾವೇರಿ ಹೊಳೆಯಲ್ಲಿ ವಿಸರ್ಜಿಸಲಾಯಿತು.ಮಡಿಕೇರಿ, ಆ. 29: ಶನಿವಾರಸಂತೆ ಸುಪ್ರಜ ಗುರುಕುಲ ಶಾಲೆಯಲ್ಲಿ ರೆಡ್ ಅಂಡ್ ಪಿಂಕ್ ಡೇ ಆಚರಿಸಲಾಯಿತು. ಇದೇ ಸಂದರ್ಭ ಮಣ್ಣಿನಿಂದ ಗಣಪತಿಯನ್ನು ತಯಾರಿಸುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡಲಾಯಿತು. ಶಾಲಾ ವಿದ್ಯಾರ್ಥಿಗಳು ಮಣ್ಣಿನಲ್ಲಿ ಗಣೇಶನ ಕಲಾಕೃತಿಗಳನ್ನು ತಯಾರಿಸಿದರು.ಮೂರ್ನಾಡು: ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಸಮಿತಿಗಳ ವತಿಯಿಂದ ಗಣೇಶ ಮೂರ್ತಿಗಳನ್ನು ಪೂಜೆ ಪುನಸ್ಕಾರಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ವೆಂಕಟೇಶ್ವರ ಕಾಲೋನಿಯ ಶ್ರೀ ವಿನಾಯಕ ಯುವಕ ಮಂಡಳಿ, ಗಾಂಧಿನಗರದ ಶ್ರೀ ರಾಮ ಮಂದಿರ ಸೇವಾ ಸಮಿತಿ, ಶ್ರೀ ಗಜಾನನ ಯುವಕ ಸಂಘ, ಶ್ರೀರಾಮ ಮಂದಿರದ ಶ್ರೀ ರಾಮ ಸೇವಾ ಸಮಿತಿ, ಕೋಡಂಬೂರು ಶ್ರೀ ವಿಘ್ನೇಶ್ವರ ಗೆಳೆಯರ ಬಳಗ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಭಗವತಿ ಕಾಲೋನಿಯ ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗ, ಶ್ರೀ ದುರ್ಗಾ ಪರಮೇಶ್ವರಿ ಬಾಲಕ ಭಕ್ತ ಮಂಡಳಿ, ಜೈ ಭಜರಂಗಿ ಯುವಕ ಸಂಘ ಹಾಗೂ ಎಂ. ಬಾಡಗ ಶ್ರೀ ಬಿಸಿಲು ಮಾರಿಯಮ್ಮ ಗೆಳೆಯರ ಬಳಗ ವತಿಯಿಂದ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ಗಾಂಧಿನಗರದ ಶ್ರೀ ರಾಮ ಮಂದಿರ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಪಟ್ಟಣದ ಕೊಂಡಂಗೇರಿ ರಸ್ತೆಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಚಂಡೆ ವಾದ್ಯದೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಗಾಂಧಿನಗರದ ಶ್ರೀ ರಾಮ ಮಂದಿರದವರೆಗೆ ಕೊಂಡ್ಯೊಯ್ದು ಪ್ರತಿಷ್ಠಾಪಿಸಲಾಯಿತು.

ಪಟ್ಟಣದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ಬೆಳಿಗ್ಗೆ ಗಣಪತಿ ಹೋಮ ನಡೆಸಿ ವಿಧಿವಿಧಾನಗಳೊಂದಿಗೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

