ಶ್ರೀಮಂಗಲ, ಆ. 30: ಪೊನ್ನಂಪೇಟೆಯ ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಆಶ್ರಯದಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಪೆÇಳ್ದ್ ಅನ್ನು ಸಾರ್ವಜನಿಕವಾಗಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಚರಣೆ ಮಾಡಲಾಗುವದು ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ಪೊನ್ನಂಪೇಟೆ ಗೋಲ್ಡನ್ ಗೇಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸೆಪ್ಟಂಬರ್ 3ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಈ ಹಬ್ಬದ ವಿಶೇಷತೆಯಂತೆ ಸಾಂಪ್ರದಾಯಿಕವಾಗಿ ಆಯುಧಪೂಜೆಯನ್ನು ‘ತೋಕ್ ಪೂ’ ತಂದು ಅಲಂಕರಿಸಿ ಮಾಡಲಾಗುವದು. ಪೂಜೆಯಲ್ಲಿ ಕೃಷಿ ಪರಿಕರಗಳಾದ ನೇಗಿಲು, ನೊಗ, ಕತ್ತಿ ಹಾಗೂ ಇನ್ನಿತರ ಪರಿಕರಗಳನ್ನು ಮತ್ತು ಕೋವಿಗಳನ್ನು ಇಟ್ಟು ಪೂಜಿಸಲಾಗುವದು. ವಾಹನವನ್ನು ಅಲಂಕರಿಸಿ ಪೂಜಿಸಿ ನಂತರ ಪೊನ್ನಂಪೇಟೆ ಕೊಡವ ಸಮಾಜದಿಂದ ಪೊನ್ನಂಪೇಟೆ ಬಸ್ ನಿಲ್ದಾಣದ ಮೂಲಕ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

ಕೊಡಗಿನ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಿ ಜನಾಂಗದಲ್ಲಿ ಸಾಮರಸ್ಯ ಹಾಗೂ ಒಗ್ಗಟ್ಟು ಮೂಡಿಸುವದರೊಂದಿಗೆ ಪರಸ್ಪರ ಒಂದೇ ವೇದಿಕೆಯಲ್ಲಿ ಬೆರೆಯಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೊಡಗಿನಲ್ಲಿ ಸ್ಥಳಿಯ ಹಬ್ಬ ಹರಿದಿನಗಳ ವೈಶಿಷ್ಟ್ಯತೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಹಾಗೂ ಅದರತ್ತ ಅಭಿಮಾನ ಮೂಡಿಸುವ ಪ್ರಯತ್ನ ಇದಾಗಿದೆ. ಈಗಾಗಲೇ ಕ್‍ಗ್ಗಟ್ಟ್‍ನ ನಾಡ್ ಹಿತರಕ್ಷಣ ಬಳಗದಿಂದ ಕಳೆದ 6 ವರ್ಷದಿಂದ ಕೊಡಗಿನ ವಿಶೇಷ ಹಬ್ಬವಾದ ‘ಕಕ್ಕಡ ಪದ್‍ನೆಟ್ಟ್’ ಅನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಉತ್ತಮ ಬೆಂಬಲವು ಸಹ ದೊರೆತಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಕೊಡಗು ಹಿತರಕ್ಷಣ ಬಳದ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಕೋಟೆರ ಕಿಶನ್ ಉತ್ತಪ್ಪ, ಚೆರಿಯಪಂಡ ರಾಜ ನಂಜಪ್ಪ, ಅಲೇಮಾಡ ನವೀನ್, ಚೆಕ್ಕೇರ ರಮೇಶ್, ಅಡ್ಡಂಡ ಸುನೀಲ್, ಅಜ್ಜಿಕುಟ್ಟಿರ ರಂಜಿ, ಎಂ.ಎಂ.ರವೀಂದ್ರ, ರಾಜೀವ್ ಬೋಪಯ್ಯ, ಮಲ್ಲಮಾಡ ಪ್ರಭು ಪೂಣಚ್ಚ ಮುಂತಾದವರು ಹಾಜರಿದ್ದರು.