ಶ್ರೀರಾಮ ಮಂದಿರದ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಒಂದು ದಿನಗಳ ಕಾಲ ಪೂಜೆ ಸಲ್ಲಿಸಿ ಸಂಜೆ ಬಲಮುರಿ ನದಿಯಲ್ಲಿ ವಿರ್ಸಜಿಸಲಾಯಿತು. ಉಳಿದ ಒಂಭತ್ತು ಗಣೇಶ ಮೂರ್ತಿಗಳನ್ನು ಏಳು ದಿವಸಗಳ ಕಾಲ ಪೂಜೆ ಸಲ್ಲಿಸಿ ಗುರುವಾರ ರಾತ್ರಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಮೂಹಿಕ ವಿರ್ಸಜನೆ ನಡೆಯಲಿದೆ.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ನಿಸರ್ಗಧಾಮ ಪ್ರವಾಸಿ ತಾಣ (ಎನ್.ಟಿ.ಸಿ.) ವತಿಯಿಂದ ಪ್ರಥಮ ವರ್ಷದ ಗೌರಿ-ಗಣೇಶ ಉತ್ಸವವನ್ನು ಆಚರಿಸಲಾಯಿತು. ಇದು ಶಾಂತಿ, ಸೌಹಾರ್ಧತೆ, ಕೋಮುಸಾಮರಸ್ಯ ಪ್ರೀತಿ, ವಿಶ್ವಾಸ ಸಾರುವ ಗಣೇಶೋತ್ಸವವಾಗಿತ್ತು. ಕಾವೇರಿ ನಿಸರ್ಗಧಾಮದ ಬಳಿ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮಳಿಗೆಗಳನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಜನಾಂಗ ಬಾಂಧವರು ನಡೆಸುತ್ತಿದ್ದಾರೆ. ಅವರೆಲ್ಲಾ ಒಟ್ಟಿಗೆ ಸೇರಿ ಸಾರ್ವತ್ರಿಕ ಗಣೇಶೋತ್ಸವವನ್ನು ಆಚರಿಸಿದರು. ವಾಣಿಜ್ಯ ಸಂಕಿರ್ಣದ ಮಾಲೀಕ ಅಬ್ದುಲ್ ಸಲಾಂ, ವಾಣಿಜ್ಯ ಸಂಕಿರ್ಣದಲ್ಲಿ ದೊಡ್ಡಗಾತ್ರದ ಶಾಮಿಯಾನ ಅಳವಡಿಸಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ಹೋಮ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎನ್.ಟಿ.ಸಿ. ವತಿಯಿಂದ ಕಾರ್ಯನಿರ್ವಯಿಸುತ್ತಿರುವ ಒಟ್ಟು 50 ಅಂಗಡಿ ಮಾಲೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಘ್ನೇಶ್ವರನನ್ನು ಪೂಜಿಸಿ ಆರಾಧಿಸಿದರು. 3 ದಿನಗಳ ಕಾಲ ಪೂಜಿಸಿದ ನಂತರ ಅಲ್ಲಿಯ ಪಕ್ಕದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಗಣೇಶ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಸ್ಥಳೀಯವಾಗಿ ಮೆರವಣಿಗೆ ಸಾಗಿ ಸರ್ವ ಜಾತಿಯವರು ಸೇರಿ ವಿಸರ್ಜಿಸಲಾಯಿತು.

ಈ ರೀತಿಯ ಕಾರ್ಯಕ್ರಮಗಳು ನಡೆದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಕಾರ್ಯ ನಡೆಸುತ್ತಿರುವ ಎನ್.ಟಿ.ಸಿ. ಮಾಲೀಕರಾದ ಆಬ್ದಲ್ ಸಲಾಂ ಅವರಿಗೆ ಸಾರ್ವಜನಿಕರ ಪರವಾಗಿ ಒಂದು ಸಲಾಂ... ಇನ್ನೂ ಮುಂದೆಯು ಈ ರೀತಿಯ ಆಚರಣೆ ನಡೆಸಿಕೊಂಡು ಬರಲಿ ಮತ್ತು ಸಮಾಜದಲ್ಲಿ ಸಹೋದರ್ವಭಾವನೆ ಬೆಳೆದು ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಮೂಡಲಿ. ಲಕ್ಷಾಂತರ ಹಣ ಖರ್ಚು ಮಾಡಿ ಈ ರೀತಿ ಗಣೇಶೋತ್ಸವ ಆಚರಿಸಿರುವದು ನಿಜಕ್ಕೂ ಮೆಚ್ಚುವಂತದ್ದೆ. ಮೂರು ದಿನಗಳ ಕಾಲ ಖರ್ಚನ್ನು ಸಲಾಂ ಅವರೆ ನಡೆಸಿದ್ದಾರೆ.

ಸಿದ್ದಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀರಾಮ ಮಂದಿರದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮೊದಲು ಸಿದ್ದಾಪುರ ಪಟ್ಟಣದಲ್ಲಿ ವಾದ್ಯ ಮೇಳಗಳೊಂದಿಗೆ ಗೌರಿ ಗಣೇಶ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತು.

ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ರಾಯಲ್ ಯುವಕ ಸಂಘದ ವತಿಯಿಂದ ಪಾಲಿಬೆಟ್ಟ ರಸ್ತೆಯಲ್ಲಿ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಇದೇ ಸಂದರ್ಭ ಪೂಜಾ ಕಾರ್ಯಗಳನ್ನು ನಡೆಸಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಕೂಡಿಗೆ: ಕೂಡಿಗೆ, ಕೊಪ್ಪಲು ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಆಯೋಜಿಸಿದ್ದ ಗೌರಿ, ಗಣೇಶೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿದರು. ಈ ಸಂದರ್ಭ ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಗ್ರಾ.ಪಂ.ನ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರುಗಳಾದ ಕಲ್ಪನಾ, ಕೆ.ಬಿ. ರಾಮಚಂದ್ರ, ಜಿಲ್ಲಾ ಐ.ಎನ್.ಟಿ.ಯೂ.ಸಿ. ಅಧ್ಯಕ್ಷ ಟಿ.ಪಿ. ಹಮೀದ್, ಯುವಕ ಸಂಘದ ಅಧ್ಯಕ್ಷ ಕೆ.ಸಿ. ರವಿ, ಸ್ಥಳೀಯ ಮಾಜಿ ಸೈನಿಕ ವೆಂಕಟೇಶ್, ಸಹಕಾರ ಸಂಘದ ನಿವೃತ್ತ ಅಧಿಕಾರಿ ಎಂ.ವಿ. ಶಿವಣ್ಣ, ರಾಜಪ್ಪ, ಗುತ್ತಿಗೆದಾರ ಕೆ.ಆರ್. ಲೋಕೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಎಸ್. ಕಾಂತರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.

ಸ್ಥಳೀಯ ಮಾಜಿ ಸೈನಿಕ ವೆಂಕಟೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೈಸೂರಿನ ಬ್ರದರ್ಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಕೂಡಿಗೆ: ಕೂಡಿಗೆಯ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ 11ನೇ ವರ್ಷದ ಶ್ರೀ ಗೌರಿ-ಗಣೇಶೋತ್ಸವ ನಡೆಯಿತು.

ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನಡೆಸಿ, ಪೂಜಾ ವಿಧಿ-ವಿಧಾನಗಳನ್ನು ಅರ್ಚಕ ಚಂದ್ರಮುರುಳಿ ನೆರವೇರಿಸಿದರು. ಸಂಜೆ ಕುಶಾಲನಗರದ ರವಿ ಮೆಲೋಡಿಸಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಟಿ. ಪ್ರವೀಣ್, ಕಾರ್ಯದರ್ಶಿ ಪ್ರದೀಪ್ ಸೇರಿದಂತೆ ಗೌರವ ಅಧ್ಯಕ್ಷರು, ಸಮಿತಿಯ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಕೂಡಿಗೆ ಕೊಪ್ಪಲು: ಇಲ್ಲಿನ ವಿವೇಕಾನಂದ ಸಂಘದ ವತಿಯಿಂದ ಗಣೇಶೋತ್ಸವವನ್ನು ನಡೆಸಲಾಯಿತು. ಗಣಪನ ಮೂರ್ತಿಯನ್ನು ಕುಳ್ಳಿರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹಬ್ಬದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ರಸಮಂಜರಿ ಕುಶಾಲನಗರದ ಸತೀಶ್ ತಂಡದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನಂತರ ಪ್ರಸಾದ ವಿನಿಯೋಗ ನಡೆಯಿತು.

ವಿವೇಕಾನಂದ ಸಂಘದ ಅಧ್ಯಕ್ಷ ಕೆ.ಟಿ. ಗಿರೀಶ್, ಕಾರ್ಯದರ್ಶಿ ಕೆ.ಸಿ. ರವಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.

ಕೂಡಿಗೆ ಡೈರಿ: ಕೂಡಿಗೆ ಡೈರಿ ನೌಕರರ ವತಿಯಿಂದ ಡೈರಿ ಸಭಾಂಗಣದಲ್ಲಿ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭ ಕೂಡಿಗೆ ಡೈರಿಯ ವ್ಯವಸ್ಥಾಪಕ ನಂದೀಶ್, ಉಪವ್ಯವಸ್ಥಾಪಕರು, ಮಾರುಕಟ್ಟೆ ಅಧಿಕಾರಿಗಳು, ನೌಕರ ವೃಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕೂಡುಮಂಗಳೂರು ಸಾರ್ವಜನಿಕ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಕೂಡುಮಂಗಳೂರು ಸಮುದಾಯ ಭವನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಸಿ, ಪೂಜಾ ವಿಧಿ-ವಿಧಾನಗಳನ್ನು ನಡೆಸಲಾಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಿದ್ದಾಪುರ: ಸಮೀಪದ ನೆಲ್ಲಿಹುದಿಕೇರಿಯಲ್ಲಿ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿ ವತಿಯಿಂದ ನೆಲ್ಲಿಹುದಿಕೇರಿ ಸರಕಾರಿ ಶಾಲೆಯ ಸಮೀಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ವಿವಿಧ ಪೂಜೆಗಳನ್ನು ನಡೆಸಿದ ಭಕ್ತರು ನಂತರ ವಾದ್ಯ ಮೇಳಗಳೊಂದಿಗೆ ನೆಲ್ಲಿಹುದಿಕೇರಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಜೆ ಇಲ್ಲಿನ ಕಾವೇರಿ ನದಿಯಲ್ಲಿ ವಿರ್ಸಜಿಸಲಾಯಿತು.

*ಗೋಣಿಕೊಪ್ಪಲು: ಅರುವತ್ತೋಕ್ಲು ಮೈಸೂರಮ್ಮ ನಗರ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಹಾಗೂ ಹರಿಶ್ಚಂದ್ರಪುರ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಿತು.

ಮೈಸೂರಮ್ಮ ನಗರ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ 15ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ನಡೆಯಿತು. ರಾತ್ರಿ 10 ಗಂಟೆಗೆ ಬೆಳ್ಳಿ ರಥದ ಅಲಂಕೃತ ಮಂಟಪದಲ್ಲಿರಿಸಿ ಮೂರ್ತಿಯನ್ನು ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.

ಉಮಾಮಹೇಶ್ವರಿ ದೇವಸ್ಥಾನ ವತಿಯಿಂದ ಗಣೇಶ ಮೂರ್ತಿಯನ್ನು ಹರಿಶ್ಚಂದ್ರಪುರ ಕೆರೆಯಲ್ಲಿ ವಿಸರ್ಜಿಸಲಾಯಿತು. ರಾತ್ರಿ 9 ಗಂಟೆಗೆ ದೇವಸ್ಥಾನದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದವರೆಗೆ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮೈಸೂರಮ್ಮ ನಗರ ಸಮಿತಿ ಸದಸ್ಯರುಗಳಾದ ಕೀರ್ತಿ, ಗಣೇಶ್, ಶರತ್, ಗಿರೀಶ್, ಜೆನಿತ್ ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೆಪ್ಪುಡಿರ ತಮ್ಮು ದೇವಯ್ಯ, ಖಜಾಂಚಿ ಜಪ್ಪೆಕೊಡಿ ರಾಜಾ ಉತ್ತಪ್ಪ, ಸದಸ್ಯರುಗಳಾದ ಪ್ರಮೋದ್ ಗಣಪತಿ, ಕುಪ್ಪಿರ ಸನ್ನಿ ಸೋಮಯ್ಯ, ವ್ಯವಸ್ಥಾಪಕ ಹೆಚ್.ಆರ್. ಮಧು ಹಾಜರಿದ್ದರು.

ಶ್ರೀಮಂಗಲ: ಶ್ರೀಮಂಗಲದ ಶ್ರೀ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ತೃತೀಯ ವರ್ಷದ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ತಾ. 31 ರಂದು ಮೂರ್ತಿ ವಿಸರ್ಜನೆ ಮಾಡುವವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಭಾನುವಾರ ಸಂಜೆ ಸುಳ್ಯದ ಪ್ಯೂಶನ್ ಇನ್ಸಿಟ್ಯೂಟ್ ಆಫ್ ಸುಳ್ಯ ಅವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾಕೂರು ಶ್ರೀ ಬಸವೇಶ್ವರ ಯುವಕ ಸಂಘದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ನಂತರ ಸಾಮೂಹಿಕ ಅನ್ನದಾನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ, ಕಾರ್ಯದರ್ಶಿ ಚೋನೀರ ಕಾಳಯ್ಯ, ಖಜಾಂಚಿ ಐಪುಮಾಡ ಶಂಭು, ಉಸ್ತುವಾರಿ ಅಜ್ಜಮಾಡ ಸಿ. ಜಯಾ ಹಾಜರಿದ್ದರು.

ಮಾಯಮುಡಿ: ದಕ್ಷಿಣ ಕೊಡಗಿನ ಮಾಯಮುಡಿಯ ಕಂಗಳತ್ತು ಶ್ರೀ ರಾಮ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ತಾ. 31 ರಂದು ಅಪರಾಹ್ನ 3.30 ಗಂಟೆಗೆ ಅಲಂಕೃತ ಮಂಟಪದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಲಾಗುವದು. ಅಂದು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಕಾರ್ಯಕಾರಿ ಸಮಿತಿ ತಿಳಿಸಿದೆ.

ಕಾಲೂರು: ಇಲ್ಲಿನ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು.

ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಅರ್ಚಕ ನಾಗೇಶ್ ಕಾಲೂರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಕೂಡಿಗೆ: ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಗಣಪತಿಯ ವಿಗ್ರಹವನ್ನು ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಕೂಡಿಗೆ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಿ ಕಣಿವೆಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.